ಉಡುಪಿ:ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ : ನ್ಯಾ.ಯೋಗೇಶ್ ಪಿ.ಆರ್

ಉಡುಪಿ: ಉಡುಪಿ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಹೇಳಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ […]

ವಿದ್ಯಾರ್ಹತೆ, ಜವಾಬ್ದಾರಿ ಇಲ್ಲದೆ ಕೈ ತುಂಬಾ ಸಂಬಳ ಪಿಂಚಣಿ ಬೇಕಾ ಸಂಸತ್ತು ಎಸೆಂಬ್ಲಿ ಸದಸ್ಯರಾಗಿ ಬಿಡಿ.ಅಷ್ಟೇ ಸಾಕು:ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಸಾಮಾನ್ಯ ಒಬ್ಬ ಸರಕಾರಿ ನೌಕರನಾಗಬೇಕಾದರೆ ಒಂದು ಕನಿಷ್ಠ ವಿದ್ಯಾರ್ಹತೆ ಬೇಕೇ ಬೇಕು.ಸರಕಾರಿ ನೌಕರ ಅಂದ ಮೇಲೆ ಆತನಿಗೊಂದಿಷ್ಟು ಕೆಲಸದ ಜವಾಬ್ದಾರಿ ಶಿಸ್ತು ನಿಯಮ ಸಂಯಮಗಳ ಒಂದು ಚೌಕಟ್ಟುವಿರುತ್ತದೆ.ಆತನಿಗೆ ನೀಡುವ ಸಂಬಳವು ಅಷ್ಟೇ ಅವನ ವಿದ್ಯಾರ್ಹತೆ ಅನುಭವ ಸೇವಾ ಅವಧಿಯನ್ನು ಪರಿಗಣಿಸಿ ನಿರ್ಧರಿಸಲ್ಪಡುತ್ತದೆ.ಆತನ ನಿವೃತ್ತಿಯ ಅನಂತರದ ಪಿಂಚಣಿಯೂ ಅಷ್ಟೇ ಅದು ಕೂಡಾ ಆತನ ಸೇವಾ ಅವಧಿ ಮಾತ್ರವಲ್ಲ ಆತನಿಗೆ ಹೊಸ ಪಿಂಚಣಿ ಬೇಕಾ ಹಳೆ ಪಿಂಚಣಿ ಅನ್ನುವುದಕ್ಕೂ ಸರಕಾರದ ಕಾನೂನಿನ ಚೌಕಟ್ಟು ಇದೆ. ಒಂದು ವೇಳೆ ಸೇವಾ ನಿವೃತ್ತಿಯಾದ […]

ಉಡುಪಿ: ಆಯುರ್ವೇದ ವೈದ್ಯರು ಬೇಕಾಗಿದ್ದಾರೆ

ಉಡುಪಿ: ನಗರದ ಪ್ರತಿಷ್ಠಿತ ಹಿರಿಯ ಆಯುರ್ವೇದ ಔಷಧ ತಯಾರಿಕಾ ಘಟಕವಾದ ಸ್ವದೇಶಿ ಔಷದ ಭಂಡಾರ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಪ್ರೊಡಕ್ಷನ್ ಇಂಚಾರ್ಜ್ ಹುದ್ದೆಗೆ ಮಹಿಳಾ ಆಯುರ್ವೇದ ವೈದ್ಯರು ಬೇಕಾಗಿದ್ದಾರೆ. BAMS ವಿದ್ಯಾರ್ಹತೆ ಹೊಂದಿರಬೇಕು. PF, ESI ಸೌಲಭ್ಯವಿದೆ. ಉಡುಪಿ ಬ್ರಹ್ಮಾವರ ಆಸುಪಾಸಿನವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880029841, 9845151070

ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಸಂಸ್ಥೆ ಮಣಿಪಾಲ: ಶ್ರೀಮತಿ ಸೌಜನ್ಯಾ ಶೆಟ್ಟಿ ಅವರೊಂದಿಗೆ ಸಂವಾದ, ವಿಚಾರ ಸಂಕಿರಣ.

ಮಣಿಪಾಲ: ಮಣಿಪಾಲದ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಸಂಸ್ಥೆಯ ಆಶ್ರಯದಲ್ಲಿ ಅಲ್ಲಿನ ಪ್ರಶಿಕ್ಷಣಾರ್ಥಿ ಗಳೊಂದಿಗೆ ಉಡುಪಿಯ ಪ್ರತಿಷ್ಠಿತ ಶ್ರೀ ಎ. ವಿ. ಬಾಳಿಗಾ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯಾ ಶೆಟ್ಟಿ ಅವರು ” ಮಕ್ಕಳ ಮನಸ್ಸಿನ ಭಾವನಾತ್ಮಕ ಸ್ವಾಸ್ಥ್ಯದ ಅಗತ್ಯತೆ”ಯ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಶಿಕ್ಷಕರು ಮಕ್ಕಳ ನಡೆನುಡಿಯಲ್ಲಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವರ ಪೂರ್ಣಪ್ರಮಾಣದ ವ್ಯಕ್ತಿತ್ವವನ್ನು ಬೆಳೆಸಲು ಸಹಕರಿಸಬೇಕು ಎಂದು ತಿಳಿಹೇಳಿದರು. ಅವರ ಮನಸ್ಸು ಎಷ್ಟು ಸೂಕ್ಷ್ಮ ಅಲ್ಲದೇ ನಾವು […]

ಉಡುಪಿ ಎಸ್ಪಿ ಅವರಿಂದ ತಾರತಮ್ಯ :ಬಿಜೆಪಿ ಶ್ರೀನಿಧಿ ಹೆಗ್ಡೆ ಆರೋಪ

ಉಡುಪಿ: ಮಲ್ಪೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ದಾಖಲಾದ ಪ್ರಕರಣದಲ್ಲಿ ಬಂಧಿತರ ಪೋಟೊವನ್ನು ತರಾತುರಿಯಲ್ಲಿ ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಉಡುಪಿ ಎಸ್ಪಿ ಅವರು ಮಣಿಪಾಲದಲ್ಲಿ ಕಾರಿಗೆ ಗುದ್ದಿ ಪೋಲಿಸರಿಂದ ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತರಾದ ಇಸಾಕ್‌ನ ಗೆಳತಿ, ಆಕೆಯ ತಾಯಿಯ ಪೋಟೊವನ್ನು ಮಾಧ್ಯಮಕ್ಕೆ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಹೈಕೋರ್ಟ್ ವಕೀಲ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ. ಎಲ್ಲಾ ಪ್ರಕರಣದಲ್ಲಿಯೂ ಆರೋಪಿಗಳ ಪೋಟೊವನ್ನು ಮಾಧ್ಯಮಕ್ಕೆ ನೀಡದೇ, ಉದ್ದೇಶಪೂರ್ವಕವಾಗಿ ಅಮಾಯಕ ಮೀನುಗಾರ ಮಹಿಳೆಯವರ ಪೋಟೊವನ್ನು ಮಾಧ್ಯಮಕ್ಕೆ […]