ಉಡುಪಿ:ತ್ರಿಶಾ ಕ್ಲಾಸಸ್ : ಸಿಎಸ್ ಪ್ರೊಫೆಷನಲ್ ವೈಷ್ಣವಿ ಹೆಬ್ಬಾರ್ ಉತ್ತೀರ್ಣ

ಉಡುಪಿ:ಅಖಿಲ ಭಾರತ ಮಟ್ಟದಲ್ಲಿ ನಡೆದ ಕಂಪೆನಿ ಸೆಕ್ರೆಟರಿ ಪ್ರೊಫೆಷನಲ್ ಪರೀಕ್ಷೆಯಲ್ಲಿ ವೈಷ್ಣವಿ ಹೆಬ್ಬಾರ್ ಉತ್ತೀರ್ಣರಾಗಿದ್ದಾರೆ. ಅವರು ಉಡುಪಿ, ಪಣಿಯಾಡಿಯ ರಾಜೇಂದ್ರನಾಥ್ ಹೆಬ್ಬಾರ್ ಹಾಗೂ ಲತಾ ಹೆಬ್ಬಾರ್ ದಂಪತಿಗಳ ಸುಪುತ್ರಿಯಾಗಿದ್ದು, ಬೆಂಗಳೂರಿನ ಬಿ ಎಮ್ ಪಿ & ಕೋ ಎಲ್ ಎಲ್ ಪಿ ಸಂಸ್ಥೆಯಲ್ಲಿ ತಮ್ಮ ಪ್ರಾಕ್ಟಿಕಲ್ ಟ್ರೇನಿಂಗ್ ಪೂರೈಸಿಕೊಂಡಿದ್ದಾರೆ. ಸಿ ಎಸ್ ಫೌಂಡೇಶನ್, ಸಿ ಎಸ್ ಎಕ್ಸಿಕ್ಯೂಟಿವ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ತ್ರಿಶಾ ಸಂಸ್ಥೆಯ […]
ಉಡುಪಿ:ತ್ರಿಶಾ ಕ್ಲಾಸಸ್: 25 ದಿನಗಳ ಸಿಎ ಫೌಂಡೇಶನ್ ಕ್ರ್ಯಾಶ್ ಕೋರ್ಸ್

ಉಡುಪಿ:ತ್ರಿಶಾ ಕ್ಲಾಸಸ್ ವತಿಯಿಂದ ಈ ಬಾರಿ ಮೇ ತಿಂಗಳಲ್ಲಿ ಸಿಎ ಫೌಂಡೇಶನ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕ್ರ್ಯಾಶ್ ಕೋರ್ಸ್ ಆರಂಭವಾಗುತ್ತಿದ್ದು, ಮಾರ್ಚ್ 24ರಿಂದ ತರಗತಿಗಳು ಆರಂಭವಾಗಲಿದೆ. ನುರಿತ ಅಧ್ಯಾಪಕ ವೃಂದ, ರಿವಿಜನ್ ಪುಸ್ತಕಗಳು, , ಐಸಿಎಐ ಮಾದರಿಯ ಪೂರ್ವ ಸಿದ್ಧತಾ ಪರೀಕ್ಷೆಗಳು , ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು ಇತ್ಯಾದಿಗಳು ತರಗತಿಯ ವೈಶಿಷ್ಟ್ಯಗಳಾಗಿವೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸ, ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಈ ಕ್ರ್ಯಾಶ್ ಕೋರ್ಸ್ ನ್ನು ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು […]
ಉಡುಪಿ: ಶರಣಾದ ನಾಲ್ವರು ನಕ್ಸಲರು ಕಾರ್ಕಳ ನ್ಯಾಯಾಲಯಕ್ಕೆ ಹಾಜರು

ಉಡುಪಿ: ನಕ್ಸಲ್ ಶರಣಾಗತಿ ವಿಚಾರವಾಗಿ ತನಿಖಾ ಪ್ರಕ್ರಿಯೆ ಮುಂದುವರೆದಿದ್ದು, ಇವತ್ತು ನಾಲ್ವರು ನಕ್ಸಲರು ಕಾರ್ಕಳ ನ್ಯಾಯಾಲಯದ ಮುಂದೆ ಹಾಜರಾದರು. ಕಾರ್ಕಳ ಮತ್ತು ಹೆಬ್ರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 15 ಪ್ರಕರಣಗಳ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಜಯಣ್ಣ, ಮುಂಡಗಾರು ಲತಾ, ವನಜಾಕ್ಷ ಮತ್ತು ಸುಂದರಿ ಅವರನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದರು. ಶರಣಾದ 6 ಮಂದಿಯ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ಕಸ್ಟಡಿಗೆ ಕೇಳುವ ಸಾಧ್ಯತೆ […]
ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 20ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

ಉಡುಪಿ: ರಾಜ್ಯ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ ತರಬೇತಿ ನೀಡುವ ಅರ್ಹ ಸಂಘ ಸಂಸ್ಥೆ ಗಳಿಗೆ ಅನುದಾನ ನೀಡಲಾಗುತ್ತದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕಾಸರಗೋಡು ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 20ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ […]
ಬೆಳ್ಳೆ: ಟಿಪ್ಪರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತ್ಯು

ಉಡುಪಿ: ಟಿಪ್ಪರ್ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ಳೆ ಗ್ರಾಮದ ಕಟ್ಟಿಂಗೇರಿ ಗಣಪಣಕಟ್ಟೆ ತಿರುವಿನ ಬಳಿ ಮಂಗಳವಾರ (ಫೆ.25ರಂದು) ಮುಂಜಾನೆ ನಡೆದಿದೆ. ಮೃತರನ್ನು ಬೈಂದೂರಿನ ಸುಬ್ರಮಣ್ಯ ಆಚಾರ್ಯ (40) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ ಸುಮಾರಿಗೆ ಈ ಘಟನೆ ನಡೆದಿದೆ. ಪಳ್ಳಿಯ ಕೋರೆಗೆ ಜಲ್ಲಿ ತರಲು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದರ ಪರಿಣಾಮ ಚಾಲಕ ಸುಬ್ರಮಣ್ಯ ಟಿಪ್ಪರ್ ಅಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಶಿರ್ವ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. […]