ಶೀರೂರು ಮಠದ ಪರ್ಯಾಯ: ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ

ಉಡುಪಿ: ಭಾವಿ ಪರ್ಯಾಯ ಶೀರೂರು ಪರ್ಯಾಯ 2026-28ರ ಅಂಗವಾಗಿ ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರು ನಡೆಸಲಿರುವ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ ಅಕ್ಕಿ ಮುಹೂರ್ತ ಗುರುವಾರ ಉಡುಪಿ ಶೀರೂರು ಮಠದ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಬೆಳಗ್ಗೆ 9ಕ್ಕೆ ದೇವತಾ ಪ್ರಾರ್ಥನೆ-ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ, ಬಳಿಕ ಚಿನ್ನದ ಪಲ್ಲಕ್ಕಿ ಹಾಗೂ ಅಕ್ಕಿಮುಡಿಯನ್ನು ನೂರಾರು ಮಂದಿ ಭಕ್ತಾದಿಗಳು ಅಕ್ಕಿಮುಡಿಯನ್ನು ತಲೆಯ ಮೇಲೆ ಹೊತ್ತು ರಥಬೀದಿಯಲ್ಲಿ ಶ್ರೀಮುಡಿ ಮೆರವಣಿಗೆ ನಡೆಸಿ ಶ್ರೀಮಠಕ್ಕೆ ತರಲಾಯಿತು. ಆ ಬಳಿಕ […]

ಕಾಪು ಮಾರಿಗುಡಿಗೆ ಬಾಲಿವುಡ್ ನಟಿ ಪೂಜಾ ಹೆಗ್ಡೆ ಭೇಟಿ

ಉಡುಪಿ: ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಅವರು ಉಡುಪಿಯ ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕುಟುಂಬದ ಜೊತೆ ಭಾಗಿಯಾಗಿ ಕಾಪು ಮಾರಿಯಮ್ಮನ ದರ್ಶನ ಪಡೆದಿದ್ದಾರೆ.ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರು. ಹಾಗಾಗಿ ಆಗಾಗ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಫ್ಯಾಮಿಲಿ ಜೊತೆ ಕಾಪು ಮಾರಿಗುಡಿಗೆ ನಟಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಕಾಪು ಮಾರಿಗುಡಿಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್‌, ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಅನೇಕರು ಭೇಟಿ ನೀಡಿದ್ದರು. ಈಗ […]

ಕುಂದಾಪುರ: ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳು ಉತ್ತೀರ್ಣ.

ಕುಂದಾಪುರ : ಫೆಬ್ರವರಿಯಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಶ್ರದ್ಧಾ , ಮನೀಶ್, ಸಿಂಚನಾ ಅತ್ಯುತ್ತಮ ಅಂಕವನ್ನು ದಾಖಲಿಸಿ ಉತ್ತೀರ್ಣರಾಗಿದ್ದಾರೆ.ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಉಡುಪಿ: ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

ಉಡುಪಿ: ಕಟ್ಟಡವೊಂದರ ಮೇಲೆ ಸೋಲಾರ್ ಪ್ಯಾನೆಜ್ ಸ್ವಚ್ಛಗೊಳಿಸುವಾಗ ಕಾರ್ಮಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಾ.4ರಂದು ಬೆಳಗ್ಗೆ ನಿಟ್ಟೂರು ಎಂಬಲ್ಲಿ ನಡೆದಿದೆ. ಮೃತರನ್ನು ಬಾಗಲಕೋಟೆ ಮೂಲದ ಹನುಮಂತ ಪುಂಡಲಿಕ ರುಗಿ ಎಂದು ಗುರುತಿಸಲಾಗಿದೆ. ಇವರು ಉಡುಪಿ ಬಾಳಿಗಾ ಫಿಶ್‌ನೆಟ್‌ನ ಪ್ರೊಸೆಸಿಂಗ್ ಯುನಿಟ್‌ನ ಮಾಡಿನ ಮೇಲೆ ಸೋಲಾರ್ ಪ್ಯಾನಲ್ ಸ್ವಚ್ಚಗೊಳಿಸುವಾಗ ಅಕಸ್ಮಿಕವಾಗಿ ಮಾಡಿನ ಮೇಲಿನಿಂದ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ […]

ಮಂಗಳೂರು-ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆಗೆ ಮಾಸ್ಟರ್ ಪ್ಲಾನ್.!

ಮಂಗಳೂರು: ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳಲು ಮಾಸ್ಟರ್ ಪ್ಲಾನ್ ರಚಿಸಲು ರಾಜ್ಯ ಸರಕಾರ ಮುಂದಾಗಿದೆ. ಮಂಗಳೂರು-ಉಡುಪಿ ನಗರಗಳ ಮಧ್ಯ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ ಹಂತ-1ರ 60 ಕಿ.ಮೀ. ಉದ್ದದ ಮಾಸ್ಟರ್ ಪ್ಲಾನ್ ಸಂಕ್ಷಿಪ್ತ ಟಿಪ್ಪಣಿ ಹಾಗೂ ವಿಸ್ತೃತ ಯೋಜನಾ ವರದಿಯನ್ನು ರೂಪಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ(BMRCL)ಕ್ಕೆ ರಾಜ್ಯ ಸರಕಾರ ಸೂಚಿಸಿದೆ. ಈ ಕುರಿತು ದ.ಕ. ಮತ್ತು ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದೆ. ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು […]