ಪರಿಸರ, ಜೀವವೈವಿದ್ಯ ಉಳಿಸದೇ ಹೋದರೆ ಭವಿಷ್ಯದಲ್ಲಿ ಸಂಕಷ್ಟ: ಆರತಿ ಅಶೋಕ್

ಕಾರ್ಕಳ: ಇಂದು ಪರಿಸರ, ಜೀವವೈವಿದ್ಯ ಉಳಿಸದೇ ಹೋದರೆ ಭವಿಷ್ಯದಲ್ಲಿ ಘೋರ ದಿನಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಮರಗಳನ್ನು, ನದಿ, ಕೆರೆಗಳನ್ನು ಹಾನಿ ಮಾಡಿ ಅಂತಹ ದಿನಗಳನ್ನು ಮೈಮೇಲೆಳೆದುಕೊಂಡಿದ್ದೇವೆ.ಇನ್ನಾದರೂ ಎಚ್ಚರಗೊಂಡು ನಮ್ಮ ಮನೆಯಿಂದಲೇ ಪರಿಸರ ಉಳಿಸುವ ಕೆಲಸ ಮಾಡದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡುತ್ತೇವೆ ಎಂದು ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಂಘದ ಉಪಾಧ್ಯಕ್ಷೆ, ಪರಿಸರ ಪರ ಹೋರಾಟಗಾರ್ತಿ ಆರತಿ ಅಶೋಕ್ ಅವರು ಹೇಳಿದ್ದಾರೆ. ಅವರು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಕಾಲೇಜಿನ ಐಕ್ಯುಐಸಿ, ಮಾನವಿಕ […]

ಯಶಸ್ವಿನಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಇಡೀ ದೇಶದ ಆರ್ಥಿಕ ಅಭಿವೃದ್ಧಿ ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂಬುವುದು ಎಲ್ಲರಿಗೂ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಹಕಾರ ಸಚಿವಾಲಯದ ಮೂಲಕವೂ‌ ಸಹಕಾರಿ ಕ್ಷೇತ್ರದಲ್ಲಿ ಅನೇಕ ರೀತಿಯ ಬದಲಾವಣೆ ತರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಸಹಕಾರಿ‌ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ […]

ಬಜೆಟ್‌ನಲ್ಲಿ ಹಿಂದುಳಿದ ವರ್ಗ, ದಲಿತರಿಗೆ ನಿರಾಶೆ

ಉಡುಪಿ: ರಾಜ್ಯದ ಜನತೆಗೆ ಬಜೆಟ್ ಬಗ್ಗೆ ಬಹಳ ನಿರೀಕ್ಷೆಯಿತ್ತು. ಆದರೆ ಅದಕ್ಕೆಲ್ಲಾ ಸಿದ್ದರಾಮಯ್ಯನವರು ಎಳ್ಳುನೀರು ಬಿಟ್ಟಿದ್ದಾರೆ. ಹಿಂದುಳಿದ ವರ್ಗ ದಲಿತರಿಗೆ ವಂಚಿಸುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ದೇವರಾಜ ಅರಸರ ಪ್ರತಿರೂಪ, ಪರಿಶಿಷ್ಟ ಜಾತಿ-ಪಂಗಡ, ದಲಿತರಿಗೆ ನ್ಯಾಯ ಕೊಡುವ ವ್ಯಕ್ತಿ ಎಂದು ಪ್ರಶಂಸಿಕೊಳ್ಳುತ್ತಿದ್ದ ಅವರು, ಬಜೆಟ್‌ನಲ್ಲಿ ಹಿಂದುಳಿದ ವರ್ಗ ಹಾಗೂ ದಲಿತರ ಪಾಲಿಗೆ ನಿರಾಶಾದಾಯಕವಾಗಿಸಿದೆ ಎಂದು ದೂರಿದರು. ರಾಜ್ಯದ ಶೇ. 50ರಷ್ಟು ಹಿಂದುಳಿದ […]

ಉಡುಪಿ: ಜನವಿರೋಧಿ ಬಜೆಟ್ ವಿರುದ್ಧ ಬಿಜೆಪಿ ವತಿಯಿಂದ ಪ್ರತಿಭಟನೆ

ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ಬಜೆಟ್ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಡಿಯಾಳಿಯ ಬಿಜೆಪಿ ಜಿಲ್ಲಾ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು.ಬಿಜೆಪಿ ಕಾರ್ಯಕರ್ತರು ಫಲಕ ಹಿಡಿದು, ಘೋಷಣೆ ಕೂಗಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಶೂನ್ಯ ಬಜೆಟ್ ಮಂಡಿಸಿ, ಎಲ್ಲರ ಮೂಗಿಗೆ ತುಪ್ಪ ಸವರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಹಿತ ಶಿಕ್ಷಣ, ಆರೋಗ್ಯ […]

ಕಟಪಾಡಿ:ತ್ರಿಶಾ ಕ್ಲಾಸಸ್ : ಸಿಎ ಇಂಟರ್ಮೀಡಿಯಟ್ ಮಾಹಿತಿ ಕಾರ್ಯಾಗಾರ

ಕಟಪಾಡಿ:ಕರಾವಳಿ ಭಾಗದಲ್ಲಿ ಸಿ ಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾಸಂಸ್ಥೆಯ ವತಿಯಿಂದ ಸಿಎ ಇಂಟರ್ಮೀಡಿಯಟ್ ಮಾಹಿತಿ ಕಾರ್ಯಾಗಾರವು ಮಾರ್ಚ್ 9 ರಂದು ಪೂರ್ವಾಹ್ನ 10:00 ಗಂಟೆಗೆ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಯಲಿದೆ. ತರಗತಿಯ ವಿಶೇಷತೆಗಳು : ಆಸಕ್ತ ವಿದ್ಯಾರ್ಥಿಗಳು ಮಾಹಿತಿಗೆ ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.