ಉಡುಪಿ: ಮಾ. 8-9ರಂದು ಅಂತರ್ ರಾಜ್ಯ ವಕೀಲರ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್ ಪಂದ್ಯಾಕೂಟ

ಉಡುಪಿ: ಉಡುಪಿ ಅಡ್ವಕೇಟ್ ವೆಲ್ಫೇರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ಕುಂದಾಪುರ ವಕೀಲರ ಸಂಘದ ಸಹಯೋಗದಲ್ಲಿ ಹಿರಿಯ ವಕೀಲ ಚೇರ್ಕಾಡಿ ವಿಜಯ್ ಹೆಗ್ಡೆ ಸ್ಮರಣಾರ್ಥ ಅಂತರ್ ರಾಜ್ಯ ಮಟ್ಟದ ಪುರುಷರ ಕ್ರಿಕೆಟ್ , ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಕೂಟವನ್ನು ಇದೇ ಮಾ. 8 ಮತ್ತು ಮತ್ತು 9ರಂದು ನಗರದ ಎಂಜಿಎಂ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ದೇವದಾಸ್ ಶೆಟ್ಟಿಗಾರ್ ತಿಳಿಸಿದರು. ಈ ಕುರಿತು ಉಡುಪಿ ಕಿದಿಯೂರು ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ […]

ಪೆರ್ಡೂರು: ಪಾಡಿಗಾರ ಬಡ ಕುಟುಂಬಕ್ಕೆ ಮನೆ ಹಸ್ತಾಂತರ; ಪೆರ್ಡೂರು ಗೆಳೆಯರ ಬಳಗದ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ.

ಹೆಬ್ರಿ: ಅನಾರೋಗ್ಯದ ನಡುವೆ ತೀರಾ ಬಡತನದಲ್ಲಿ ಜೀವನ ಸಾಗಿಸಿದ್ದ ಪಾಡಿಗಾರ ಐದು ಸೆಂಟ್ಸ್ ನಿವಾಸಿ ಉದಯ್ ಪೂಜಾರಿ ಕುಟುಂಬಕ್ಕೆ ಪೆರ್ಡೂರು ಗೆಳೆಯರ ಬಳಗದ ತಂಡ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಮಾ.2ರಂದು ಹಸ್ತಾಂತರ ಕಾರ್ಯಕ್ರಮ ನಡೆಯಿತು. ಉದಯ್ ಪೂಜಾರಿ ಅವರು ತನ್ನ ಸ್ವಂತ ಸೂರನ್ನು ಕಟ್ಟಬೇಕು ಎಂಬ ಕನಸು ಅನಾರೋಗ್ಯ ಕಾರಣದಿಂದ ಪೂರ್ಣಗೊಳ್ಳಲಿಲ್ಲ. ಮಕ್ಕಳನ್ನು ಓದಿಸಬೇಕು ಈ ನಡುವೆ ಮನೆ ಕಟ್ಟುವುದು ಹೇಗೆ ಎಂಬ ಅಲೋಚನೆಯಲ್ಲಿದ್ದಾಗ ಇದನ್ನು ಗಮನಿಸಿದ ಗೆಳೆಯರ ಬಳಗ ಪೆರ್ಡೂರು ತಂಡ ಸದಸ್ಯರೇ […]

ಪುತ್ತೂರು: ಕಂಬಳದಲ್ಲಿ ಗೆದ್ದ ಚಿನ್ನದಲ್ಲಿ ಅರ್ಧಭಾಗ ದೇವರಿಗೆ ಅರ್ಪಿಸಿದ ಕೋಣದ ಯಜಮಾನ!!

ಪುತ್ತೂರು: ಇಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಗೆದ್ದ 2 ಪವನ್‌ ಚಿನ್ನದಲ್ಲಿ 1 ಪವನ್ ಚಿನ್ನವನ್ನು ಸೋಮವಾರ ಪುತ್ತೂರಿನ ಮಹಾಲಿಂಗೇಶ್ವರ ದೇವರಿಗೆ ಸಮರ್ಪಿಸಿದ್ದಾರೆ ಕಂಬಳದ ಕೋಣಗಳ ಯಜಮಾನ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ. 1 ಪವನ್ ಚಿನ್ನ ನೀಡಿದ್ದಲ್ಲದೆ, ದೇವಳದಲ್ಲಿ ನಡೆಯುವ ಅನ್ನದಾನ ಸೇವೆಗಾಗಿ 5ಸಾವಿರ ರೂ ದೇಣಿಗೆ ಕೂಡಾ ನೀಡಿದರು. ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ […]

ಮಂಗಳೂರು: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ; ಶಾಸಕ ವೇದವ್ಯಾಸ ಕಾಮತ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು.

ಮಂಗಳೂರು: ‘ಇಲ್ಲಿಯ ಪದವು ಶಕ್ತಿನಗರದ ಶ್ರೀಕೃಷ್ಣ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಸಮಾರಂಭದ ವೇಳೆ ಶಾಸಕ ವೇದವ್ಯಾಸ್‌ ಕಾಮತ್‌ ಅವರು ನಿಂದಿಸಿದ್ದನ್ನು ಆಕ್ಷೇಪಿಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಶಾಸಕ ವೇದವ್ಯಾಸ್‌ ಕಾಮತ್‌ ಕುಮ್ಮಕ್ಕು ನೀಡಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸದಸ್ಯ ಯಶವಂತ ಪ್ರಭು ದೂರು ನೀಡಿದ್ದಾರೆ. ಶಾಸಕ ಕಾಮತ್‌ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಯಶವಂತ ಪ್ರಭು ಇತರರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಮಣಿ […]

ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಟಿ, ಸಂಸದೆ ಕಂಗನಾ ರನೌತ್‌ ಭೇಟಿ

ಕಾಪು(ಉಡುಪಿ): ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಟಿ, ಸಂಸದೆ ಕಂಗನಾ ರನೌತ್‌ ಅವರು ಸೋಮವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಉಡುಪಿಗೆ ಆಗಮಿಸಿರುವ ಅವರನ್ನು ಸಂಸದ ಬ್ರಿಜೇಶ್‌ ಚೌಟ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಚೌಟ, ‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ ಮತ್ತು ಸಂಸದೆ ಕಂಗನಾ ರನೌತ್ ಅವರೊಂದಿಗೆ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ’ ಎಂದು ಹೇಳಿದ್ದಾರೆ. ದೇವಿಯ ದರ್ಶನ ಪಡೆದ ಕಂಗನಾ […]