ಮಾ.9 ರಂದು ಬಂಟರ ಸಮುದಾಯ ಭವನ ಪೆರ್ಡೂರಿನಲ್ಲಿ ಸಭಾಭವನ-ಬಯಲು ವೇದಿಕೆಯ ಅದ್ದೂರಿ ಶಿಲಾನ್ಯಾಸ ಕಾರ್ಯಕ್ರಮ

ಉಡುಪಿ: ಬಂಟರ ಸಂಘ(ರಿ) ಪೆರ್ಡೂರು ಮಂಡಲ ಇದರ ವಿಜಯಲಕ್ಷ್ಮಿ ದಿನೇಶ ಹೆಗ್ಡೆ ಸಭಾಭವನ (A/c Banquet Hall)ಮತ್ತು ಶ್ರೀಮತಿ ಜಲಜಾಕ್ಷಿ ವೀರಣ್ಣ ಸೂಡ ಬಯಲು ವೇದಿಕೆಯ ಶಿಲಾನ್ಯಾಸ ಸಮಾರಂಭ ಮಾ.9 ರಂದು ಬೆಳಗ್ಗೆ 9.30 ಕ್ಕೆ ಬಂಟರ ಸಮುದಾಯ ಭವನ, ಪೆರ್ಡೂರು ಇಲ್ಲಿ ಅದ್ದೂರಿಯಿಂದ ನೆರವೇರಲಿದೆ ಎಂದು ಶಾಂತಾರಾಮ ಸೂಡ ಕೆ.ಅಧ್ಯಕ್ಷರು, ಶ್ರೀಧರ ಕೆ. ಶೆಟ್ಟ ಕುತ್ಯಾರು ಬೀಡುಪ್ರಧಾನ ಕಾರ್ಯದರ್ಶಿ, ಪ್ರಮೋದ್ ರೈ ಪಳಜೆ ಕೋಶಾಧಿಕಾರಿ ಮತ್ತು ಉಪಾಧ್ಯಕ್ಷರು, ಗೌರವ ಸಲಹೆಗಾರರು, ಕಾರ್ಯಕಾರಿ ಸಮಿತಿ ಸದಸ್ಯರು, ಮತ್ತು […]
ನಾಪತ್ತೆಯಾಗಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಪತ್ತೆ.!

ಉಡುಪಿ: ನಿಗೂಢವಾಗಿ ನಾಪತ್ತೆಯಾದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಮಾ.8ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸುಮಾರು 10 ದಿನದ ಬಳಿಕ ದಿಗಂತ್ ಪತ್ತೆಯಾಗಿದ್ದು, ಪೊಲಿಸರು ಆತನನ್ನು ಕರೆತರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, 40ಕ್ಕೂ ಅಧಿಕ ಪೋಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಗಳನ್ನು ಬಳಿಸಿ ಹುಡುಕಾಟ ನಡೆಸಿದ್ದರು. ಮಂಗಳೂರಿನಲ್ಲಿ […]
ಉಡುಪಿ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ.!

ಕೋಟ: ಮೊಬೈಲ್ ಕೊಡದಿದ್ದ ಸಿಟ್ಟಿಗೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.6ರಂದು ಐರೋಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಐರೋಡಿ ಗ್ರಾಮದ ಆಶಾ ಎಂಬವರ ಮಗಳು ದಿಶಾ(16) ಎಂದು ಗುರುತಿಸಲಾಗಿದೆ. ಕೋಟ ವಿವೇಕ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಶಾ, ಪರೀಕ್ಷೆ ಮುಗಿಸಿ ರಜೆಯಲ್ಲಿ ಮನೆಯಲ್ಲಿ ಇದ್ದರು. ಆಕೆ ಮನೆಯಲ್ಲಿ ತಾಯಿಯೊಂದಿಗೆ ಮೊಬೈಲ್ ಕೊಡಬೇಕೆಂದು ಹಠ ಹಿಡಿದಿದ್ದು, ಮೊಬೈಲ್ ನೀಡದಿದಕ್ಕೆ ಸಿಟ್ಟುಗೊಂಡ ದಿಶಾ, ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕೋಟ […]
ಮೂಡ್ಲಕಟ್ಟೆ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಮಹಿಳಾ ಸಬಲೀಕರಣ ಕಾರ್ಯಕ್ರಮ

ಕುಂದಾಪುರ: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇಲ್ಲಿನ ಪ್ರಥಮ ಮತ್ತು ದ್ವಿತೀಯ ಎಂ.ಬಿ.ಎ ಪದವಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲಾರದ ಡಾ. ಅಬ್ದುಲ್ ಕರೀಂ, ಶ್ರೀಮತಿ ಕ್ರಿಪಾ ಎಂ. ಎಂ (ಅಸಿಸ್ಟೆಂಟ್ ಡೈರೆಕ್ಟರ್ ಫೀಲ್ಡ್ ಪ್ರೋಗ್ರಾಮ್ ನಮ್ಮ ಭೂಮಿ) ಮತ್ತು ನಮ್ಮಭೂಮಿಯ ಸುರೇಶ, ಶ್ರೀಮತಿ ಆಶಾ ಅವರು ಉಪಸ್ಥಿತರಿದ್ದರು. ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ.ಸುಚಿತ್ರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ […]
ಮೂಡುಬಿದಿರೆ: ಕಾರು-ಆಕ್ಟಿವಾ ನಡುವೆ ಭೀಕರ ಅಪಘಾತ; ಆ್ಯಕ್ಟಿವಾ ಸವಾರೆ ಮೃತ್ಯು.

ಮೂಡುಬಿದಿರೆ: ಮೂಡಬಿದಿರೆಯ ಶಿರ್ತಾಡಿಯಲ್ಲಿ ಕಾರು ಹಾಗೂ ಆಕ್ಟಿವಾ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೂಡುಬಿದಿರೆ ನಾಗರಕಟ್ಟೆ ನಿವಾಸಿ, ಶಿರ್ತಾಡಿಯ ಖಾಸಗಿ ಶಾಲೆಯ ಶಿಕ್ಷಕಿ ಸುಜಯಾ ಭಂಡಾರಿ ಸಾವನ್ನಪ್ಪಿದ ಶಿಕ್ಷಕಿ. ಸುಜಯಾ ಭಂಡಾರಿ ಅವರು, ಶಿರ್ತಾಡಿಯಿಂದ ಮೂಡುಬಿದಿರೆ ಕಡೆ ಹೋಗುತ್ತಿದ್ದರು. ಆಗ ಮುಂಭಾಗದಿಂದ ಬರುತ್ತಿದ್ದ ಕಾರು ಸುಜಯಾ ಅವರ ಆಕ್ಟಿವಾಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸುಜಯಾ ಅವರ ತಲೆಗೆ ತೀವ್ರ ತರದ ಗಾಯವಾಗಿತ್ತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ […]