ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ 2025 ರ ಅಪರೂಪದ ರೋಗಗಳ ಬಗ್ಗೆ ಬೀದಿ ನಾಟಕ ಜಾಗೃತಿ ಅಭಿಯಾನ ಕಾರ್ಯಕ್ರಮ

ಮಣಿಪಾಲ: ಅಪರೂಪದ ಕಾಯಿಲೆಗಳ ದಿನವನ್ನು ಗುರುತಿಸಿ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ತಳಿಶಾಸ್ತ್ರ (ಮೆಡಿಕಲ್ ಜೆನೆಟಿಕ್ಸ್ ) ವಿಭಾಗವು ಇಂದು ಫೆಬ್ರವರಿ 27 ರಂದು ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು. ಪ್ರತಿ ವರ್ಷ ಫೆಬ್ರವರಿ 28 ರಂದು ಜಾಗತಿಕವಾಗಿ ಅಪರೂಪದ ಕಾಯಿಲೆಗಳ ದಿನವನ್ನು ಆಚರಿಸಲಾಗುತ್ತದೆ, 2025 ರ ಥೀಮ್ “ನೀವು ಊಹಿಸುವುದಕ್ಕಿಂತ ಹೆಚ್ಚು: ಅಪರೂಪದ ಅನುಭವಗಳ ಸಂಕಲನ”. ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ […]
ಶಿವಪಾಡಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಐದು ದಿನಗಳ “ಶಿವಪಾಡಿ ವೈಭವ”ಕ್ಕೆ ಸಂಭ್ರಮದ ತೆರೆ

ಉಡುಪಿ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಮತ್ತು ಶಿವಪಾಡಿ ವೈಭವ ಆಚರಣ ಸಮಿತಿಯಿಂದ ಆಯೋಜಿಸಿದ್ದ ಐದು ದಿನಗಳ “ಶಿವಪಾಡಿ ವೈಭವ” ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಮುಕ್ತಾಯಗೊಂಡಿತು. ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, ದೇವಸ್ಥಾನಗಳು ಧಾರ್ಮಿಕ ಶ್ರದ್ಧಾ ಕೇಂದ್ರದ ಜತೆಗೆ ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಕೇಂದ್ರವಾಗುತ್ತಿವೆ. ದೇಶದಲ್ಲಿ ಹೊಸ ಪರಿವರ್ತನೆಯ ಕಾಲಘಟ್ಟ ಇದಾಗಿದೆ. ದೇಶದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾರ್ಯವನ್ನು […]
ಶಿಕ್ಷಕರಾಗುವವರಿಗೆ ಉಡುಪಿಯಲ್ಲಿದೆ ಒಂದು ಅದ್ಬುತ ಅವಕಾಶ: ಶಿಕ್ಷಾ ಮಾಂಟೆಸ್ಸರಿ ನಿಮ್ಮ ಶಿಕ್ಷಕ ವೃತ್ತಿಯ ಕನಸನ್ನು ನನಸಾಗಿಸುತ್ತದೆ

ಇದೀಗ ಉಡುಪಿಯಲ್ಲಿ ಆರಂಭಗೊಂಡ ಶಿಕ್ಷ ಮಾಂಟೆಸ್ಸರಿ ತರಬೇತಿ ಸಂಸ್ಥೆಯಲ್ಲಿ ಮಾಂಟೆಸ್ಸರಿ ತರಬೇತಿಗಾಗಿ ಪ್ರವೇಶಾತಿ ಆರಂಭವಾಗಿದೆ .100% ಉದ್ಯೋಗಾವಕಾಶವಿದ್ದು, ಪಿಯುಸಿ ಅಥವಾ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಸಂಪರ್ಕಿಸಿ:📞9880093063 📩@[email protected] ಶಿಕ್ಷಾ ಮಾಂಟೆಸ್ಸರಿ ತರಬೇತಿ ಸಂಸ್ಥೆ, ರಮೇಶ್ ಭಟ್ ಕಾಂಪ್ಲೆಕ್ಸ್, 2 ನೇ ಮಹಡಿ, ಎದುರು. ವೈಕುಂಠ ಬಾಳಿಗಾ ಕಾನೂನು ಕಾಲೇಜು, ಕುಂಜಿಬೆಟ್ಟು, ಉಡುಪಿ
ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸಲು ಬಜೆಟ್ ನಲ್ಲಿ ಅನುದಾನ ಒದಗಿಸಿ; ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಗ್ರಹ

ಉಡುಪಿ: ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸಲು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅನುದಾನ ಒದಗಿಸಿ ಅನುಮೋದನೆ ನೀಡುವಂತೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಗ್ರಹಿಸಿದೆ. ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ಮಾತನಾಡಿ, ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪಿಸುವುದು ಕರಾವಳಿ ಭಾಗದ ಉಭಯ ಜಿಲ್ಲೆಗಳ ರೈತರ ಬಹುದಿನದ ಬೇಡಿಕೆಯಾಗಿದೆ. ಪ್ರಸ್ತುತವಿರುವ ಡಿಪ್ಲೋಮಾ ಕಾಲೇಜನ್ನು ಉನ್ನತೀಕರಿಸಿ ಕೃಷಿ ಮಹಾವಿದ್ಯಾಲಯವನ್ನಾಗಿ ಪರಿವರ್ತಿಸುವುದು ಈ ಭಾಗದ ರೈತರ ಮಕ್ಕಳ ಬಹುದಿನದ ಬೇಡಿಕೆ ಎಂದರು. ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ […]
ಪರ್ಕಳ: ಕುಂಭಮೇಳದ ಗಂಗಾಜಲಕ್ಕೆ ಶಿವನ ರೂಪ ನೀಡಿದ ಭಕ್ತ

ಉಡುಪಿ: ಪರ್ಕಳದ ದಿನೇಶ್ ನಾಯಕ್ ಸಾತಾರ ಅವರು ಕುಂಭ ಮೇಳದಲ್ಲಿ ಭಾಗವಹಿಸಿ ಗಂಗಾ ಜಲವನ್ನು ಊರಿಗೆ ತಂದಿದ್ದಾರೆ. ಪ್ರಯಾಗ್ ರಾಜ್ ನಿಂದ ಊರಿಗೆ ಬರುವಾಗ ವಿಶೇಷ ವಿನ್ಯಾಸದ ನೀರಿನ ಬಾಟಲಿಯಲ್ಲಿ ಗಂಗಾಜಲ ತಂದಿದ್ದು ಗಮನ ಸೆಳೆಯುತ್ತಿದೆ. ಈ ವಿಶೇಷ ವಿನ್ಯಾಸದ ಬಾಟಲಿಯನ್ನು ಅವರು ಪರ್ಕಳದ ತಮ್ಮ ಸ್ವಾಗತ ಹೋಟೆಲ್ ನಲ್ಲಿ ಇಟ್ಟಿದ್ದು ಎಲ್ಲರ ಗಮನವನ್ನು ಗಂಗಾಜಲದ ಬಾಟಲಿ ಸೆಳೆಯುತ್ತಿದೆ. ಮೋಹನ್ ದಾಸ್ ಅವರು ಶಿವರಾತ್ರಿ ಸಂದರ್ಭ ಸದ್ಭಕ್ತರಿಗೆ ಗಂಗಾಜಲವನ್ನು ವಿತರಿಸುತ್ತಿದ್ದಾರೆ.