ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ ನ ನೂತನ ಪಿ.ಆರ್.ಒ ಆಗಿ ರಾಮಚಂದ್ರ ನೆಲ್ಲಿಕಾರು ನೇಮಕ

ಮಣಿಪಾಲ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಸಹಭಾಗಿತ್ವದಲ್ಲಿರುವ ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿ.ಆರ್.ಒ)ಆಗಿ ಶ್ರೀ ರಾಮಚಂದ್ರ ನೆಲ್ಲಿಕಾರು ನೇಮಕಗೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ 33 ವರ್ಷದ ಅನುಭವ ಹೊಂದಿರುವ ಇವರು ಕಳೆದ 12 ವರ್ಷಗಳಿಂದ ಪ್ರಾಂಶುಪಾಲರಾಗಿ, ಆಂಗ್ಲಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವಿ. ಖ್ಯಾತ ವಾಗ್ಮಿಯಾಗಿರುವ ಶ್ರೀಯುತರು 2 ಸಾವಿರಕ್ಕೂ ಅಧಿಕ ಅನೇಕ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಷಣಕಾರರಾಗಿ, ರಾಜ್ಯಮಟ್ಟದಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದಲ್ಲಿ ಮೂರು ಬಾರಿ ಸಂಪನ್ಮೂಲ ವ್ಯಕಿಯಾಗಿ ಹಾಗೂ 300ಕ್ಕೂ ಅಧಿಕ […]
ಸೌಜನ್ಯ ಪ್ರಕರಣ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ; ಯೂಟ್ಯೂಬರ್ ಸಮೀರ್ ವಿರುದ್ಧ ಎಫ್ಐಆರ್ ದಾಖಲು

ಬಳ್ಳಾರಿ : ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವೀಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ಅವರ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲೆ ಧಾರ್ಮಿಕ ಭಾವನೆ ಹೊಂದಿರುವ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ರೀತಿ ವೀಡಿಯೋ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಬುಧವಾರ ರಾತ್ರಿ ಸಮೀರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ […]
ಮಾ.15 ರಂದು ಮಣಿಪಾಲದ ಓರೇನ್ ಇಂಟರ್ನ್ಯಾಷನಲ್’ನಲ್ಲಿ FEATHER CUT ವಿಶೇಷ ಕಾರ್ಯಾಗಾರ:ಆಸಕ್ತರು ಮಿಸ್ ಮಾಡ್ಕೊಬೇಡಿ

ಮಣಿಪಾಲ: ಮಾ.15 ರಂದು ಮಣಿಪಾಲದ ಓರೇನ್ ಇಂಟರ್ನ್ಯಾಷನಲ್’ನಲ್ಲಿ FEATHER CUT ಎನ್ನುವ ಅದ್ಬುತ ಕಾರ್ಯಾಗಾರವೊಂದನ್ನು ಮಾ.15 ರಂದು ಬೆಳಿಗ್ಗೆ 10.30-12.30 ವರೆಗೆ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಮುಖ್ಯವಾಗಿ ಸಲೂನ್ ಕ್ಷೇತ್ರದ ಕ್ರಿಯಾಶೀಲ ಜನರಿಗೆ ಇದೊಂದು ಹೇಳಿ ಮಾಡಿಸಿದ ಕಾರ್ಯಾಗಾರ. ಅಂದ ಹಾಗೆ ಕಾರ್ಯಾಗಾರದ ಶುಲ್ಕ ರೂ.199 ಆಗಿದ್ದು ಕೆಲವೇ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದೊಂದು ಬೇಡಿಕೆ ಕ್ಷೇಥ್ರವಾಗಿದ್ದು ಒಳ್ಳೊಳ್ಳೆ ಉದ್ಯೋಗಾವಕಾಶಗಳು ಲಭ್ಯವಿದೆ ಹಾಗಾಗಿ ನೀವೂ ಈ ಕ್ಷೇತ್ರದಲ್ಲಿ ಆಸಕ್ತರಾಗಿದ್ದಲ್ಲಿ ಕೂಡಲೇ ಈ ಕಾರ್ಯಾಗಾರದಲ್ಲಿ […]
ಲಾವಣ್ಯ ಬೈಂದೂರು 48ನೇ ವಾರ್ಷಿಕೋತ್ಸವ, ರಂಗೋತ್ಸವ

ಉಡುಪಿ: ಮಾನವನಿಗೆ 48 ವರ್ಷಗಳು ತುಂಬಿದೆ ಎಂದರೆ ವಯಸ್ಸಾಗುತ್ತಾ ಬಂತು ಎಂದರ್ಥ ಆದರೆ ಯಾವುದೇ ಸಂಸ್ಥೆಗೆ ವಯಸ್ಸು ಹೆಚ್ಚುತ್ತಾ ಬಂದರೆ ಅದು ಯೌವ್ವನಕ್ಕೆ ಕಾಲಿಟ್ಟಿದೆ ಎಂದರ್ಥ. ಪ್ರಸ್ತುತ 48 ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಬೈಂದೂರಿನ ಲಾವಣ್ಯ ಸಂಸ್ಥೆ ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಮಂಗಳವಾರ ಬೈಂದೂರಿನ ಶ್ರೀ ಸೇನೇಶ್ವರ ದೇವಳದ ಮುಂಭಾಗದ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯುತ್ತಿರುವ ಲಾವಣ್ಯ ಬೈಂದೂರು ಇದರ 48ನೇ […]
ಉಡುಪಿ: ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ ಶಾಲಾ ಬಸ್ ಹಸ್ತಾಂತರ

ಉಡುಪಿ: ಕರ್ಣಾಟಕ ಬ್ಯಾಂಕ್, ತಮ್ಮ ಪ್ರಾದೇಶಿಕ ಕಚೇರಿ ಉಡುಪಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯ ಅಡಿಯಲ್ಲಿ ಉಡುಪಿಯ ಕೈಪುಂಜಾಲ್, ಕಾಪು, ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ ಶಾಲಾ ಬಸ್ ಅನ್ನು ಮಾ.04 ರಂದು ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಪಾಲ್ಗೊಂಡಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತ ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಪ್ರತಿ ವರ್ಷ ತಾನು ಬೆಳೆದದಲ್ಲದೆ ಕಾರ್ಪೊರೇಟ್ […]