ಕನಕಪುರ:ಮಗು ಹಠ ಮಾಡುತ್ತೆಂದು ಕೈಗೆ ಬರೆ, ಡೈಪರ್​ಗೆ ಖಾರದಪುಡಿ ಹಾಕಿ ವಿಕೃತಿ ಮೆರೆದ ಅಂಗನವಾಡಿ ಸಹಾಯಕಿ: ದೂರು ದಾಖಲು

ರಾಮನಗರ: ಅಂಗನವಾಡಿ ಸಹಾಯಕಿಯೊಬ್ಬರು ಮಗುವಿನ ಕೈಗೆ ಬರೆ ಎಳೆದು, ಡೈಪರ್‌ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಹರಾಜರಕಟ್ಟೆ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಮಹರಾಜಕಟ್ಟೆ ಗ್ರಾಮದ ರಮೇಶ್ ಹಾಗೂ ಚೈತ್ರಾ ಎಂಬುವವರ ಮಗು ದೀಕ್ಷಿತ್​​ ಮೇಲೆ ಅಂಗನವಾಡಿ ಸಹಾಯಕಿ ಈ ವಿಕೃತಿ ಮೆರೆದಿದ್ದಾಳೆ. ಘಟನೆ ಸಂಬಂಧ ಅಂಗನವಾಡಿ ಸಹಾಯಕಿ ಚಂದ್ರಮ್ಮ ಎಂಬವರ ಮೇಲೆ ಮಗುವಿನ ಪೋಷಕರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬೆನ್ನಲ್ಲೇ ಚಂದ್ರಮ್ಮನನ್ನು ಅಮಾನತು ಮಾಡಲಾಗಿದೆ […]

ಉಡುಪಿ:’ಇನ್ನು ಇಲ್ಲಿ ಕೆಲಸ ಮಾಡುವುದು ಕಷ್ಟ, ಊರಿಗೆ ಹೋಗುತ್ತೇನೆ”: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಹಲ್ಲೆಗೊಳಗಾದ ಸಂತ್ರಸ್ತೆ

ಮಲ್ಪೆ: ‘ಅವತ್ತು ನಾನು ಸ್ವಲ್ಪ ಮೀನು ತೆಗೆದಿದ್ದೆ. ಅದಕ್ಕೆ ಅವರು ಮೀನು ಕದ್ದಿದಾಳೆ ಎಂದು ಹೇಳಿ ನನಗೆ ಹಲ್ಲೆ ಮಾಡಿದರು. ಈ ಘಟನೆ ನಡೆದ ಬಳಿಕ ನಾನು ಬಂದರಿಗೆ ಹೋಗಿಲ್ಲ. ಇನ್ನು ಇಲ್ಲಿ ಕೆಲಸ ಮಾಡುವುದು ಕಷ್ಟ. ಅದಕ್ಕೆ ನಾನು ಊರಿಗೆ ಹೋಗುತ್ತೇನೆ’ ಇದು ಮಲ್ಪೆ ಬಂದರಿನಲ್ಲಿ ಮಾ.18ರಂದು ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣದ ಸಂತ್ರಸ್ತೆ ಲಕ್ಕೀಬಾಯಿ ಅವರ ಹೇಳಿಕೆ. ಮಲ್ಪೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಅವರ ಮೇಲೆ ಯಾವುದೇ […]

ಮಂಗಳೂರು:ಯುಗಾದಿ, ರಮ್ಜಾನ್ ಪ್ರಯುಕ್ತ ಮೈಸೂರು-ಕಾರವಾರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

ಮಂಗಳೂರು: ಮುಂದಿನ ಯುಗಾದಿ ಮತ್ತು ರಮಝಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರು ಮತ್ತು ಕಾರವಾರ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ವಿಶೇಷ ರೈಲು ಸೇವೆಯ ವಿವರಗಳು: ರೈಲು ಸಂಖ್ಯೆ 06203 ಮೈಸೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾ.28ರಂದು ರಾತ್ರಿ 9:35ಕ್ಕೆ ಮೈಸೂರಿನಿಂದ ಹೊರಟು ಮರುದಿನ ಸಂಜೆ 4:15ಕ್ಕೆ ಕಾರವಾರ ತಲುಪಲಿದೆ. ಪುನಃ ಇದೇ ರೈಲು (06204) ಮಾ.29ರಂದು ರಾತ್ರಿ 11:30ಕ್ಕೆ ಕಾರವಾರದಿಂದ ಹೊರಟು […]

ಶ್ರೀ ಕ್ಷೇತ್ರ ಶಂಕರಪುರ : ಉಚಿತ ಚಿನ್ನದ ಮೂಗುತಿ ಕಾರ್ಯಕ್ರಮದ ಮಾಹಿತಿ ಪತ್ರ ಬಿಡುಗಡೆ

ಶಿರ್ವ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ, ಕಾಲಭೈರವ ದೇವಸ್ಥಾನ ವತಿಯಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಲ್ಲಿ 2025 ನವರಾತ್ರಿಯಂದು ನಡೆಯುವ ಉಚಿತ ಚಿನ್ನದ ಮೂಗುತಿ ಕಾರ್ಯಕ್ರಮದ ಮಾಹಿತಿ ಪತ್ರ ವೀಣಾ ಶೆಟ್ಟಿ ಹಾಗೂ 5 ಕನ್ಯೆಯರಿಂದ ಕ್ಷೇತ್ರದಲ್ಲಿ ಬಿಡುಗಡೆಯಾಯಿತು. ಸನಾತನ ಹಿಂದೂ ಧರ್ಮದ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಹೆಣ್ಣು ಮಕ್ಕಳ ಭಾಗ್ಯೋದಯದ ಬೆಳಕು ಶ್ರೀ ಸೌಭಾಗ್ಯ ಕಾರ್ಯಕ್ರಮದಡಿಯಲ್ಲಿ 9 ರಿಂದ 19 ವರ್ಷದ 1008 ಹೆಣ್ಣು ಮಕ್ಕಳಿಗೆ ಉಚಿತ […]

ಕೋಲ್ಕತಾ:IPL 2025: ಇಂದಿನಿಂದ 18ನೇ ಆವೃತ್ತಿಯ ಟಿ20 ಲೀಗ್‌ ಐಪಿಎಲ್‌ ಹವಾ ಆರಂಭ

ಕೋಲ್ಕತಾ: ಜಾಗತಿಕ ಕ್ರಿಕೆಟಿನ ಅತ್ಯಂತ ಶ್ರೀಮಂತ ಹಾಗೂ ಅತ್ಯಧಿಕ ಮಂದಿ ವೀಕ್ಷಿಸುವ ಟಿ20 ಲೀಗ್‌ ಐಪಿಎಲ್‌ಗೆ ಈಗ ಹದಿನೆಂಟರ ನಂಟು. ಇದರ ಹವಾ ಈಗಾಗಲೇ ಬೀಸಲಾರಂಭಿಸಿದ್ದು, ಶನಿವಾರದಿಂದ ತೀವ್ರಗೊಳ್ಳಲಿದೆ. 2025ರ ಆವೃತ್ತಿಗೆ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ಚಾಲನೆ ಲಭಿಸಲಿದೆ. ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ ಮತ್ತು ಇನ್ನೂ ಕಪ್‌ ಗೆಲ್ಲದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಗಳು ಆರಂಭಿಕ ಪಂದ್ಯದಲ್ಲಿ ಮುಖಾಮುಖೀ ಆಗಲಿವೆ. ಎಂದಿನಂತೆ ಇದು ಎರಡು ತಿಂಗಳ ಸುದೀರ್ಘ‌ ಕ್ರಿಕೆಟ್‌ ಜಾತ್ರೆ. ಈ ಬಾರಿ 65 ದಿನಗಳ […]