ಇಂದು MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ‘CAT EYE NAIL ART’ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್’ನಲ್ಲಿ ‘CAT EYE NAIL ART’ ಪ್ರಮಾಣೀಕರಣದೊಂದಿಗೆ ಪ್ರಾಯೋಗಿಕ ಕಾರ್ಯಾಗಾರ ಫೆ.25 (ಇಂದು) ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು. (ವಿಶೇಷವಾಗಿ ಉಗುರು ಕಲಾವಿದರು, ಸಲೂನ್ ಮಾಲೀಕರು, ಬ್ಯೂಟಿಷಿಯನ್). ಶುಲ್ಕ ಕೇವಲ ರೂ.500 ಸೀಮಿತ ಸ್ಥಳಗಳು ಮಾತ್ರ ಲಭ್ಯವಿದೆ. ಆಸಕ್ತರು ಸಂಪರ್ಕಿಸಬಹುದು:8123165068, 8123163935ಒರೇನ್ ಇಂಟರ್ನ್ಯಾಷನಲ್, MSDC ಕಟ್ಟಡ, 3 ನೇ ಮಹಡಿ, ಈಶ್ವರ್ ನಗರ, ಮಣಿಪಾಲ.
ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಶಿಕಲಾ ಮರಾಟೆ ಅವರಿಗೆ ನುಡಿನಮನ.

ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಶಿಕಲಾ ಮರಾಟೆಯವರಿಗೆ ನುಡಿನಮನ ಕಾರ್ಯಕ್ರಮವು ಪೆಬ್ರವರಿ 23ರಂದು ಜರಗಿತು. ಸಮರ್ಪಣಾ ಭಾವ, ಕಲಿಯುವ ಹುಮಸ್ಸು, ಸದಾ ನಗು ಮುಖ, ನಮ್ರತೆ, ಸದಾ ಸೇವಾಭಾವದಿಂದ ಮುಂದುವರಿಯುವಂತ ಶಶಿಕಲಾ ಮರಾಟೇಯವರ ನಿಧನವು ಮನೆಯವರಿಗೆ ತುಂಬಲಾಗದ ನಷ್ಟವೆಂದು ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ತಿಳಿಸಿದರು. ಸಮಾರಂಭದಲ್ಲಿ ಶಶಿಕಲಾರವರ ಪತಿ ರಮಾನಾಥ ಮರಾಟೆ, ಪುತ್ರ ಬ್ರಹ್ಮಾಂನಂದ ಮರಾಟೆ ಉಪಸಿತರಿದ್ದರು.
ರಾಜ್ಯ ಬಜೆಟ್ ನಲ್ಲಿ ಮದ್ಯ ಮಾರಾಟ ಸನ್ನದುದಾರರ ಬೇಡಿಕೆ ಈಡೇರಿಸುವಂತೆ ಮನವಿ

ಉಡುಪಿ: 2025-26ನೇ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಎಲ್ಲ ವರ್ಗದ ಮದ್ಯ ಮಾರಾಟ ಸನ್ನದುದಾರರ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಾಯಿತು. ಅಸೋಸಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಮಾತನಾಡಿ, ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಟ ಶೇ.20 ಲಾಭಾಂಶ ನೀಡಬೇಕು. ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು. ಯಾವುದೇ […]
ಕಾಪು: ದಫನ ಮಾಡಿದ್ದ ಶ್ವಾನದ ಪೋಸ್ಟ್ ಮಾರ್ಟಂ

ಉಡುಪಿ: ಸಾಕುನಾಯಿಯನ್ನು ಕುಟುಂಬ ಸದಸ್ಯರಂತೆಯೇ ಕಾಣುವವರಿದ್ದಾರೆ.ಅದು ಸತ್ತರೂ ತಮ್ಮದೇ ಮನೆಯ ಸದಸ್ಯರು ಅಗಲಿದರೇನೋ ಎಂಬಂತೆ ದುಃಖ ಪಡುವವರಿದ್ದಾರೆ. ಕಾಪುವಿನಲ್ಲಿ ಇಂತಹದ್ದೇ ಒಂದು ಶ್ವಾನ ಪ್ರೇಮದ ಪ್ರಸಂಗ ನಡೆದಿದ್ದು ಅದು ಸತ್ತು ದಫನ ಮಾಡಿದ ಬಳಿಕವೂ ಹೊರತೆಗೆದು ಪೋಸ್ಟ್ ಮಾರ್ಟಂ ಮಾಡಿದ ಪ್ರಕರಣ ನಡೆದಿದೆ. ಕಾಪುವಿನ ಸಾಮಾಜಿಕ ಕಾರ್ಯಕರ್ತೆ ಮಣಿಪುರ ಬಡಗುಮನೆಯ ಬಿಂದು ಶೆಟ್ಟಿ ಅವರ ಸಾಕುನಾಯಿ ಸತ್ತು ಹೋಗಿತ್ತು. ಅವರು ಅದನ್ನು ಮನೆಯ ವಠಾರದಲ್ಲಿ ಹೂತು ಹಾಕಿದ್ದರು. ಆದರೆ ತಮ್ಮ ಪ್ರೀತಿಯ ಸಾಕುನಾಯಿಗೆ ಯಾರೋ ಆಹಾರದಲ್ಲಿ ವಿಷ […]