ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆ ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು:“ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ ಎಲ್ಲಾ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು. ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಪ್ರವಾಸೋದ್ಯಮ ನೀತಿ ವಿಚಾರವಾಗಿ ಕರಾವಳಿ ಭಾಗವನ್ನು ವಿಶೇಷವಾಗಿ ಪರಿಗಣಿಸಬೇಕು ಎಂದು ಕೇಳಿದಾಗ ಪ್ರವಾಸೋದ್ಯಮ […]
ಮಣಿಪಾಲದ ಓರೇನ್ ಇಂಟರ್ನ್ಯಾಷನಲ್ ನಲ್ಲಿ ಅತ್ಯುತ್ತಮ ಬೇಡಿಕೆಯ ಡಿಪ್ಲೋಮಾ ಕೋರ್ಸ್ ಗೆ ಪ್ರವೇಶಾತಿ ಆರಂಭ: ಶೇ.100 ರಷ್ಟು ಉದ್ಯೋಗ ಭರವಸೆ

ಮಣಿಪಾಲದ MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ಅದ್ಬುತ ಅವಕಾಶವಿರುವ Diploma in Nail Technician ಕೋರ್ಸ್ ಗೆ ಪ್ರವೇಶಾತಿ ಆರಂಭಗೊಂಡಿದೆ. ಒಳ್ಳೆಯ ಬೇಡಿಕೆಯಿರುವ ಈ ಕೋರ್ಸ್ ನ ಮೂಲಕ ನಿಮ್ಮ ವೃತ್ತಿ ಜೀವನವನ್ನು ಯಶಸ್ವಿಗೊಳಿಸಬಹುದು. ಅಂದ ಹಾಗೆ ಈ ಕೋರ್ಸ್ ಅವಧಿ 196 ಗಂಟೆಯದ್ದಾಗಿದೆ. ಇನ್ನೊಂದು ವಿಶೇಷವೆಂದರೆ ಈ ಕೋರ್ಸ್ ಕಲಿತವರಿಗೆ ಶೇ.100 ರಷ್ಟು ಉದ್ಯೋಗ ಭರವಸೆಯನ್ನು ಇಲ್ಲಿ ನೀಡಲಾಗುತ್ತದೆ. ಕೆಲವೇ ಸೀಟುಗಳು ಲಭ್ಯವಿದ್ದು ನೀವೂ ಆಸಕ್ತರಾಗಿದ್ದರೆ ಯಾವುದೇ ಕಾರಣಕ್ಕೂ ಈ ಉತ್ತಮ ಅವಕಾಶವಿರುವ ಕೋರ್ಸ್ ಅನ್ನು ಮಿಸ್ […]
ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ಪದವಿ ಪ್ರದಾನ ಸಮಾರಂಭ

ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನ ಪ್ರಥಮ ಪದವಿ ಪ್ರಧಾನ ಸಮಾರಂಭ 28 ಫೆಬ್ರವರಿ 2025 ರಂದು ಜರಗಿತು. ಪ್ರಾರಂಭದಲ್ಲಿ ಎಲ್ಲಾ ಪದವೀಧರ ವಿದ್ಯಾರ್ಥಿಗಳನ್ನು ಮತ್ತು ಆಹ್ವಾನಿತ ಗಣ್ಯರನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು ಮತ್ತು ಸ್ವಾಗತ ನೃತ್ಯ ಮತ್ತು ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಚಿಕ್ಕಮಗಳೂರಿನ ಆಶ್ರಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ತೇಜಸ್ವಿನಿ ಬಿ.ಎಚ್. (ಆರ್ ಜಿ ಯು ಎಚ್ ಎಸ್, ಯು ಜಿ, ಬಿ ಒ […]
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-15 ಸಮಾರೋಪ.

ಉಡುಪಿ: ಯಕ್ಷಗಾನ ಕಲಾ ಸೌರಭವನ್ನು ಜಗದಗಲಕ್ಕೆ ಪಸರಿಸಿ ಈ ಮೂಲಕ ತನ್ನ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೆರೆಮನೆ ಶಂಭು ಹೆಗಡೆ ಪ್ರಾತ: ಸ್ಮರಣೀಯರು. ಅವರ ಸಾಧನೆಯ ಹಾದಿಯನ್ನೇ ಅನುಸರಿಸಿಕೊಂಡು ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೆ ತನ್ನದೇ ಕೊಡುಗೆಯನ್ನು ಮಂಡಳಿಗೆ ವಿಶ್ವ ಮಾನ್ಯತೆಯನ್ನು ತಂದಿರುವ ಕೆರೆಮನೆ ಶಿವಾನಂದ ಹೆಗಡೆ ಹಾಗೂ ಅವರ ಕುಟುಂಬ ಅಭಿನಂದನಾರ್ಹರು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಹೊನ್ನಾವರ ಗುಣವಂತೆಯ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ […]
ಬ್ರಹ್ಮಾವರ: ಉಪ್ಪು ನೀರಿನ ಕೃತಕ ನೆರೆ; ಹಲವು ಎಕರೆ ಕೃಷಿಭೂಮಿ ಜಲಾವೃತ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಕ್ಷಿಮಠ, ಪಾಂಡೇಶ್ವರ ಗ್ರಾಮ ಪಂಚಾಯಿತಿಯ ಸೂಲ್ಕುದು, ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಹಠಾತ್ ಉಪ್ಪು ನೀರಿನಿಂದ ಕೃತಕ ನೆರೆ ಉಂಟಾಗಿದೆ. ಇದರ ಪರಿಣಾಮ ಕೃಷಿ ಭೂಮಿ ಸಹಿತ ಮನೆಗಳು ಜಲಾವೃತಗೊಂಡಿವೆ. ಏಕಾಏಕಿಯಾಗಿ ಕಾಣಿಸಿಕೊಂಡ ನೆರೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಸುಮಾರು ನಲವತ್ತುಕ್ಕೂ ಅಧಿಕ ಕೃಷಿ ಭೂಮಿಯಲ್ಲಿ ಉದ್ದು, ಅವರೆ ಸಹಿತ ಹಲವು ಬೆಳೆ ಬೆಳೆಯಲಾಗುತ್ತಿದ್ದು, ಪದೇಪದೇ ಉಂಟಾಗುವ ಉಪ್ಪುನೀರಿನ ಕೃತಕ ನೆರೆಯಿಂದಾಗಿ ಕೃಷಿ ಜೊತೆಗೆ ಕೃಷಿ ಭೂಮಿ ಬರಡಾಗುತ್ತಿದೆ. ಇನ್ನೂ ಕೆಲವೆಡೆ ತರಕಾರಿಗಳನ್ನು […]