ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭ

ಉಡುಪಿ: ಮೈಂಡ್ ಕ್ರಿಯೇಟಿವ್ ಸ್ಕೂಲ್ AISECT ಗ್ರೂಪ್ ಆಫ್ ಯುನಿವರ್ಸಿಟೀಸ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಗ್ರಾಫಿಕ್ಸ್, ಅನಿಮೇಷನ್, ಇಂಟೀರಿಯರ್ ಡಿಸೈನಿಂಗ್, ಫ್ಯಾಷನ್ ಡಿಸೈನಿಂಗ್, ವೆಬ್ ಡಿಸೈನಿಂಗ್ ಮತ್ತು ಡೆವಲಪ್ಮೆಂಟ್ ಇತ್ಯಾದಿ 3 ತಿಂಗಳಿನಿಂದ ಒಂದೂವರೆ ವರ್ಷದ ಕೋರ್ಸ್‌ಗಳನ್ನು ನಡೆಸುತ್ತಿದೆ. ಇದರೊಂದಿಗೆ ಶೇ. 100ರಷ್ಟು ಉದ್ಯೋಗ ಅವಕಾಶವನ್ನು ಒದಗಿಸಲಾಗಿಸುತ್ತಿದೆ. SCOPE GLOBAL UNIVERSITY ನಿಂದ ಕೌಶಲ್ಯ ಮತ್ತು ಡಿಪ್ಲೊಮಾ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಉದ್ಯೋಗ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ “ರೋಜ್‌ಗರ್ ಮಂತ್ರ” ಎಂಬ ಉದ್ಯೋಗ ಪೋರ್ಟಲ್‌ ನೊಂದಿಗೆ ಒಪ್ಪಂದ […]

ತೆಕ್ಕಟ್ಟೆಯ ಉಳ್ತೂರು ಭಾಗದಲ್ಲಿ ಮತ್ತೆ ಚಿರತೆಗಳ ಓಡಾಟ; ಸ್ಥಳೀಯರಲ್ಲಿ ಆತಂಕ

ಉಡುಪಿ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಭಾಗದಲ್ಲಿ ಮತ್ತೆ ಚಿರತೆಗಳ ಓಡಾಟ ಜೋರಾಗಿದೆ. ಗುರುವಾರ ತಡರಾತ್ರಿ ಉಳ್ತೂರು ರಸ್ತೆಯಲ್ಲಿ ಸಂಚರಿಸುತ್ತಾ ಕಾರಿನ ಡ್ಯಾಶ್ ಕ್ಯಾಮರದಲ್ಲಿ ಚಿರತೆ ಸಂಚಾರ ಸೆರೆಯಾಗಿದೆ. ತೆಕ್ಕಟ್ಟೆಯ ಉಳ್ತೂರು ಪರಿಸರದಲ್ಲಿ ಈ ಮೊದಲಿನಿಂದಲೂ ಚಿರತೆ ಹಾವಳಿ ಅವ್ಯಾಹತವಾಗಿತ್ತು, ಸಾಕಷ್ಟು ಸಾಕು ಪ್ರಾಣಿಗಳ ಧಾಳಿ ನಡೆಸಿ ಹಾನಿ ಮಾಡಿದ ಘಟನೆಗಳು ನಡೆದಿದ್ದವು. ಸದ್ಯ ಮತ್ತೆ ಚಿರತೆಗಳ ಓಡಾಟ ಜೋರಾಗಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ. ತಡರಾತ್ರಿ ಉಳ್ತೂರು ಭಾಗದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಚಿರತೆಯೊಂದು ರಸ್ತೆ ದಾಟುತ್ತಿರುವುದು ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ […]

ಮಾ.23ರಂದು ‘ಗಾಂಧಿ ಭಾರತ’ ಬೃಹತ್ ಸಮಾವೇಶ

ಉಡುಪಿ: ಉಡುಪಿಯ ಸಮನ ಮನಸ್ಕ ಸಂಘಟನೆಯ ನೇತೃತ್ವದಲ್ಲಿ ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಹಯೋಗದೊಂದಿಗೆ ‘ಜೈ ಭಾಪು ಜೈ ಭೀಮ್ ಜೈ ಸಂವಿಧಾನ’ ಅಭಿಯಾನದ ಅಂಗವಾಗಿ ‘ಗಾಂಧಿ ಭಾರತ’ ಬೃಹತ್ ಸಮಾವೇಶವನ್ನು ಇದೇ ಮಾ.23ರಂದು ಸಂಜೆ 4ಗಂಟೆಗೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ತಿಳಿಸಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3.30ಕ್ಕೆ ನಗರದ ಕೆ.ಎಂ. ಮಾರ್ಗದಲ್ಲಿರುವ ನಿತ್ಯಾನಂದ ಮಂದಿರದಲ್ಲಿ ಮೆರವಣಿಗೆಗೆ […]

ನಾಳೆ (ಮಾ.22) ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ; ಎಂದಿನಂತೆ ರಾಜ್ಯಾದ್ಯಂತ ಖಾಸಗಿ ಬಸ್ ಗಳ ಸಂಚಾರ

ಉಡುಪಿ: ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಮಾ.22ರಂದು ನಡೆಯಲಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಸಂಘ ನೈತಿಕ ಬೆಂಬಲ ನೀಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎಂದಿನಂತೆ ಬಸ್ ಗಳು ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಕ್ಕೆ ಅನ್ಯಾಯವಾದಾಗ ಖಾಸಗಿ ಬಸ್ ಮಾಲಕರು ಒಟ್ಟಿಗೆ ಇದ್ದೇವೆ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗುವುದರಿಂದ ಯಾವುದೇ […]

ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದದ್ದನ್ನು ಸಮರ್ಥಿಸಲು ಸಾಧ್ಯವಿಲ್ಲ; ಜಯಪ್ರಕಾಶ್ ಹೆಗ್ಡೆ

ಉಡುಪಿ: ಮರಕ್ಕೆ ಕಟ್ಟಿ ಹಾಕಿ ಹೊಡೆದದ್ದು ತಪ್ಪು. ಅದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಮೀನು ಕದ್ದ ಮಹಿಳೆಯನ್ನು ಹಿಡಿದು ಪೊಲೀಸರಿಗೆ ಕೊಡಬೇಕಿತ್ತು. ಅದನ್ನು ಬಿಟ್ಟು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನು ಕೇಸು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಕೇಸು ದಾಖಲಾಗಿದೆ. ಇನ್ನೂ ತೀರ್ಮಾನ ಕೋರ್ಟಿನಲ್ಲಿ ಆಗಬೇಕು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವಿಡಿಯೋ ವೈರಲ್ […]