ಪೆರ್ಡೂರು: ಪಾಡಿಗಾರ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಪೆರ್ಡೂರು: ಅನಾರೋಗ್ಯದ ನಡುವೆ ತೀರಾ ಬಡತನದಲ್ಲಿ ಜೀವನ ಸಾಗಿಸಿದ್ದ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಟ್ಟ ಪೆರ್ಡೂರು ಗೆಳೆಯರ ಬಳಗದ ತಂಡಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ 14 ವರ್ಷಗಳಿಂದ ಪೆರ್ಡೂರು ಸುತ್ತಮುತ್ತ ಪ್ರದೇಶಗಳಲ್ಲಿ ಸಮಾಜಮುಖಿ ಚಟುವಟಿಕೆ ಜೊತೆ ಅಸಕ್ತರಿಗೆ ಸಹಾಯಧನ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸಹಾಯ, ರಕ್ತದಾನ ಆರೋಗ್ಯ ತಪಾಸಣಾ ಶಿಬಿರಗಳು, ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಸೇರಿದಂತೆ ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಮಿಕ್ಕಿ ಸಹಾಯಸ್ತ ಚಾಚುತ್ತ ಬಂದಿರುವ ಗೆಳೆಯರ ಬಳಗ ಪೆರ್ಡೂರು ಸಂಘಟನೆ ಇದೀಗ […]
ಬೆಂಗಳೂರು: ಹುರಿದ ಹಸಿರು ಬಟಾಣಿ ಕಾಳಿನ ಮಾದರಿಗಳು ಅಸುರಕ್ಷಿತ: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆ ವರದಿ

ಬೆಂಗಳೂರು: ಹುರಿದ ಹಸಿರು ಬಟಾಣಿ ಕಾಳಿನ 31 ಮಾದರಿಗಳನ್ನು ಕೃತಕ ಬಣ್ಣಗಳ ಪರೀಕ್ಷೆಗೊಳಪಡಿಸಿರುವ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆ, ಈ ಪೈಕಿ 26 ಮಾದರಿಗಳು ಅಸುರಕ್ಷಿತ ಎಂದು ಘೋಷಿಸಿದೆ. ಒಟ್ಟು 106 ಹುರಿದ ಹಸಿರು ಬಟಾಣಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇನ್ನುಳಿದ ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಹೊರಡಿಸಿದ ಪ್ರಕಟನೆಯನ್ವಯ ಇಡೀ ರಾಜ್ಯಾದ್ಯಂತ ನಡೆಯುತ್ತಿರುವ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪರೀಕ್ಷೆ ಅಭಿಯಾನದ ಭಾಗವಾಗಿ ಈ ಪರೀಕ್ಷೆಯನ್ನು […]
ಉಡುಪಿ: ಕರ್ನಾಟಕ ಬ್ಯಾಂಕ್ – ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಉಡುಪಿ: ಕರ್ನಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ಸಂಭ್ರಮದ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನ ಬ್ರಾಹ್ಮಿ ಸಭಾಭವನದಲ್ಲಿ ಸಾರ್ವಜನಿಕ ಬಳಕೆಗಾಗಿ ಉತ್ಕೃಷ್ಟ ಗುಣಮಟ್ಟದ ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿರುವ ಯು.ವಿ. ಫಿಲ್ಟರೇಷನ್ ತಂತ್ರಜ್ಞಾನದ ಪ್ರತಿಷ್ಠಿತ ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಪ್ಮೆಂಟ್ ನಿರ್ಮಿತ ಶುದ್ದ ಬಿಸಿನೀರು, ಸಾಮಾನ್ಯ ಹಾಗೂ ತಣ್ಣೀರಿನ ಆಯ್ಕೆಗಳ ಮೂರು ನಳಿಕೆಗಳನ್ನು ಹೊಂದಿರುವ ಶುದ್ಧ ಕುಡಿಯುವ ನೀರಿನ ಎರಡು ಘಟಕಗಳನ್ನು ಕರ್ನಾಟಕ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ […]
ಮಾರ್ಚ್ 9ರಂದು ಹಿರಿಯಡ್ಕದ ಮುಂಡುಜೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹಿರಿಯಡಕ:ಸಹಾಯ ಹಸ್ತ ಮುಂಡುಜೆ, ಹಿರಿಯಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಿರಿಯಡಕ ವಲಯಇವರ ವತಿಯಿಂದ ಸುಧಾಕರ ಪೂಜಾರಿ ಅಭಿಮಾನಿ ಸಂಘ(ರಿ.) ಬೊಮ್ಮರೆಬೆಟ್ಟು ಕುಯಿಲಾಡಿ ಫ್ರೆಂಡ್ಸ್ ಕುಯಿಲಾಡಿ, ಎಂ.ಜೆ ಫ್ರೆಂಡ್ಸ್, ಮುಂಡುಜೆ ರಕ್ತನಿಧಿ ವಿಭಾಗ, ಕೆಎಂಸಿ, ಮಣಿಪಾಲ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ದಿನಾಂಕ: 09.03.2025ನೇ ಆದಿತ್ಯವಾರ ಸಮಯ: ಬೆಳಿಗ್ಗೆ 8.30ರಿಂದ 1.00ರವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಂಡುಜೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901876659, 9591964705
ಮಾ.2ರಂದು ಡಿಸಿಎಂ ಡಿ.ಕೆ. ಶಿವಕುಮಾರ್ ಉಡುಪಿಗೆ ಭೇಟಿ.

ಉಡುಪಿ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾ.2 ರಂದು ಉಡುಪಿಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ತಿಳಿಸಿದ್ದಾರೆ. ನಾಯರ್‌ಕೆರೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮಾ.2ರ ರವಿವಾರ ಬೆಳಗ್ಗೆ ಕಾಪುವಿಗೆ ಆಗಮಿಸುವ ಡಿಕೆಶಿ ಅವರು ಅಲ್ಲಿ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು […]