ಪೆರ್ಡೂರು ಬಂಟರ ಸಂಘದ ಸಭಾಭವನ, ಬಯಲು ವೇದಿಕೆಗೆ ಶಿಲಾನ್ಯಾಸ, ಸಭಾ ಕಾರ್ಯಕ್ರಮ ಉದ್ಘಾಟನೆ

ಹೆಬ್ರಿ: ವ್ಯಕ್ತಿಗಿಂತ ಸಂಘ ಮುಂದು ಎಂದು ಎಲ್ಲರನ್ನೂ ಒಗ್ಗೂಡಿಸಿ ಸಂಘವನ್ನು ಮುನ್ನಡೆಸುವುದರ ಜತೆಗೆ ಉತ್ತಮ ಅಭಿವೃದ್ಧಿ ಕಾರ್ಯಗಳ ಜತೆ ಉತ್ತಮ ನಾಯಕತ್ವದ ಮೂಲಕ ಸರಳ ವ್ಯಕ್ತಿತ್ವದ ಶಾಂತಾರಾಮ ಸೂಡರು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಜಯಕರ ಶೆಟ್ಟಿ ಹೇಳಿದರು. ಅವರು ಮಾ. 9ರಂದು ಬಂಟರ ಸಂಘ ಪೆರ್ಡೂರು ಮಂಡಲದಿಂದ ನಿರ್ಮಾಣಗೊಳ್ಳಲಿರುವ ವಿಜಯಲಕ್ಷ್ಮೀ ದಿನೇಶ ಹೆಗ್ಡೆ ಹವಾನಿಯಂತ್ರಿತ ಸಭಾಭವನ ಮತ್ತು ಜಲಜಾಕ್ಷಿ ವೀರಣ್ಣ ಸೂಡ ಬಯಲು ವೇದಿಕೆ ಹಾಗೂ ಸಂಘದ ಕಚೇರಿ ಕಟ್ಟಡಕ್ಕೆ […]
ಉಡುಪಿ:ಮಾ. 12 ರಂದು ರೇಣುಕಾಚಾರ್ಯ ಜಯಂತಿ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಕನ್ನಡ ವಿಭಾಗ ಇವರ ಸಹಯೋಗದೊಂದಿಗೆ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವು ಮಾರ್ಚ್ 12 ರಂದು ಬೆಳಗ್ಗೆ 10 ಗಂಟೆಗೆ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎ.ವಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ […]
ಉಡುಪಿ:ಹಕ್ಕಿಜ್ವರ (ಬರ್ಡ್ ಫ್ಲೂ) : ಭಯ ಬೇಡ ಎಚ್ಚರವಿರಲಿ-ಡಾ.ಕೆ ವಿದ್ಯಾಕುಮಾರಿ

ಉಡುಪಿ: ರಾಜ್ಯದ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ, ಉಡುಪಿ ಜಿಲ್ಲೆಯಲ್ಲಿ ಕೋಳಿ ಫಾರಂಗಳ ಮತ್ತು ಮಾಂಸದ ಅಂಗಡಿಗಳ ಮೇಲೆ ನಿಗಾ ಇಡಲು ಆರೋಗ ಮತ್ತು ಪಶು ಸಂಗೋಪನೆ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ನಿರ್ವಹಿಸಲು ಸಾರ್ವಜನಿಕರಲ್ಲಿ ಜಾಗತಿ ಮೂಡಿಸಲು ಸೂಚಿಸಿದೆ. ಜಿಲ್ಲೆಯಲ್ಲಿ 334 ಮಾಂಸದ (ಬಾಯ್ಲರ್) ಕೋಳಿ ಫಾರಂಗಳಲ್ಲಿ 12.50 ಲಕ್ಷ ಕೋಳಿಗಳು, ಒಂದು ಮೊಟ್ಟೆ (ಲೇಯರ್) ಕೋಳಿ ಫಾರಂನಲ್ಲಿ 35,000 ಕೋಳಿಗಳು ಹಾಗೂ 2.50 ಲಕ್ಷ ಹಿತ್ತಲ ಕೋಳಿಗಳು ಇರುತ್ತವೆ. ಹಕ್ಕಿಜ್ವರದ ಯಾವುದೇ […]
ಉಡುಪಿ:ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಕರ್ತರಿಗೆ ಮೋ-ಜೋ ಕಿಟ್ ನೀಡಲು ಅರ್ಜಿ ಆಹ್ವಾನ.

ಉಡುಪಿ:ಕರ್ನಾಟಕ ಮಾಧ್ಯಮ ಅಕಾಡೆಮಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಕರ್ತರಿಗೆ ಉತ್ತೇಜನ ನೀಡುವ ಸಲುವಾಗಿ ಉಚಿತವಾಗಿ ಮೋ-ಜೋ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರು ಈ ಕೆಳಕಂಡ ಷರತ್ತುಗೊಳಪಟ್ಟು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಾಗಿರಬೇಕು ಅಥವಾ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಅಥವಾ ಉಪಗ್ರಹ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. […]
ಹೋಳಿ ಹಬ್ಬಕ್ಕೆ ದಿನಗಣನೆ: ಅತಿಯಾದ ಕೆಮಿಕಲ್ ಮಿಶ್ರಿತ ಬಣ್ಣ ತಯಾರಿಸುವ ಕಂಪೆನಿಗಳಿಗೆ ಇಲಾಖೆ ಖಡಕ್ ವಾರ್ನಿಂಗ್

ಮತ್ತೆ ಬಂದಿದೆ ಹೋಳಿ ಹಬ್ಬ. ಇದು ಬಣ್ಣಗಳ ಹಬ್ಬ ಪರಸ್ಪರ ಬಣ್ಣಗಳನ್ನು ಹಚ್ಚಿ ಸಂಭ್ರಮಿಸುವುದು ಈ ಹಬ್ಬದ ಸಂಪ್ರದಾಯ. ಆದರೆ ಇದೀಗ ಬಣ್ಣಗಳ ಬಗ್ಗೆಯೂ ಆಹಾರ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಲರ್ಟ್ ಆಗಿದ್ದು ಕೆಮಿಕಲ್ ಹಾಕಿ ಬಣ್ಣಗಳನ್ನು ತಯಾರಿಸುವ ಕಂಪೆನಿಗಳ ಖಡಕ್ ಸೂಚನೆ ನೀಡಿದೆ. ಹೋಳಿ ಹಬ್ಬ ಬಂತಂದ್ರೆ ಸಾಕು ಅಂಗಡಿಗಳಲ್ಲಿ ವಿವಿಧ ಬಣ್ಣಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಈ ಬಣ್ಣಗಳಲ್ಲಿ ಕೆಮಿಕಲ್ ಪ್ರಮಾಣವೇ ಹೆಚ್ಚು. ಅದು ತ್ವಚೆಗೆ, ಚರ್ಮಕ್ಕೆ ಭಾರೀ ತೊಂದರೆ ಉಂಟುಮಾಡುತ್ತದೆ. […]