ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಫಲಿತಾಂಶ: ಕ್ರಿಯೇಟಿವ್ ಸಾಧನೆ

ಕಾರ್ಕಳ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿ ಎ) ವತಿಯಿಂದ ನಡೆಸಲಾದ ಜೆಇಇ ಬಿ ಆರ್ಕ್ ಮತ್ತು ಜೆಇಇ ಬಿ ಪ್ಲಾನಿಂಗ್ ನ ಫಲಿತಾಂಶ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಈ ವರ್ಷವೂ ಅತ್ಯುನ್ನತ ಫಲಿತಾಂಶ ಪಡೆದುಕೊಂಡಿದೆ. ಬಿ ಆರ್ಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ 99.4223451 ಪರ್ಸೆಂಟೈಲ್, ಸಾಚಿ ಶಿವಕುಮಾರ್ ಕಡಿ 99.3362631 ಪರ್ಸೆಂಟೈಲ್ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ. ಬಿ ಪ್ಲಾನಿಂಗ್ ಫಲಿತಾಂಶದಲ್ಲಿ ತೇಜಸ್ ವಿ ನಾಯಕ್ 99.5751775 ಪರ್ಸೆಂಟೈಲ್ ಗಳಿಸಿದ್ದಾರೆ. ಹೀಗೆ […]

ಡಾ. ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ಉಡುಪಿ, ಫೆ.26: ಉದಾತ್ತ ಸೇವಾ ಮನೋಭಾವದಿಂದ ಮಾಡುವ ಯಾವುದೇ ಕೆಲಸ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯು ಇಂತಹ ಸೇವೆಯನ್ನು ಸಮುದಾಯಕ್ಕೆ ನೀಡಲು ಒಂದು ಒಳ್ಳೆಯ ವೇದಿಕೆಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಉತ್ತಮ ಅವಕಾಶಗಳನ್ನು ಬಳಸಿಕೊಂಡರೆ ವಿದ್ಯಾರ್ಥಿ ಜೀವನದಲ್ಲಿಯೇ ಸಫಲತೆಯನ್ನು ಪಡೆಯ ಬಹುದು ಎಂದು ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಇಲ್ಲಿನ ಸಭಾಪತಿ, ಬಸ್ರೂರು ರಾಜೀವ ಶೆಟ್ಟಿ ಅಭಿಪ್ರಾಯ ಪಟ್ಟರು. ಇವರು ಜಿಲ್ಲೆಯ ಡಾ. ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ […]

ಮಂಗಳೂರು: ದ್ವಿಚಕ್ರ ವಾಹನ ಢಿಕ್ಕಿ; ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.

ಬಂಟ್ವಾಳ : ದ್ವಿಚಕ್ರ ವಾಹನ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನ ಎಲ್‌ಐಸಿ ಕಚೇರಿ ಮುಂಭಾಗ ನಡೆದಿದೆ. ಉಪ್ಪಿನಂಗಡಿ ಸಮೀಪದ ನಟ್ಟಿಬೈಲು ಎಂಬಲ್ಲಿನ ನಿವಾಸಿ ಕೆ.ಸದಾರಾಮ ಅವರ ಪತ್ನಿ ಸರಸ್ವತಿ (50) ಮೃತ ಮಹಿಳೆ. ಮೃತರ ಪತಿ ಎಲ್‌ಐಸಿ ಏಜೆಂಟ್ ಆಗಿದ್ದು, ಕಚೇರಿಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಸರಸ್ವತಿ ಅವರು ಬಂದಿದ್ದರು. ಎಲ್‌ಐಸಿ ಕಚೇರಿಯಿಂದ ಮರಳುತ್ತಿರುವಾಗ, ಉಪ್ಪಿನಂಗಡಿಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ತಲೆಯ ಭಾಗಕ್ಕೆ […]

ಬೈಂದೂರು: ಕಾಲೇಜು ವಿದ್ಯಾರ್ಥಿನಿಯ ಚಿನ್ನದ ಸರ ಅಪಹರಣ: ಪ್ರಕರಣ ದಾಖಲು

ಬೈಂದೂರು: ಕಾಲೇಜು ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯ ಚಿನ್ನವನ್ನು ಬೈಕಿನಲ್ಲಿ ಬಂದ ಅಪರಿಚಿತರು ಅಪರಹರಿಸಿ ಪರಾರಿಯಾಗಿರುವ ಘಟನೆ ಕರಿಕಟ್ಟೆ ಎಂಬಲ್ಲಿ ಫೆ.24ರಂದು ಸಂಜೆ ವೇಳೆ ನಡೆದಿದೆ. ಕುಂದಾಪುರದ ಬಿಬಿ ಹೆಗ್ಡೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ ದೀಕ್ಷಾ(18) ಎಂಬವರು ಕಾಲೇಜು ಮುಗಿಸಿ ಕೊಂಡು ಕರಿಕಟ್ಟೆ ಕಡೆಯಿಂದ ಅಳ್ವೆಗದ್ದೆ ಕಡೆಗೆ ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು, ದೀಕ್ಷಾ ಅವರನ್ನು ಅಡ್ಡಗಟ್ಟಿ ಕುತ್ತಿಗೆಯಲ್ಲಿದ್ದ 80,000ರೂ. ಮೌಲ್ಯದ ಸುಮಾರು […]

ಹಿರಿಯಡಕ: ಮಹಿಳೆ ಆತ್ಮಹತ್ಯೆ.

ಹಿರಿಯಡಕ: ಸೊಂಟ ನೋವಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಫೆ.23ರಂದು ರಾತ್ರಿ ಮನೆಯಲ್ಲಿ ಇಲಿ ಪಾಷಣಾ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪಾರ್ವತಿ(75) ಎಂಬವರು ಫೆ.24ರಂದು ರಾತ್ರಿ 12ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.