ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ“ ಯಕ್ಷಸಿಂಚನ” ತಂಡವು “ಯಕ್ಷೋತ್ಸವ 2025”ರಲ್ಲಿ ಎರಡನೇ ಸ್ಥಾನ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ ತಂಡವು ದಿನಾಂಕ 22 ಮತ್ತು 23 ಮಾರ್ಚ್ 2025 ರಂದು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜುಮಂಗಳೂರು, ಇಲ್ಲಿ ನಡೆದ “ಯಕ್ಷೋತ್ಸವ 2025”ಯಕ್ಷಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಗಳಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು. ನಮ್ಮವಿದ್ಯಾರ್ಥಿಗಳ ತಂಡವು “ಸುದರ್ಶನ ವಿಜಯ” ಎಂಬಪ್ರಸಂಗವನ್ನು ಈ ಸ್ಪರ್ಧೆಯಲ್ಲಿ ಯಕ್ಷ ಗುರುಗಳಾದಶ್ರೀ ರಾಕೇಶ್ ರೈ ಅಡ್ಕ ಇವರ ಮಾರ್ಗದರ್ಶನದಲ್ಲಿಪ್ರದರ್ಶಿಸಿದರು. ತೆಂಕುತಿಟ್ಟಿನ ಹೆಸರಾಂತ ಯಕ್ಷಗಾನಕಲಾವಿದರು […]

ಕುಂದಾಪುರ: ಎಂಐಟಿಕೆ ಯುವ-2025 ಫೆಸ್ಟ್ ಉದ್ಘಾಟನೆ.

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ವಿಭಾಗ ‘ಯುವ -2025’ ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಪೆಸ್ಟನ್ನು ಇತ್ತೀಚಿಗೆ ಆಯೋಜಿಸಿತು. ಅತ್ಯಂತ ಯಶಸ್ವಿಯಾಗಿ ನಡೆದ ಈ ಫೆಸ್ಟ್ ನ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ಟೇಲ್ತ್ ಪ್ರೊಡಕ್ಷನ್ ಸಂಸ್ಥಾಪಕರಾದ ನಿತಿನ್ ಹೆಗ್ಡೆರವರು ಆಗಮಿಸಿ ದೀಪ ಬೆಳಗಿಸಿ ಫೆಸ್ಟ್ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸ್ […]

ಉಡುಪಿ:ಮಾಸ್ಟರ್ ಡ್ರಾಮಾ ಆರ್ಟ್ಸ್ ಶಿರಿಬೀಡು ಇಲ್ಲಿ ಕಲಿಯುವ ಮುಗ್ಧ ಮನಸ್ಸುಗಳಿಗೆ ಸೂಕ್ತ ಅವಕಾಶಗಳು

ಉಡುಪಿ: ಮಾಸ್ಟರ್ ಡ್ರಾಮಾ ಆರ್ಟ್ಸ್ ಸಿರಿಬೀಡು ಉಡುಪಿ ಇವರ ವತಿಯಿಂದ ಮಕ್ಕಳಿಗಾಗಿ ಅನೇಕ ತರಗತಿಗಳು ಪ್ರಾರಂಭವಾಗಿದೆ. ವೆಸ್ಟರ್ನ್ ಡಾನ್ಸ್ ಕ್ಲಾಸ್, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಡ್ರಾಮಾ (Acting Class), ಕರೋಕೆ ಗಾಯನ, ಕೀಬೋರ್ಡ್ ಕ್ಲಾಸ್, ಚಿತ್ರಕಲೆ(Drawing Class), ತಬಲಾ, ಕೊಳಲು, ವಯಲಿನ್ ನಂತಹ ಉಪಯುಕ್ತವಾದ ತರಗತಿಗಳಿಂದ ಕಲಿಯುವ ಮಕ್ಕಳು ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ನೃತ್ಯದ ಬಾಡಿಗೆ ಡ್ರೆಸ್ ಮತ್ತು ಮೇಕಪ್ ಇಲ್ಲಿ ದೊರೆಯುತ್ತದೆ. ಸಮಯದ ಸದುಪಯೋಗ ಹಾಗೂ ಮಕ್ಕಳನ್ನು ತರಗತಿಗಳಿಗೆ ಕಳಿಸಿ ನೀವು ಕಾಯುವ ಸಮಯದಲ್ಲಿ […]

ಉಡುಪಿ:ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ: ಕರಾವಳಿ ಕರ್ನಾಟಕದ ಮೂತ್ರಪಿಂಡ ಆರೈಕೆಯಲ್ಲಿ ಮಹತ್ವದ ಮೈಲಿಗಲ್ಲು.

ಮಣಿಪಾಲ: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೂತ್ರಪಿಂಡ ಆರೈಕೆ ಸೇವೆಗಳನ್ನು ಬಲಪಡಿಸುವ ಮಹತ್ವದ ಕ್ರಮದಲ್ಲಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತನ್ನ ಹೊಸದಾಗಿ ನವೀಕರಿಸಿದ ಡಯಾಲಿಸಿಸ್ ಘಟಕವನ್ನು ಅನಾವರಣಗೊಳಿಸಿದೆ. ಡಾ ರಾಮದಾಸ್ ಪೈ ಬ್ಲಾಕ್‌ನಲ್ಲಿರುವ ಅತ್ಯಾಧುನಿಕ ಡಯಾಲಿಸಿಸ್ ಸೌಲಭ್ಯದ ಜೊತೆಗೆ, ವಿಸ್ತೃತ ಘಟಕವು ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಜ್ಜಾಗಿದೆ. ಕರ್ನಾಟಕದ ಜನರಿಗೆ, ವಿಶೇಷವಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ (ಸಿಕೆಡಿ) ಬಳಲುತ್ತಿರುವವರಿಗೆ ಉನ್ನತ-ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಆಸ್ಪತ್ರೆಯ ನಿರಂತರ ಬದ್ಧತೆಯಲ್ಲಿ ಇದು ಪ್ರಮುಖ ಮೈಲಿಗಲ್ಲು. ಮಣಿಪಾಲ ಅಕಾಡೆಮಿ ಆಫ್ ಹೈಯರ್ […]

ತನ್ನ ಪತ್ನಿಯನ್ನೇ ಪ್ರಿಯತಮನಿಗೆ ಕೊಟ್ಟು ಬಿಟ್ಟನು ಪತಿ.!

ಉತ್ತರ ಪ್ರದೇಶ: ಪತಿ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಮದುವೆ ಮಾಡಿ ಕೊಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ಸಂಗಾತಿಯನ್ನು ಬೇರೊಬ್ಬರ ಜತೆ ಹಂಚಿಕೊಳ್ಳಲು ಅಥವಾ ಬೇರೊಬ್ಬರಿಗೆ ಬಿಟ್ಟು ಕೊಡುವಂಥಾ ಮನೋಭಾವವಿರುವವರು ತುಂಬಾ ವಿರಳ. ಆದರೆ ಉತ್ತರ ಪ್ರದೇಶದ ಸಂತ ಕಬೀರ್​ ನಗರ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಬೇರೊಬ್ಬನ ಜತೆ ಸಂಬಂಧವಿರುವುದನ್ನು ಅರಿತು ಆಕೆಯನ್ನು ಇಷ್ಟಪಟ್ಟವನೊಂದಿಗೆ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾನೆ. ಪತ್ನಿಯನ್ನು ಪ್ರಿಯಕರನಿಗೆ ಬಿಟ್ಟುಕೊಡಲು ಪತಿ ನಿರ್ಧಾರ:ಬಬ್ಲೂ ಎಂಬ ವ್ಯಕ್ತಿ ತನ್ನ ಇಬ್ಬರು […]