ಉಡುಪಿ: ಮಾ.1ರಂದು ಉಡುಪಿ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಉದ್ಘಾಟನೆ

ಉಡುಪಿ: ಉಡುಪಿ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಉದ್ಘಾಟನಾ ಸಮಾರಂಭ ಮತ್ತು ಲೋಗೊ ಅನಾವರಣ ಕಾರ್ಯಕ್ರಮ ಮಾ.1 ರಂದು ಸಂಜೆ 6.30 ಕ್ಕೆ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ರಂಜನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ ಲೋಗೊ ಅನಾವರಣಗೊಳಿಸುವರು ಎಂದು ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು […]

ಸಂಜಯ್ ದತ್ ಅಭಿನಯದ “ದಿ ಭೂತನಿ” ಚಿತ್ರ ಏ.18 ರಂದು ಬಿಡುಗಡೆ.

ನವದೆಹಲಿ: ಬಾಲಿವುಡ್‌ ನಟ ಸಂಜಯ್ ದತ್‌ ಅಭಿನಯದ ಹಾರರ್‌ ಕಾಮಿಡಿ ಚಿತ್ರ ‘ದಿ ಭೂತನಿ’ ಏ.18ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಸಿದ್ಧಾಂತ್ ಸಚ್‌ದೇವ್‌ ನಿರ್ದೇಶನದ ಈ ಚಿತ್ರದಲ್ಲಿ ಮೌನಿ ರಾಯ್‌, ಪಲಕ್‌ ತಿವಾರಿ, ಸನ್ನಿ ಸಿಂಗ್ ಮತ್ತು ಆಸಿಫ್‌ ಖಾನ್ ಕಾಣಿಸಿಕೊಂಡಿದ್ದಾರೆ.ಸೋಹಮ್ ರಾಕ್‌ಸ್ಟಾರ್‌ ಎಂಟರ್‌ಟೈನ್‌ಮೆಂಟ್‌ ಮತ್ತು ತ್ರೀ ಡೈಮೆನ್ಶನ್‌ ಮೋಶನ್ ಪಿಕ್ಷರ್‌ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಯುಟ್ಯೂಬ್‌ನಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಚಿತ್ರ ಬಿಡುಗಡೆಯ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿದ್ದಾರೆ.

ಮಾ.2ರಂದು ಕಾರ್ಕಳದಲ್ಲಿ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮ: ಡಿಸಿಎಂ ಶಿವಕುಮಾರ್ ಭಾಗಿ

ಉಡುಪಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾ.2 ರಂದು ಸಂಜೆ 4 ಗಂಟೆಗೆ ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆಯುವ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಪುವಿನ ಹೊಸ ಮಾರಿಗುಡಿಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ 12.30 ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. ನಂತರ 2.30ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ವಾಹನ ಜಾಥಾದ ಮೂಲಕ ಕಾರ್ಕಳಕ್ಕೆ ತೆರಳಲಿದ್ದಾರೆ ಎಂದು […]

ಉಡುಪಿ:2ನೇ ದಿನಕ್ಕೆ ಮುಂದುವರಿದ ಸಕ್ಕರೆ ಕಾರ್ಖಾನೆ ಧರಣಿ

ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಹುಕೋಟಿ ವಂಚನೆಯ ಮತ್ತು ಅದರ ತನಿಖೆಯ ವಿಳಂಬ ನೀತಿಯ ವಿರುದ್ಧ ನಡೆಯುತ್ತಿರುವ ಅನ್ನದಾತರ ಅಹೋರಾತ್ರಿ ಸತ್ಯಗ್ರಹ ಧರಣಿಯು ಇಂದು 2ನೇ ದಿನಕ್ಕೆ ಕಾಲಿರಿಸಿದ್ದು ಇಂದಿನ ಧರಣಿಯ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾಪು ವಲಯದ ರೈತ ಮುಖಂಡರು ಭಾಗವಹಿಸಿದರು. ಸರ್ಕಾರವು ಕೂಡಲೇ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡಲ್ಲಿ ತನಿಖೆಯನ್ನು ಮುಂದುವರಿಸಲು ಅವಕಾಶ ಮಾಡಿ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆವು. ಜಿಲ್ಲಾ […]

ಉಡುಪಿಯಲ್ಲಿ ಸಂಭ್ರಮದ ಮಹಾ ಶಿವರಾತ್ರಿ

ಉಡುಪಿ: ಉಡುಪಿ ನಗರದ ರಥಬೀದಿ ಹಾಗೂ ಹೊರ ವಲಯದಲ್ಲಿರುವ ಶಿವ ಮಂದಿರಗಳಲ್ಲಿ ಇಂದು ಸಂಭ್ರಮದ ಮಹಾ ಶಿವರಾತ್ರಿ ಆಚರಣೆ ನಡೆಯಿತು. ಉಡುಪಿ ರಥಬೀದಿಯ ಅನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ, ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ, ಪರ್ಕಳ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ಸೇರಿದಂತೆ ವಿವಿಧ ಶಿವ ದೇವಾಲಯಗಳಲ್ಲಿ ಬೆಳಗ್ಗಿನ ಜಾವದಲ್ಲಿಯೇ ಭಕ್ತಾದಿಗಳು ಆಗಮಿಸಿ ಭಗವಾನ್‌ ಶಿವನ ದರ್ಶನವನ್ನು ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ದೇವಾಲಯಗಳನ್ನು ಬಗೆಬಗೆಯ ಹೂವುಗಳ ತೋರಣಗಳಿಂದ ಆಕರ್ಷಕವಾಗಿ ಅಲಂಕಾರಗೊಳಿಸಲಾಗಿತ್ತು. ಭಕ್ತಾದಿಗಳು ರುದ್ರಾಭಿಷೇಕ ಸೇರಿದಂತೆ ವೈವಿಧ್ಯಮಯ ಸೇವೆಗಳನ್ನು ಭಗವಂತನಿಗೆ […]