ಮಣಿಪಾಲ: ಹೆಲ್ಮಟ್ ಇಲ್ಲದೆ ವಿದ್ಯಾರ್ಥಿಗಳ ಅಪಾಯಕಾರಿ ತ್ರಿಬಲ್ ರೈಡಿಂಗ್; ಟ್ರಾಫಿಕ್‌ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ

ಉಡುಪಿ: ಮಣಿಪಾಲದಲ್ಲಿ ವಿದ್ಯಾರ್ಥಿಗಳ ಟ್ರಾಫಿಕ್ ರೂಲ್ ಬ್ರೇಕ್ ಪ್ರಕರಣಗಳು ಸಾಮಾನ್ಯವಾಗಿದೆ. ಅಂತಹದ್ದೇ ಒಂದು ಪ್ರಕರಣದ ದೃಶ್ಯ ಈಗ ವೈರಲ್ ಆಗುತ್ತಿದೆ. ಮಣಿಪಾಲ ಟೈಗರ್ ಸರ್ಕಲ್ ಬಳಿ ಓರ್ವ ಯುವತಿ ಹಾಗೂ ಇಬ್ಬರು ಯುವಕರು ತ್ರಿಬಲ್ ರೈಡಿಂಗ್ ಮಾಡುವ ವಿಡಿಯೋ ವೈರಲ್ ಆಗಿದೆ. ಇಬ್ಬರು ಯುವಕರ ಮಧ್ಯೆ ಹೆಲ್ಮೆಟ್ ಇಲ್ಲದೆ ಯುವತಿಯೊಬ್ಬಳು ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸವಾರಿ ಮಾಡಿದ್ದಾಳೆ. ರಾತ್ರಿಯಾಗುತ್ತಿದ್ದಂತೆ ವಿದ್ಯಾರ್ಥಿಗಳು ರೂಲ್ ಬ್ರೇಕ್ ಮಾಡ್ತಾರೆ. ವೀಕೆಂಡ್ ನಲ್ಲಿ ಮೋಜು ಮಸ್ತಿ ನಿರತ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡದಿದೆ. ಈ […]

ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಗೆ ಡಾ. ತುಕರಾಂ ಪೂಜಾರಿ ಬಂಟ್ವಾಳ ಮತ್ತು ಗೋಪು ಮಡಿವಾಳ ಅಲೆವೂರು ಆಯ್ಕೆ

ಉಡುಪಿ: ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ. ತುಕರಾಂ ಪೂಜಾರಿ ಬಂಟ್ವಾಳ ಹಾಗೂ ಜಾನಪದ ಕಲಾವಿದ ಪ್ರಶಸ್ತಿಗೆ ದೈವಾರಾಧನೆಯ ಸೇವಕ ಗೋಪು ಮಡಿವಾಳ ಅಲೆವೂರು ಅವರು ಆಯ್ಕೆಯಾಗಿದ್ದಾರೆ‌. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ ಅವರು, ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಇದೇ ಮಾ. 15ರಂದು ಸಂಜೆ 4.30ಕ್ಕೆ ಉಡುಪಿ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್‌ನ ಲಕ್ಷ್ಮೀ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ […]

ನಾಪತ್ತೆಯಾಗಿದ್ದ ದಿಗಂತ್ ಡಿಮಾರ್ಟ್ ನಲ್ಲಿ ಶಾಪಿಂಗ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ:ಮಂಗಳೂರಿನ ದಿಗಂತ್ ನಾಪತ್ತೆ ಪ್ರಕರಣ ಕರಾವಳಿಯಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಆತ ನಾಪತ್ತೆಯಾಗಿ ಹನ್ನೆರಡು ದಿನಗಳ ಬಳಿಕ ಉಡುಪಿಯ ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಪತ್ತೆಯಾಗಿದ್ದ. ಪೊಲೀಸರ ಕೈಗೆ ದಿಗಂತ್ ಸಿಕ್ಕಿಬೀಳುವ ಮುನ್ನ ಆತನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಡಿಮಾರ್ಟ್ ನಲ್ಲಿ ದಿಗಂತ್ ಶಾಪಿಂಗ್ ಮಾಡುವ ಸಿ ಸಿ ಟಿ ವಿ ದೃಶ್ಯಾವಳಿ ಲಭ್ಯವಾಗಿದೆ. ಯಾವುದೇ ಆತಂಕ ಇಲ್ಲದೆ ಮಾಲ್ ನಲ್ಲಿ ಓಡಾಟ ಮಾಡುತ್ತಿರುವ ದಿಗಂತ್ ಕೊನೆಗೆ ಸಾಮಾನ್ಯನಂತೆ ಖರೀದಿ ಮಾಡಿ ಬಿಲ್ ಪಾವತಿಸುವ […]

ಸ್ವರ್ಣ ಜುವೆಲ್ಲರ್ಸ್ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ

ಗುಜ್ಜಾಡಿ:ಸ್ವರ್ಣ ಜುವೆಲ್ಲರ್ಸ್ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯಲಿದೆ.ಅನುಭವಿಗಳು ಅಥವಾ ಹೊಸಬರು ಅರ್ಜಿ ಸಲ್ಲಿಸಬಹುದು.ಸಂಬಳ 15 ರಿಂದ 20 ಸಾವಿರ ವರೆಗೆ.ಆಹಾರ ಮತ್ತು ವಸತಿ ಸೌಲಭ್ಯವಿದೆ. ಸ್ಥಳ:ಧಾರವಾಡ, ಹುಬ್ಬಳ್ಳಿ, ಕೊಪ್ಪಳ. https://forms.gle/TsvmuYWKLDAJdNRj6 ನಿಮ್ಮ ರೆಸ್ಯೂಮ್ ಅನ್ನು ಈ ನಂಬರ್ ಗೆ ವಾಟ್ಸಪ್ ಮಾಡಿ. 9148975770 (ಅಥವಾ) [email protected] ಗೆ ಇಮೇಲ್ ಮಾಡಿ.

ಉಡುಪಿ:ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಶ್ರೀಧರ ಸಿ. ದೇವಾಡಿಗ, ಹಾಗೂ ಉಪಾಧ್ಯಕ್ಷರಾಗಿ ದಿನೇಶ್ ಕಿಣಿ ಆಯ್ಕೆ

ಉಡುಪಿ: ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಇದರ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀಧರ ಸಿ. ದೇವಾಡಿಗ ಹಾಗೂ ಉಪಾಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಶ್ರೀಧರ ದೇವಾಡಿಗ ಅವರು ಆಟೊರಿಕ್ಷಾ ನಿರ್ವಾಹಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ನಾದಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿನೇಶ್ ಕಿಣಿ ಅವರು ಉಡುಪಿ ಗೃಹ ನಿರ್ಮಾಣ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ […]