ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ಮಾ.20 ರಿಂದ ಮಾ.23ರ ವರೆಗೆ ವರ್ಣೋತ್ಸವ-2025, ವಾರ್ಷಿಕ ಸಂಭ್ರಮ, ಗಣ್ಯರ ಸಮಾಗಮ.

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024-25ನೇ ಸಾಲಿನ ವರ್ಣೋತ್ಸವ–2025 ಮತ್ತು ವಾರ್ಷಿಕ ಸಮಾರಂಭವು ಮಾರ್ಚ್ 20 ರಿಂದ ಮಾರ್ಚ್ 23ವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸೋದೆ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್ ಅವರು ಹೇಳಿದರು. ಅವರು ಮಾ.19 ರಂದು ಕಾಲೇಜಿನ ಸಭಾ ಭವನದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಮಾರ್ಚ್ 20ರಂದು ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಿಗ್ಗೆ 9-30ಕ್ಕೆ ನಡೆಯಲಿದ್ದು, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ […]
ಗಗನಯಾತ್ರಿ ಸುನೀತಾ ವಿಲಿಯಮ್ಸ್ ಗೆ ಶುಭಕೋರಿ ವಿಶಿಷ್ಟ ಕಲಾಕೃತಿ ರಚನೆ

ಉಡುಪಿ:9 ತಿಂಗಳು ಅಂತರಿಕ್ಷದಲ್ಲಿ ಸಾವು ಬದುಕಿನ ಹೋರಾಟ ಮಾಡಿ ಮತ್ತೆ ಭೂಮಿಗೆ ಬಂದ ಭಾರತ ಮೂಲದ ಸುನೀತಾ ವಿಲಿಯಮ್ಸ್ ಅವರಿಗೆ ಶುಭಕೋರಿ ಉಡುಪಿಯ ಕಲಾವಿದರೊಬ್ಬರು ವಿಶಿಷ್ಟ ಕಲಾಕೃತಿ ರಚಿಸಿದ್ದಾರೆ. ಅಶ್ವಥದ ಎಲೆಯ ಮೇಲೆ ಅಪರೂಪದ ಚಿತ್ರ ಮೂಡಿಸುವ ಮಹೇಶ್ ಮರ್ಣೆ ತಮ್ಮದೇ ವಿಭಿನ್ನ ರೀತಿಯಲ್ಲಿ ಅವರಿಗೆ ಶುಭಕೋರಿದ್ದಾರೆ. ಅಶ್ವತದ ಎಲೆಯಲ್ಲಿ ಸುನೀತಾ ವಿಲಿಯಮ್ಸ್ ಅವರ ನಗುಮುಖ ಭಾವವನ್ನು ಮೂಡಿಸಿ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.
ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ: ಮಾ.27 ರಿಂದ ಎ.7ರ ವರೆಗೆ ಬ್ರಹ್ಮಕಲಶೋತ್ಸವ ವೈಭವ.

ಕಾಸರಗೋಡು: ಮಧೂರಿನ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಳ್ಳುತ್ತಿದೆ. ಇದೇ 27ರಿಂದ ಏ.7ವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ.ಈ ಅವಧಿಯಲ್ಲಿ ಅಪರೂಪದ ‘ಮೂಡಪ್ಪ ಸೇವೆ’ ನಡೆಯಲಿದೆ. ಶಿವಪ್ರಸಾದ್ ತಂತ್ರಿ ದೇರೆಬೈಲು ಬ್ರಹ್ಮಕಲಶೋತ್ಸವ ಮತ್ತು ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಮೂಡಪ್ಪ ಸೇವೆಯ ನೇತೃತ್ವ ವಹಿಸಲಿದ್ದಾರೆ. ನೂತನ ಮಹಾದ್ವಾರ, ರಾಜಗೋಪುರ ಮತ್ತು ರಾಜಾಂಗಣ ಲೋಕಾರ್ಪಣೆ ಹಾಗೂ ದೇವಾಲಯದ ಆವರಣದಲ್ಲಿ ದಿನಕ್ಕೆ ಎರಡು ಧಾರ್ಮಿಕ ಸಭೆಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ತಾಳಮದ್ದಲೆ, ಹರಿಕಥೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು […]
ಉಡುಪಿಯ ಡಿಸೈನ್ ಕೋಡ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ :ಉಡುಪಿಯ ಡಿಸೈನ್ ಕೋಡ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು:▪ 3D ವಿಶುವಲೈಸರ್ (ದೃಶ್ಯೀಕರಣಕಾರ) ಮತ್ತು 3D ಡ್ರಾಫ್ಟರ್ ಕೌಶಲ್ಯಗಳು :-3D ಮ್ಯಾಕ್ಸ್, 2D ಆಟೋಕ್ಯಾಡ್, ಸ್ಕೆಚ್‌ಅಪ್ 3 ರಿಂದ 4 ವರ್ಷಗಳ ಅನುಭವವಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞+917259868598📩[email protected] 🌐www.dezigncode.in 📍680/A, MFN ಸ್ಕ್ವೇರ್, 9ನೇ ಮುಖ್ಯ ರಸ್ತೆ, 7ನೇ ಸೆಕ್ಟರ್, HSR ಲೇಔಟ್, ಬೆಂಗಳೂರು, ಕರ್ನಾಟಕ-560102
ಮೀನು ಕದ್ದ ಆರೋಪ ಕಾರಣಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದು ಅಮಾನವೀಯ ವರ್ತನೆ- ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲೀಯೋ ಹೇಳಿಕೆ

ಉಡುಪಿ:ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನವೀಯ ವರ್ತನೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ನಡೆದಿದ್ದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲೀಯೋ ಖಂಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ನಾಲ್ವರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದು ಇದರ ಜೊತೆಗೆ ಒರ್ವ ಮಹಿಳೆಯ ಮೇಲೆ ಅಮಾನುಷ ವರ್ತನೆ ತೋರುತ್ತಿದ್ದಾಗ ಮೂಕ ಪ್ರೇಕ್ಷಕರಂತೆ ವರ್ತಿಸಿದ ಸಾರ್ವಜನಿಕರ ನಡೆ ಕೂಡ ಖಂಡನೀಯವಾಗಿದೆ. ಮಹಿಳೆಯಿಂದ ತಪ್ಪು ನಡೆದಿದ್ದರೂ ಸಹ ಆಕೆಯ ಮೇಲೆ ಹಲ್ಲೆ ನಡೆಸುವ ಬದಲು ಪೊಲೀಸರಿಗೆ […]