ಕಾರ್ಕಳ: ಯುವತಿಯರಿಗೆ ಅಶ್ಲೀಲ ವಿಡಿಯೋ ಇರುವುದಾಗಿ ಬೆದರಿಕೆ; ಆರೋಪಿಯ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣ ಮೂಲಕ ಯುವತಿಯರ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರ ಅಶ್ಲೀಲ ವಿಡಿಯೋ ಇರುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದ ಆರೋಪದ ಮೇರೆಗೆ ಕಾರ್ಕಳ ಈದು ಗ್ರಾಮದ ಸತೀಶ್ ಹೊಸ್ಮಾರು (36) ಎಂಬಾತನನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಯುವತಿಯರ ಮೊಬೈಲ್ ನಂಬರನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಐಡಿ ಮೂಲಕ ಪಡೆದು ಅವರಿಗೆ ನಿಮ್ಮ ಅಶ್ಲೀಲ ವಿಡಿಯೋ ನನ್ನಲ್ಲಿ ಇರುವುದಾಗಿ ಬೆದರಿಕೆ ಹೇಳಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡುವುದಾಗಿ […]
ಉಡುಪಿ: ಸಾಯಿ ಸೋಶಿಯಲ್ ಸರ್ವಿಸ್ ಗ್ರೂಪ್ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ಆಯ್ಕೆ

ಸಂತೆಕಟ್ಟೆ: ಸಾಯಿ ಪ್ರಸಾದ್ ಗ್ರೂಪ್ ಸಂತೆಕಟ್ಟೆ ಇದರ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ಅವರು ಆಯ್ಕೆ ಆಗಿರುತ್ತಾರೆ. ನೂತನ ಪದಾಧಿಕಾರಿಗಳಾಗಿ, ಶ್ರೀಮತಿ ಪ್ರೀತಿ, ಪ್ರಶಾಂತ್ ಅಮೀನ್, ಪ್ರೀತಿ ಪ್ರಸಾದ್,ಗೌರವ ಸಲಹೆಗರಾಗಿ, ಪುರಂದರ್ ಸಾಲಿಯಾನ್, ಹರೀಶ್ ಅಂಬಲಪಾಡಿ ಆಯ್ಕೆ ಆಗಿರುತ್ತಾರೆ. ಸಂಸ್ಥೆಯು ಹಲವು ವರ್ಷಗಳಿಂದ ಬಡ ಅನಾರೋಗ್ಯ ಪೀಡಿತ ಮಕಳ ಚಿಕಿತ್ಸೆ ಗೆ ನೆರವು ನೀಡುವುದು ಮುಖ್ಯ ಉದ್ದೇಶವಾಗಿದೆ. ಈ ಒಂದು ಕಾರ್ಯಕ್ಕೆ ಊರಿನ ದಾನಿಗಳು ಹಾಗೂ ನಮ್ಮ ಸಂಸ್ಥೆಯ ಸದಸ್ಯರ ಸಹಕಾರದಿಂದ ನಡೆದಿದೆ. ಈ ಎಲ್ಲಾ ಕಾರ್ಯಕ್ರಮ ಸ್ಥಾಪಕ […]
ಉಡುಪಿ: ವಕೀಲರ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟಕ್ಕೆ ಚಾಲನೆ

ಉಡುಪಿ: ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಮ್‌ಜಿಎಮ್ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಹಾಗು ಹೈಕೋರ್ಟ್ ನ್ಯಾಯಾಧೀಶ ಕಾಮೇಶ್ವರ್ ರಾವ್ ಮಾತನಾಡಿ, ವಕೀಲರು ಹಾಗೂ ನ್ಯಾಯಧೀಶರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಕಾನೂನು ವ್ಯವಸ್ಥೆಯಲ್ಲಿ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ವಕೀಲರು ಪ್ರಕರಣಗಳನ್ನು ಜಯ ಸಾಧಿಸಲು ಸಾಕಷ್ಟು ಅಧ್ಯಯನ, […]