ಕಾರ್ಕಳ: ಅಜೆಕಾರು ಕೊಲೆ ಪ್ರಕರಣ; ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು

ಕಾರ್ಕಳ: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ(44) ಕೊಲೆ ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆ(28)ಗೆ ರಾಜ್ಯ ಹೈಕೋರ್ಟ್ ಇಂದು ಜಾಮೀನು ನೀಡಿ ಆದೇಶಿಸಿದೆ. ದಿಲೀಪ್ ಹೆಗ್ಡೆ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಮಾ.4ರಂದು ತಿರಸ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆರೋಪಿ ದಿಲೀಪ್ […]
ಇಂದ್ರಾಳಿ ರೈಲ್ವೆ ಸ್ಟೇಷನ್ ನಲ್ಲಿರುವ ಸಾಂಪ್ರದಾಯಕ ತಿನಿಸುಗಳ ಮಳಿಗೆಗೆ ಜನ ಬೇಕಾಗಿದ್ದಾರೆ

ಉಡುಪಿ:ರೈಲ್ವೆ ಸ್ಟೇಷನ್ ಉಡುಪಿ ಇಲ್ಲಿಯ ಸಾಂಪ್ರದಾಯಿಕ ತಿನಿಸುಗಳ ಮಳೆಗೆಗೆ ತುಳು, ಕನ್ನಡ, ಹಿಂದಿ ಭಾಷೆ ತಿಳಿದಿರುವ ಪುರುಷ ಅಥವಾ ಮಹಿಳೆ ಬೇಕಾಗಿದ್ದಾರೆ. ಆಕರ್ಷಕ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುವುದು.ಸಂಪರ್ಕಿಸಿ:9741761153
ಉಡುಪಿ:ಸಾಹಿತಿ ಪ್ರಫುಲ್ಲ.ಕೆ.ವಿ ಅವರಿಗೆ ಪಿಎಚ್.ಡಿ ಪದವಿ

ಉಡುಪಿ: ಶ್ರೀಮತಿ ಪ್ರಫುಲ್ಲ.ಕೆ.ವಿ ಅವರು ಡಾ. ಉದಯಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಹಂಪಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ “ಯಕ್ಷಗಾನ ಅಧ್ಯಯನಗಳು: ತಾತ್ವಿಕ ಸ್ವರೂಪ ” ಎಂಬ ವಿಷಯದ ಸಂಶೋಧನಾ ಪ್ರೌಢ ಪ್ರಬಂಧವು ಪಿಯೆಚ್.ಡಿ.ಮಾನ್ಯತೆಯನ್ನು ಪಡೆದಿದೆ. ಗಮಕ ಕಲಾ ಪರಿಷತ್ತು ಉಡುಪಿ ತಾಲ್ಲೂಕು ಘಟಕದ ಕಾರ್ಯದರ್ಶಿಯಾಗಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿಯನ್ನು ಪಡೆದಿರುವ ಸಾಹಿತಿಯಾಗಿದ್ದಾರೆ. ಮೂಲತಃ ಕಾಸರಗೋಡಿನವರಾಗಿದ್ದು ಪ್ರಸ್ತುತ ಮಣಿಪಾಲದ ಕುಂಡೇಲು ಗಣಪತಿಭಟ್ ಅವರ ಧರ್ಮಪತ್ನಿ ಹಾಗೂ ಗೃಹಿಣಿಯಾಗಿದ್ದಾರೆ.
ಉಡುಪಿ:ದಶಮಾನೋತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆ; ಸಾಧಕರಿಗೆ ಸನ್ಮಾನ.

ಉಡುಪಿ:ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ : ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಮಯ 1997ರ ಕಲಂ 25 ರನ್ವಯ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಗೆ ಸೇರಿದ ಒಟ್ಟು 35 ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವರ್ಗ ಸಿ ದೇವಸ್ಥಾನಗಳ ವಿವರ: ಉಡುಪಿ ತಾಲೂಕಿನ ಉದ್ಯಾವರದ ದೇವಸ್ಥಾನಗಳಾದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನ, ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ […]