ತೆರೆಗೆ ಮೊದಲೇ ಸಖತ್ ಸದ್ದು ಮಾಡ್ತಿದೆ ಟಾಕ್ಸಿಕ್ ಸಿನಿಮಾ ! ಏನಿದೆ ಅಂತದ್ದು?

ಕೆಜಿಎಫ್ ಬಳಿಕ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆರೆಗೂ ಮೊದಲೇ ಈ ಸಿನಿಮಾ ಮಿಂಚಿನ ಸಂಚಾರ ಉಂಟು ಮಾಡ್ತಿದೆ. ಹೌದು, ಅಂದ ಹಾಗೆ  ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಜೊತೆ ಯಶ್ ಟಾಕ್ಸಿಕ್ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಚಿತ್ರೀಕರಣಗೊಳ್ಳುತ್ತಿದ್ದು. ಆ ಕಾರಣಕ್ಕೆ ಸುದ್ದಿಯಲ್ಲಿದೆ. ಮತ್ತೊಂದ ವಿಶೇಷ ಅಂದ್ರೆ ಇದು ಭಾರತದ ಮೊದಲ ಬಿಗ್ ಬಜೆಟ್​ ಸಿನಿಮಾ ಇದಾಗಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿರುವುದು. ಈ ಮೂಲಕ […]

ಜೆಇಇ ಮೈನ್ಸ್ ಬಿ‌.ಆರ್ಚ್ ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಶ್ರೀಯಾಗೆ 98.22 ಪರ್ಸಂಟೈಲ್.

ಕುಂದಾಪುರ: ರಾಷ್ಟ್ರೀಯ ಮಟ್ಟದ ಜೆಇಇ ಮೈನ್ಸ್ ಬಿ.ಆರ್ಚ್ ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀಯಾ 98.22 ಪರ್ಸಂಟೈಲ್ ಪಡೆದು ಸಾಧನೆ ಮೆರೆದಿದ್ದಾಳೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುವುದರ ಮೂಲಕ ರಾಜ್ಯ,ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕಾಲೇಜಿನಲ್ಲಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿಗಳು ರಾಜ್ಯ, ದೇಶ-ವಿದೇಶದ ಪ್ರತಿಷ್ಟಿತ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದು ವ್ಯಾಸಾಂಗ ಮಾಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ವಾಹನಗಳಿಗೆ ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಗೆ ಮತ್ತೆ ಗಡುವು ವಿಸ್ತರಣೆ ಮಾ. 31 ಕೊನೆಯ ದಿನ

ಬೆಂಗಳೂರು, ಫೆಬ್ರವರಿ 24: ಸತತವಾಗಿ ಮತ್ತೆ ಮತ್ತೆ ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಗೆ ಗಡುವು ಮತ್ತೆ ಮತ್ತೆ ವಿಸ್ತರಣೆಯಾಗುತ್ತಲೇ ಇದೆ. ಇದೀಗ ಮತ್ತೆ ವಿಸ್ತರಣೆಯಾಗಿದ್ದು ಮಾ.31 ಕೊನೆಯ ದಿನವಾಗಿದೆ.ಈ ಕುರಿತು ರಾಜ್ಯ ಸರಕಾರ ಘೋಷಿಸಿದೆ. ಈವರೆಗೆ 6 ಬಾರಿ ಹೆಚ್​ಎಸ್​ಆರ್​ಪಿ ನಂಬರ್​​ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆಯಾಗಿದೆ. ಜನವರಿ 31ರವರೆಗೆ ನಂಬರ್​​ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿತ್ತು. ಇದೀಗ ಸಾರಿಗೆ ಇಲಾಖೆ ಮತ್ತೆ ಮಾರ್ಚ್​ 31ರವರೆಗೆ ಗಡುವು ವಿಸ್ತರಿಸಿದೆ. ಕರ್ನಾಟಕದಲ್ಲಿ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳಿವೆ. […]

ಭೂತಾರಾಧನೆಯಲ್ಲಿನ ಕಲೆ ರಂಗಕ್ಕೆ ತರುವುದು ಅಗತ್ಯ

ಉಡುಪಿ: ಭೂತಾರಾಧನೆಯ ಒಳಗೆ ಕಲೆ ಇದೆ. ಅದನ್ನು ಹೆಕ್ಕಿ ತೆಗೆದು ರಂಗಕ್ಕೆ ತರುವ ಕೆಲಸ ಆಗಬೇಕು ಎಂದು ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾದ 13ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಮೃತ ಸೋಮೇಶ್ವರ ಭೂತಾರಾಧನೆಯ ಪಾಡ್ದನಗಳನ್ನು ಇಟ್ಟುಕೊಂಡು ರಂಗಪ್ರಯೋಗ ನಡೆಸಿದ್ದರು. ಅಂಥ ಪ್ರಯೋಗ ಗಳನ್ನು ಆಧುನಿಕ ರಂಗಭೂಮಿ ಯಲ್ಲಿ ಹೆಚ್ಚಿಗೆ ಆಗಿಲ್ಲ. ಇದು ಜೇನುಗೂಡಿಗೆ ಕೈ ಹಾಕುವ ಕೆಲಸ. ಏನೋ ಮಾಡಲು ಹೋಗಿ […]

ಜೆಇಇ ಮೈನ್ (ಬಿ.ಆರ್ಕ್) ಫಲಿತಾಂಶ: ಜ್ಞಾನಸುಧಾದ ಮೂವರು ವಿದ್ಯಾರ್ಥಿಗಳಿಗೆ 99 ಕ್ಕಿಂತ ಅಧಿಕ ಪರ್ಸಂಟೈಲ್, 22 ವಿದ್ಯಾರ್ಥಿಗಳಿಗೆ 95ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ : ರಾಷ್ಟ್ರ ಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆಇಇ ಮೈನ್.ಬಿ.ಆರ್ಕ್ನ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ೯೯ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ ೨೨ ವಿದ್ಯಾರ್ಥಿಗಳಿಗೆ ೯೫ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಗಳಾದ ಕೆ.ಮನೋಜ್ ಕಾಮತ್ ೯೯.೮೨೩೩೦೫೫ ಪರ್ಸಂಟೈಲ್, ದರ್ಶನ್ ಡಿ ಬಾಯಾರ್ ೯೯.೬೪೬೬೧೧೧ ಪರ್ಸಂಟೈಲ್, ಚಿಂತನ ಜೆ. ಮೆಘವತ್ ೯೯.೨೬೧೫೦೭೮ ಪರ್ಸಂಟೈಲ್, ಆಕಾಶ್ ಎಚ್ ಪ್ರಭು ೯೮.೯೯೮೭೩೧೪ ಪರ್ಸಂಟೈಲ್, ಪ್ರಜ್ವಲ್ ನಾಯಕ್ ೯೮.೬೪೩೦೭೭೨ ಪರ್ಸಂಟೈಲ್, ಮಂಜೀತ್ […]