ಮಂಜೇಶ್ವರ: ಭೀಕರ ರಸ್ತೆ ಅಪಘಾತ-ಕಾರಿನಲ್ಲಿದ್ಡ ಮೂವರು ಮೃತ್ಯು.

ಕಾಸರಗೋಡು,ಮಾ.04: ಸೋಮವಾರ ರಾತ್ರಿ ಮಂಜೇಶ್ವರ ಬಳಿಯ ಉಪ್ಪಳ ಬ್ರಿಡ್ಜ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಡಿವೈಡರ್ ಗೆ ಕಾರು ಡಿಕ್ಕಿ ಯಾದ ರಭಸಕ್ಕೆ ಕಾರು ತುಂಡು ತುಂಡಾಗಿ ರಸ್ತೆಗೆಸೆಯಲ್ಪಟ್ಟ ಘಟನೆ ನಡೆದಿದೆ. ಕಾರಿನಲ್ಲಿದ್ಡ ನಾಲ್ವರಲ್ಲಿ ಮೂವರು ಸಾವನಪ್ಪಿದ್ದು ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಮೃತರನ್ನು ಕಾಸರಗೋಡು ಪೈವಳಿಕೆ ಬಾಯಿಕಟ್ಚೆಯ ನಿವಾಸಿ ಜನಾರ್ದನ, ವರುಣ್, ಕೃಷ್ಣ ಎಂದು ತಿಳಿದುಬಂದಿದೆ. ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದು ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಾ.7ರಿಂದ 9ರ ವರೆಗೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಕೈಮಗ್ಗ ಬಟ್ಟೆಗಳ ಪ್ರದರ್ಶನ, ಮಾರಾಟ ಮೇಳ‌.

ಉಡುಪಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಕೈಮಗ್ಗ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾ.7ರಿಂದ 9 ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8:30ರವರೆಗೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಮಾ.7ರಂದು ಮಧ್ಯಾಹ್ನ 12:30ಕ್ಕೆ ಉಡುಪಿಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಮೇಳವನ್ನು ಉದ್ಘಾಟಿಸಲಿರುವರು. ಕಾಲೇಜಿನ ಪ್ರಾಂಶು ಪಾಲ ಲಕ್ಷ್ಮೀನಾರಾಯಣ ಕಾರಂತ್ ಭಾಗವಹಿಸಲಿರುವರು. ಚರಕದ ಅಧ್ಯಕ್ಷೆ ಮಹಾಲಕ್ಷ್ಮೀ ಅಧ್ಯಕ್ಷತೆ ವಹಿಸಲಿರುವರು ಎಂದು ಸಂಸ್ಥೆಯ ಮಾರುಕಟ್ಟೆ […]

ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಉದ್ಘಾಟನೆ: ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ಅವರಿಗೆ ಸನ್ಮಾನ.

ಉಡುಪಿ: ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ (ರಿ.) ನೂತನವಾಗಿ ಮಾ 1 ರಂದು ಉದ್ಘಾಟನೆ ಗೊಂಡಿತ್ತು, ಸಂಸ್ಥೆಯ ಖಜಾಂಚಿ ಅಧಿಕಾರ ಸ್ವೀಕರಿಸದ ಪರ್ವ ಕಾಲದಲ್ಲಿ ಈ ಸಂಸ್ಥೆಯ ಹುಟ್ಟು ಹಾಕುವಲ್ಲಿ ಪ್ರಮುಖರಾದ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ವೃತ್ತಿಯಲ್ಲಿ ಪ್ರಸಿದ್ಧ ಸಿವಿಲ್ ಇಂಜಿನಿಯರ್ ರಾಗಿದ್ದು ಗುತ್ತಿಗೆದಾರಾಗಿ ನೂರಾರು ಮನೆ ಕಟ್ಟಡ ನಿರ್ಮಿಸಿದ್ದಾರೆ. ಪ್ರವೃತ್ತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಕ್ಷೇತ್ರದಲ್ಲಿ ಜ್ಯೂಯ್ನಿಯರ್ ವಿದ್ಯಾಭೂಷಣ ರೆಂದು ಪ್ರಸಿದ್ಧ ಪಡೆದು ತನ್ನದ್ದೇ ಸಂಸ್ಥೆಯ ಮುಖಂತರ 500ಕ್ಕೂ ಹೆಚ್ಚಿನ ಕಡೆಗಳಲ್ಲಿ […]

ಉಡುಪಿ: ಯುವ ಪಾಕತಜ್ಞ ನಾಗರಾಜ ಭಟ್ ನಿಧನ.

ಉಡುಪಿ: ಉಡುಪಿಯ ಯುವ ಪಾಕತಜ್ಞ ನಾಗರಾಜ ಭಟ್ (48) ಅವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸಂಜೆ ನಿಧನರಾಗಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪುಟ್ಟಣ್ಣ ಎಂದು ಆತ್ಮೀಯರಿಂದ ಕರೆಸಿಕೊಳ್ಳುತಿದ್ದ ನಾಗರಾಜ ಭಟ್, ಶುಚಿ ರುಚಿಯಾದ ಉಡುಪಿ ಅಡುಗೆ ತಯಾರಿಯಲ್ಲಿ ಅತ್ಯಂತ ಸಮರ್ಥರೆಂದು ಗುರುತಿಸಲ್ಪಟ್ಟಿದ್ದರು. ಉಡುಪಿ ಅಡುಗೆಯವರ ಸಂಘ, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಗಳು ನಾಗರಾಜ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿವೆ.

ಉಡುಪಿ: ಭೀಕರ ರಸ್ತೆ ಅಪಘಾತ: ಪತ್ರಿಕಾ ವಿತರಕ ಮೃತ್ಯು.

ಉಡುಪಿ: ಜಿಲ್ಲೆಯ ಹಿರಿಯ ಪತ್ರಿಕಾ ವಿತರಕರಲ್ಲೊಬ್ಬರಾದ ಪೇತ್ರಿಯ ಬಾಲಕೃಷ್ಣ ಶೆಟ್ಟಿ ನೂಜಿನಬೈಲು (72) ಸೋಮವಾರ ಮುಂಜಾನೆ ವೃತ್ತಿ ನಿರತರಾಗಿದ್ದ ಸಂದರ್ಭದಲ್ಲಿ ಹೇರೂರು ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರರು, ಅಪಾರ ಸಂಖ್ಯೆಯ ಬಂಧುವರ್ಗ, ಮಿತ್ರರನ್ನು ಅಗಲಿದ್ದಾರೆ. ಸರಳ, ಸಜ್ಜನಿಕೆ ಹಾಗೂ ಸ್ನೇಹಮಯ ವ್ಯಕ್ತಿತ್ವದ ಹಿರಿಯ ಭಜನಾ ಸಾಧಕ ರಾಗಿರುವ ಬಾಲಕೃಷ್ಣ ಶೆಟ್ಟಿ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನಿಕಟಪೂರ್ವ ಅಧ್ಯಕ್ಷರಾಗಿದ್ದರು. ಪ್ರಸಕ್ತ ಅವರು ಬ್ರಹ್ಮಾವರ […]