ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣ; ತಪ್ಪಿತಸ್ಥರ ವಿರುದ್ಧ, ಕೃತ್ಯವನ್ನು ಸಮರ್ಥಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣದ ಎಲ್ಲ ತಪ್ಪಿತಸ್ಥರ ವಿರುದ್ಧ ಹಾಗೂ ಈ ಹೇಯ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಪ್ರಜ್ಞಾವಂತ ಸಮಾಜ ಅವಕಾಶ ನೀಡಬಾರದು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆಗ್ರಹಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅವರು, ಮಲ್ಪೆ ಬಂದರು […]

ಉಡುಪಿ: ಡಿಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಕಿಡಿ

ಉಡುಪಿ: ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿಯನ್ನು ನೀಡುವುದಕ್ಕಾಗಿ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದ ಡಿಕೆ ಶಿವಕುಮಾ‌ರ್ ಮಾತು ಅತ್ಯಂತ ದುರದೃಷ್ಟಕರ. ಈ ಹೇಳಿಕೆ ಆಘಾತಕಾರಿ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಹಿಂದೆ ಸಿದ್ದರಾಮಯ್ಯನವರು ಸಂವಿಧಾನ ಬದಲಿಸಿದರೆ ರಕ್ತಪಾತ ಆಗುತ್ತೆ ಎಂದಿದ್ದರು. ಈಗ ಅವರದೇ ಪಕ್ಷದ ಡಿಕೆ ಶಿವಕುಮಾ‌ರ್ ಮುಸಲ್ಮಾನರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಗೊತ್ತಾಗುತ್ತದೆ ಇವರ ಹಿಂದುಳಿದ ಮತ್ತು […]

ಕರ್ಣಾಟಕ ಬ್ಯಾಂಕ್ ಕಡ್ತಲ (ವಿತ್ತೀಯ) ಶಾಖೆಯ ಉದ್ಘಾಟನೆ

ಉಡುಪಿ: ದೇಶದ ಹೆಸರಾಂತ ಖಾಸಗಿ ಬ್ಯಾಂಕ್ ತನ್ನ 956 ನೇ ಶಾಖೆಯನ್ನು ಕಡ್ತಲದ ಕುಂಜೆಕ್ಯಾರ್ ಕಾಂಪ್ಲೆಕ್ಸ್, ಹಿರಿಯಡ್ಕ – ಅಜೆಕಾರು ರಸ್ತೆ, ಕಡ್ತಲ ಗ್ರಾಮ, ಕಾರ್ಕಳ ತಾಲೂಕಿನಲ್ಲಿ ಮಾರ್ಚ್ 27, 2025 ತಮ್ಮ ದೈನಂದಿನ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಈ ಹೊಸ ಶಾಖೆ ಕಡ್ತಲ ಹಾಗೂ ಹತ್ತಿರದ ಹಲವಾರು ಹಳ್ಳಿಯ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಮತ್ತು ಪ್ರಭಾವಶಾಲಿಯಾಗಿ ದೊರಕಿಸಲು ಸಜ್ಜಾಗಿದೆ. ಗ್ರಾಹಕರಿಗಾಗಿ ಈ ಶಾಖೆಯಲ್ಲಿ ಸಾಲ, ಠೇವಣಿ ಮತ್ತು ಇತರ ಎಲ್ಲಾ ಪ್ರಧಾನ ಬ್ಯಾಂಕಿಂಗ್ ಸೇವೆಗಳು […]

18 ಬಿಜೆಪಿ‌ ಶಾಸಕರ ಅಮಾನತು ಪೂರ್ವಯೋಜಿತ: ಶಾಸಕ ಸುನಿಲ್ ಕುಮಾರ್

ಉಡುಪಿ: ಸ್ಪೀಕರ್ ಯು.ಟಿ. ಖಾದರ್ ಅವರು ಬಿಜೆಪಿಯ ಹದಿನೆಂಟು ಮಂದಿ ಶಾಸಕರನ್ನು ಅಮಾನತು ಮಾಡಿರುವುದು ಪೂರ್ವಯೋಜಿತ. ಸರಕಾರ, ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಈ ನಿರ್ಣಯ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಬಿಜೆಪಿ ಶಾಸಕ ಸುನಿಲ್‌ ಕುಮಾರ್ ಹೇಳಿದ್ದಾರೆ. ಶಾಸಕರನ್ನು ಅಮಾನತು ಮಾಡುವ ಒಂದು ವಾರದ ಮೊದಲೇ ಬಿಜೆಪಿ ಶಾಸಕರನ್ನು ಎತ್ತಿ ಬಿಸಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಶಾಸಕರ ಅಮಾನತು ನಿರ್ಣಯ ಪೂರ್ವಯೋಜಿತ ಎಂಬ ಅನುಮಾನ ಬರುತ್ತಿದೆ. ತಕ್ಷಣ ಈ ಅಮಾನತು ಆದೇಶವನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ಅವರು […]

ಮಲ್ಪೆ: ಮಹಿಳೆಯ ಮೊಬೈಲ್, ನಗದು ಕಳವು; ಆರೋಪಿಯ ಬಂಧನ

ಉಡುಪಿ: ಮೋಟಾ‌ರ್ ಸೈಕಲ್ ನಲ್ಲಿ ಬಂದು ಸರಸ್ವತಿ (21) ಎಂಬ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಹಾಗೂ 2500 ರೂ. ನಗದು ಕಸಿದುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಕುಮಾರ್‌ ತೊಟ್ಟಂ ಬಂಧಿತ ಆರೋಪಿ.ಈತ ಸರಸ್ವತಿ ಎಂಬ ಮಹಿಳೆ, ಕೆಳಾರ್ಕಳಬೆಟ್ಟು- ಸಂತೆಕಟ್ಟೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದು ಕೃತ್ಯ ಎಸಗಿದ್ದ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಮಾರು 13,000 ಸಾವಿರ ಬೆಲೆಯ ಮೊಬೈಲ್ ಹಾಗೂ ರೂ. 2,500 ನಗದನ್ನು ವಶಕ್ಕೆ ಪಡೆದಿದ್ದಾರೆ. ಮಲ್ಪೆ […]