ಎಂ ಐ ಟಿ ಕುಂದಾಪುರ ಮತ್ತು ಸಿ ಡಬ್ಲ್ಯೂ ಸಿ ಒಡಂಬಡಿಕೆ

ಕುಂದಾಪುರ: ಎಂ ಐ ಟಿ ಕುಂದಾಪುರದ ಐಕ್ಯೂಎಸಿ ವಿಭಾಗವು ಕುಂದಾಪುರ ಮೂಲದ ಎನ್‌ಜಿಒ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್‌ನೊಂದಿಗೆ ಎಂಒಯುಗೆ ಸಹಿ ಹಾಕುವ ಮೂಲಕ ಸಹಯೋಗವನ್ನು ಪ್ರಾರಂಭಿಸಿದೆ. ಒಪ್ಪಂದದ ಪ್ರಕಾರ, ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಸುರಕ್ಷಿತ ಮತ್ತು ತಿಳುವಳಿಕೆಯುಳ್ಳ ಮಕ್ಕಳ ಸಮುದಾಯವನ್ನು ಸ್ಥಾಪಿಸಲು ಗ್ರಾಮ ಪಂಚಾಯತ್ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಎನ್‌ಜಿಒ ಜೊತೆ ಕೆಲಸ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಎಂ ಐ ಟಿ ಕುಂದಾಪುರದಲ್ಲಿ ಮಾರ್ಚ್ 25, 2025 […]

ಉಡುಪಿ:ಉದ್ಯಾವರದ ಮೆಡಿಕಲ್ ಸ್ಟೋರ್ ಗೆ ಸ್ಟಾಫ್ ಬೇಕಾಗಿದ್ದಾರೆ

ಉಡುಪಿ:ಉದ್ಯಾವರದ ಮೆಡಿಕಲ್ ಸ್ಟೋರ್ ಗೆ ಕೂಡಲೇ ಸ್ಟಾಫ್ ಬೇಕಾಗಿದ್ದಾರೆ. ಅನುಭವಿ / ಹೊಸಬರು ಅರ್ಜಿ ಸಲ್ಲಿಸಬಹುದು.ಕನಿಷ್ಠ ಪಿಯುಸಿ ಶಿಕ್ಷಣ ಹೊಂದಿರಬೇಕು. ಸಂಪರ್ಕಿಸಿ – 9901267017

ಮಾ.29ರಂದು MSDC ಸ್ಕೂಲ್ ಆಫ್ ಫ್ಯಾಷನ್ & ಇಂಟೀರಿಯರ್ ಡಿಸೈನಿಂಗ್ ನಲ್ಲಿ ‘Saree Box Folding & Draping’ ಕಾರ್ಯಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಡ್ರೀಮ್ ಜೋನ್ ‘ನ ಸ್ಕೂಲ್ ಆಫ್ ಫ್ಯಾಷನ್ & ಇಂಟೀರಿಯರ್ ಡಿಸೈನಿಂಗ್ ನಲ್ಲಿ ‘ಸಾರಿ ಬಾಕ್ಸ್ ಫೋಲ್ಡಿಂಗ್ & ಡ್ರಾಪಿಂಗ್ (Saree Box Folding & Draping) ಕಾರ್ಯಗಾರವು ಮಾ.29 (ಶನಿವಾರ) ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30ವರೆಗೆ ನಡೆಯಲಿದೆ. ಪರಿಪೂರ್ಣ ಸೀರೆ ಡ್ರಾಪಿಂಗ್‌ನ ರಹಸ್ಯಗಳನ್ನು ತಿಳಿದುಕೊಳ್ಳಬಹುದು. ಏನನ್ನು ನಿರೀಕ್ಷಿಸಬಹುದು?:▪ ಬಾಕ್ಸ್ ಮಡಿಸುವ ಮತ್ತು ಪ್ಲೆಟಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ.▪ಪ್ರಾಯೋಗಿಕ ಅಭ್ಯಾಸವನ್ನು ಪಡೆಯಿರಿ.▪ನಿಮ್ಮ ಸ್ವಂತ ಸುಂದರವಾಗಿ ಬಾಕ್ಸ್ […]

ಹೊಸದಿಲ್ಲಿ: ಅಗ್ನಿ ದುರಂತದ ವೇಳೆ ಭಾರೀ ಪ್ರಮಾಣದಲ್ಲಿ ನೋಟಿನ ಕಂತೆ ಪತ್ತೆ: ನ್ಯಾಯಾಧೀಶರ ಮನೆಗೆ ತನಿಖಾ ತಂಡ ಭೇಟಿ

ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮನೆಯಲ್ಲಿ ಸಂಭವಿಸಿದ ಬೆಂಕಿ ದುರಂತದ ವೇಳೆ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾದ ಪ್ರಕರಣದ ವಿಚಾರಣೆ ಚುರುಕುಗೊಂಡಿದ್ದು, ಭಾರತದ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನೇಮಕ ಮಾಡಿದ ತನಿಖಾ ತಂಡ ಮಂಗಳವಾರ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ತುಘಲಕ್ ಕ್ರೆಸೆಂಟ್ ಬಂಗಲೆಗೆ ಮಧ್ಯಾಹ್ನ ಭೇಟಿ ನೀಡಿದ ತಂಡ 45 ನಿಮಿಷಗಳ ಕಾಲ ಅಲ್ಲಿದ್ದು ಪರಿಶೀಲನೆ ನಡೆಸಿತು. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ ಮುಖ್ಯ […]

ಏಪ್ರಿಲ್ 1 ರಿಂದ ಹೆದ್ದಾರಿ ಟೋಲ್ ದರದಲ್ಲಿ ರಿಯಾಯಿತಿ: ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ಸರ್ಕಾರ ಏಪ್ರಿಲ್ 1 ರೊಳಗೆ ಹೊಸ ಟೋಲ್ ಸುಂಕ ಬಿಡುಗಡೆಗೊಳಿಸಲಿದ್ದು, ಇದರಿಂದ ವಾಹನ ಸವಾರರಿಗೆ ರಿಯಾಯಿತಿ ಸಿಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸುಂಕ ಕೇಂದ್ರದಲ್ಲಿ ಪ್ರಯಾಣಿಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಏ.1ರ ಒಳಗೆ ಹೊಸ ಟೋಲ್ ಸುಂಕ ನೀತಿಯನ್ನು ಬಿಡುಗಡೆಗೊಳಿಸಲಿದೆ. ಹೊಸ ನೀತಿಯಲ್ಲಿ ಪ್ರಯಾಣಿಕರಿಗೆ ಸ್ವಲ್ಪ ಪ್ರಮಾಣದ ರಿಯಾಯಿತಿ ದೊರೆಯಲಿದೆ. ಜೊತೆಗೆ ಸುಂಕ ವಸೂಲಿಯನ್ನೂ ಸರಳೀಕರಿಸಲಾಗಿದ್ದು, ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. […]