ವಾಹನ ಖರೀದಿದಾರರಿಗೆ ಬಿಗ್ ಶಾಕ್: ಏಪ್ರಿಲ್ ನಿಂದ ವಾಹನಗಳ ದರದಲ್ಲಿ ಭಾರೀ ಏರಿಕೆ.!

ಬೆಂಗಳೂರು: ಏಪ್ರಿಲ್ ತಿಂಗಳಿಂದ ಹೊಸ ವಾಹನಗಳ ಬೆಲೆ ಪ್ರತಿ ವಾಹನದ ಮೇಲೆ ಶೇ.4ರಷ್ಟು ದರ ಏರಿಕೆಯಾಗಲಿದ್ದು, ತಯಾರಿಕಾ ಕಂಪನಿಗಳು ಹೊಸ ವಾಹನಗಳ ದರ ಏರಿಕೆ ಬಗ್ಗೆ ಮಾಹಿತಿ ನೀಡಿವೆ. ಎಲ್ಲಾ ವಾಹನ ತಯಾರಿಕಾ ಕಂಪನಿಗಳ ದರ ಏರಿಕೆ:ಉಕ್ಕಿನ ದರ ಹೆಚ್ಚಳ, ವಿದೇಶಿ ಅಮದು, ತಯಾರಿಕಾ ವೆಚ್ಚ ಹೆಚ್ಚಳವೇ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಇದೇ ಏಪ್ರಿಲ್‌ನಿಂದಲೇ ಕಾರು, ಬೈಕ್, ಆಟೋ ದರ 4%ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲಾ ವಾಹನ ತಯಾರಿಕಾ ಕಂಪನಿಗಳು ದರ ಏರಿಕೆ […]

ಉಡುಪಿ:ಬಿಸಿ ಗಾಳಿ ಶಾಖದ ರಕ್ಷಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

ಉಡುಪಿ: ಜಿಲ್ಲೆಯಲ್ಲಿ ದಿನೇ ದಿನೇ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚುತ್ತಿದೆ. ಸಾರ್ವಜನಿಕರು ಬಿಸಿಗಾಳಿಹಾಗೂ ಶಾಖದಿಂದ ತಮ್ಮ ದೇಹದ ಆರೋಗ್ಯ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಿ, ಉತ್ತಮ ಆರೋಗ್ಯ ಹೊಂದುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಬೇಸಿಗೆಯ ಪ್ರಸ್ತುತ ಮಾರ್ಚ್ ತಿಂಗಳಿನಲ್ಲಿಯೇ 39ಡಿಗ್ರಿ ಸೆಲ್ಸಿಯಶ್ […]

ಉಡುಪಿ:ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ (FCI) ಮೈಸೂರು ಹಾಗೂ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (IHM) ಬೆಂಗಳೂರು ಇವರ ಮೂಲಕ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗೆ ಸೇರಿದ 292 ಅಭ್ಯರ್ಥಿಗಳಿಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ವಸತಿ ಸಹಿತ ಕಾರ್ಯಕ್ರಮವನ್ನುಜಾರಿಗೊಳಿಸಲು ಉದ್ದೇಶಿಸಲಾಗಿರುತ್ತದೆ. ಮುಂದುವರೆದು ಮಲ್ಟಿ ಕ್ಯೂಸೈನ್ ಕುಕ್ ವಿಷಯದ ಎರಡನೇ ಹಂತದ ತರಬೇತಿಯು ಏಪ್ರಿಲ್ 15 […]

ಮಲ್ಪೆ ಘಟನೆಯ ಬಗ್ಗೆ ಅಪರಿಚಿತ ವ್ಯಕ್ತಿಯಿಂದ ಪ್ರಚೋದನಕಾರಿ ಆಡಿಯೋ ಕ್ಲಿಪ್; ಮೂರನೇ ಪ್ರಕರಣ ದಾಖಲು

ಮಲ್ಪೆ: ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್‌ನಲ್ಲಿ ಪ್ರಚೋದನಕಾರಿ ಆಡಿಯೋ ಕ್ಲಿಪ್ ಹಾಕಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ. ತುಳು ಭಾಷೆಯಲ್ಲಿರುವ ಈ ಆಡಿಯೋ ಕ್ಲಿಪ್‌ನಲ್ಲಿ, ಸೋಮವಾರ ಹೊಯಿತು, ಮಂಗಳವಾರ ಬಂತು. ಆದರೂ ಇದುವರೆಗೂ ನಮ್ಮ ಮೀನುಗಾರ ಹೆಂಗಸರು ಬರಲಿಲ್ಲ. ಬಿಡುಗಡೆ ಅಗಲಿಲ್ಲ. ಅದಕ್ಕೆ ನಮ್ಮ ಮೀನುಗಾರ ಸಂಘದವರು ಎಲ್ಲರು ಒಟ್ಟಾಗಿ ಗಂಗೊಳ್ಳಿಯಲ್ಲಿ ಅವರನ್ನು ಏನು ಮಾಡಿದ್ದಾರೆ, ಹಾಗೆಯೇ ಎಲ್ಲರೂ ಒಟ್ಟಾಗಿ […]

ಮಣಿಪಾಲದ MSDC ಯಲ್ಲಿ ಶುರುವಾಗಿದೆ ಹೊಸ ಕೋರ್ಸ್ BVOC in COSMETOLOGY:ವಿದೇಶದಲ್ಲಿಯೂ ಈ ಕೋರ್ಸ್ ಕಲಿತವರಿಗಿದೆ ಬೇಡಿಕೆ.

ಮಣಿಪಾಲ:ಮಣಿಪಾಲದ MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ BVOC in Cosmetology ಡಿಗ್ರಿ ಕೋರ್ಸ್ ಆರಂಭಗೊಂಡಿದ್ದು ಈ ಕೋರ್ಸ್ ವೃತ್ತಿಪರರಾಗಲು ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮುನ್ನಡೆಯಲು ಅವಕಾಶ ಕಲ್ಪಿಸುವ ಅದ್ಬುತ ಕೋರ್ಸ್ ಆಗಿದೆ. ಈ ಕೋರ್ಸ್ ಕಲಿತರೆ ವಿದೇಶದಲ್ಲಿಯೂ ಉದ್ಯೋಗ ಸಿಗಲಿದೆ. ಈ ಕೋರ್ಸ್ ಪಡೆದವರಿಗೆ ಶೇ.100 ಕೆಲಸದ ಸಹಾಯವನ್ನು MSDC ಮಾಡಲಿದೆ. ಶೇ.50 ರಷ್ಟು ಡಿಸ್ಕೌಂಟ್ ಕೂಡ ಈ ಕೋರ್ಸ್ ಗಿದೆ. ಅಂದ ಹಾಗೆ ಕೋರ್ಸ್ ಗೆ ರಿಜಿಷ್ಟರ್ ಆಗಲು ಮಾ.30 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ಯಾಕೆ […]