ಹಿರಿಯಡಕದಲ್ಲಿ “ಯುಸಿ ಸಿಟಿ” ವಸತಿ ಲೇಔಟ್ ನ ಉದ್ಘಾಟನೆ

ಉಡುಪಿ: ಹಿರಿಯಡಕ ರಾಷ್ಟ್ರೀಯ ಹೆದ್ದಾರಿ 169 ಎ ಪದವಿ ಕಾಲೇಜಿನ ಮುಂಭಾಗದಲ್ಲಿ ನಿರ್ಮಾಣಗೊಂಡಿರುವ “ಯುಸಿ ಸಿಟಿ” ವಸತಿ ಲೇಔಟ್ ನ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ,ಬೊಮ್ಮರಬೆಟ್ಟು ಗ್ರಾ.ಪಂ‌ ಅಧ್ಯಕ್ಷೆ ಜಯಂತಿ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಕಲಾಂ ಆಜಾದ್, ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಬಸ್ ಆಪರೇಟರ್ಸ್ ಅಸೋಸಿಯೇಷನ್ ನ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಸಚಿವ ಕೆ. […]

ಉಡುಪಿ: ಫೆ. 24 ರಿಂದ ಮಾ.2 ರ ವರೆಗೆ ವಾರ್ಷಿಕ ವಿಶೇಷ ಶಿಬಿರ

udupixpress

ಉಡುಪಿ : ಮಂಗಳೂರು ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿ ಇವರ ವತಿಯಿಂದ ವಾರ್ಷಿಕ ವಿಶೇಷ ಶಿಬಿರವು ಫೆಬ್ರವರಿ 24 ರಿಂದ ಮಾರ್ಚ್ 2 ರ ವರೆಗೆ ನಗರದ ಬಿಲ್ಲವ ಸೇವಾ ಸಂಘ (ರಿ), ಕಡೆಕಾರು, ಕನ್ನರ್ಪಾಡಿ ನಾರಾಯಣ ಗುರು ಸಮುದಾಯ ಭವನ, ಕಡೆಕಾರು, ಉಡುಪಿ ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಾರ್ಚ್ 2 ರಂದು ಬೆಳಗ್ಗೆ […]

ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ನಗರದ ಲಾಡ್ಜ್ವೊಂದರಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಿದ್ದ ಸೈಯದ್ ಇಮ್ರಾನ್ (42) ಎಂಬ ವ್ಯಕ್ತಿಯು ಫೆಬ್ರವರಿ 23 ರಿಂದ ನಾಪತ್ತೆಯಾಗಿರುತ್ತಾರೆ. 170 ಸೆಂ.ಮೀ ಎತ್ತರ, ದಪ್ಪ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

ಉಡುಪಿ ವಕೀಲರ ಸಂಘ: ರಾಜ್ಯಮಟ್ಟ ಕ್ರೀಡಾಕೂಟದ ಟ್ರೋಫಿ ಅನಾವರಣ

ಉಡುಪಿ: ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಮ್‌ಜಿ‌ಎಮ್ ಮೈದಾನದಲ್ಲಿ ಮಾ.1 ಮತ್ತು 2ರಂದು ಆಯೋಜಿಸಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟದ ಟ್ರೋಫಿಯನ್ನು ಸೋಮವಾರ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣನವರ್ ಅನಾವರಣಗೊಳಿಸಿದರು. ಆ ಬಳಿಕ ಮಾತನಾಡಿದ ಅವರು, ಪ್ರತಿಭೆಗಳ ಅನಾವರಣಕ್ಕೆ ಕ್ರೀಡಾಕೂಟ ಸಹಕಾರಿ. ಉಡುಪಿ ವಕೀಲರ ಸಂಘದ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ದೊರಕಿದೆ. ಸಮಾಜಮುಖಿ ಕಾರ್ಯದಲ್ಲಿ ಮುಂದಿರುವ ಉಡುಪಿ ವಕೀಲರ […]

ಉಡುಪಿ: ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದೊಂದಿಗೆ ಮಂಗಳೂರು ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಆ್ಯಂಡ್ ಡೆವಲಪ್‌ಮೆಂಟ್ ಜತೆ ಒಡಂಬಡಿಕೆ.

ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗವು ಮಂಗಳೂರಿನ ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆಯೊಂದಿಗೆ ದಿನಾಂಕ 22 ಪೆಬ್ರವರಿ 2025 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಒಡಂಬಡಿಕೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಕೌಶಲ್ಯ ತರಬೇತಿ ನೀಡುವುದಾಗಿದೆ. ಎರಡೂ ಸಂಸ್ಥೆಗಳು ಇಂದಿನ ಕ್ರಿಯಾತ್ಮಕ ವ್ಯಾಪಾರ ಪರಿಸರದ ಸಾಮಾಜಿಕ ಅಗತ್ಯಗಳಿಗೆ ಹೊಂದಿಕೆಯಾಗುವ ಪರಿವರ್ತಿತ ಕಲಿಕೆಯ ಅನುಭವಗಳನ್ನು ಅಭಿವೃದ್ಧಿಪಡಿಸಲು ತಮ್ಮ ಬದ್ಧತೆಯನ್ನು ತಿಳಿಸುವ ಉದ್ದೇಶದಿಂದ ಈ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. […]