ಮಂಗಳೂರು: ತಾಯಿ ಹಾಗೂ ಎರಡು ವರ್ಷದ ಮಗು ಕೊಳದಲ್ಲಿ ಬಿದ್ದು ಮೃತ್ಯು.

ಮಂಗಳೂರು: ಮನೆಯೊಂದರ ಬಳಿಯಿರುವ ಅಡಿಕೆ ತೋಟದಲ್ಲಿರುವ ಕೊಳದಲ್ಲಿ ಬಿದ್ದು ತಾಯಿ ಹಾಗೂ ಎರಡು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮಧ್ಯಾಹ್ನ ಬಳಿಕ ಪೆರ್ಲ ಉಕ್ಕಿನಡ್ಕ ಸಮೀಪದ ಏಳ್ಕಾನದಲ್ಲಿ ಸಂಭವಿಸಿದೆ. ಮೃತಪಟ್ಟವರು ಉಕ್ಕಿನಡ್ಕ ಬಳಿಯ ಏಳ್ಕಾನ ದಟ್ಟಿಗೆಮೂಲೆ ನಿವಾಸಿ ಈಶ್ವರ ನಾಯ್ಕರ ಪತ್ನಿ ಪರಮೇಶ್ವರಿ (42), ಪುತ್ರಿ. ಪದ್ಮಿನಿ (2) ಎಂದು ತಿಳಿಯಲಾಗಿದೆ. ಪತಿ ಈಶ್ವರ ನಾಯ್ಕ ಹಾಗೂ ಪುತ್ರ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅವರು ಹಿಂತಿರುಗಿದಾಗ ಈ ದಾರುಣ ಘಟನೆ ಕಂಡು ಬಂದಿದೆ. ಮನೆಯಲ್ಲಿ ಈಶ್ವರ […]
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಕೋಟ್ಯಾಂತರ ರೂ. ಅವ್ಯವಹಾರದ ತನಿಖೆ ವಿಳಂಬ ಖಂಡಿಸಿ ಉಡುಪಿ ಜಿಲ್ಲಾ ರೈತ ಸಂಘದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಉಡುಪಿ: ಬ್ರಹ್ಮಾವರದ ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021-2022ರ ನಡುವೆ ನಡೆದ 14 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರದ ವಿರುದ್ಧ ಕ್ರಮಕ್ಕೆ ಪ್ರತಿ ಹಂತದಲ್ಲೂ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಿವಿಧ ರೈತ ಪರ ಸಂಘಟನೆಗಳು ಶನಿವಾರದಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗೇಟಿನ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿವೆ. ಧರಣಿ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಾಜಿ ಶಾಸಕ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್ […]
ಮೂಡುಬೆಳ್ಳೆ ಶಿಲುಬೆ ಧ್ವಂಸ ಪ್ರಕರಣ; ಆರೋಪಿಗಳ ಬಂಧನಕ್ಕೆ ಭಾರತೀಯ ಕ್ರೈಸ್ತ ಒಕ್ಕೂಟ ಆಗ್ರಹ

ಉಡುಪಿ: ಮೂಡುಬೆಳ್ಳೆಯ ಕಟ್ಟಿಂಗೇರಿ ಗ್ರಾಮದಲ್ಲಿರುವ ಕುದ್ರಮಾಲೆಯ ಬೆಟ್ಟದಲ್ಲಿ ಜೋಸೆಫ್ ವಲೇರಿಯನ್ ಲೋಬೊ ಇವರ ಖಾಸಗಿ ಜಾಗದಲ್ಲಿ ನಿರ್ಮಿಸಿದ ಪವಿತ್ರ ಶಿಲುಬೆಯನ್ನು ಧ್ವಂಸ ಮಾಡಿ ಕ್ರೈಸ್ತರ ಭಾವನೆಗಳಿಗೆ ನೋವನ್ನು ಉಂಟುಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಭಾರತೀಯ ಕ್ರೈಸ್ತ ಒಕ್ಕೂಟ ಒತ್ತಾಯಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಭಾರತೀಯ ಕ್ರೈಸ್ತ ಒಕ್ಕೂಟ ರಾಜ್ಯಾಧ್ಯಕ್ಷ ಪ್ರಶಾಂತ್ ಜತ್ತನ್ನ ಅವರು, ಕ್ರೈಸ್ತ ಸಮುದಾಯದ ಭಕ್ತಾದಿಗಳು ಬಹಳಷ್ಟು ಪವಿತ್ರತೆಯಿಂದ ನೋಡುವಂತಹ ಶಿಲುಬೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಕ್ರೈಸ್ತ ಸಮುದಾಯದ ಭಕ್ತರಿಗೆ ನೋವು ತಂದಿದೆ. ಮೇಲ್ನೋಟಕ್ಕೆ […]
ಮೂಡುಬೆಳ್ಳೆ: ಕಿಡಿಗೇಡಿಗಳಿಂದ ಶಿಲುಬೆ ಧ್ವಂಸ: ಪ್ರಕರಣ ದಾಖಲು

ಉಡುಪಿ: ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಎಂಬಲ್ಲಿ ಖಾಸಗಿ ಸ್ಥಳದಲ್ಲಿದ್ದ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸಗೊಸಿರುವ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆಬ್ರವರಿ 19ರಂದು ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಬೆಟ್ಟದಲ್ಲಿದ್ದ ಪವಿತ್ರ ಶಿಲುಬೆಯನ್ನು ಯಾರೋ ದುಷ್ಕರ್ಮಿಗಳು ಕೆಡವಿ ದ್ವಂಸ ಮಾಡಿರುವುದು ಗಮನಕ್ಕೆ ಬಂದಿದೆ. ಈ ಪವಿತ್ರ ಶಿಲುಬೆಯು ಕ್ರೈಸ್ತ ಸಮುದಾಯದ ಹಾಗೂ ಕುಟುಂಬದ ಪೂಜಾ ಸ್ಥಳವಾಗಿದ್ದು ಧಾರ್ಮಿಕ ಪವಿತ್ರತೆಗೆ ಒಳಗೊಂಡಿದೆ. ಇದರಿಂದ ಕೃತ್ಯದಿಂದ ತಮಗೆ ಅಘಾತವಾಗಿದ್ದು ಕ್ರೈಸ್ತ ಧರ್ಮಕ್ಕೆ ಅಪಮಾನವಾಗಿದೆ. ಹಾಗೂ ತಮ್ಮ ಸಮುದಾಯದ […]
ಕಾರ್ಕಳ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಕಾರ್ಕಳ: ತೀರ್ಥಹಳ್ಳಿ ತಾಲೂಕಿನ ಬೆಟ್ಟಮಕ್ಕಿಯ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಫೆ.20 ರಂದು ಪತ್ತೆಯಾಗಿದೆ. ಮೃತ ಯುವತಿಯನ್ನು ಶ್ರೀನಿಧಿ (24) ಎಂದು ಗುರುತಿಸಲಾಗಿದೆ. ಇವರು ಮೂಲತ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಕುದುರುನಬೆಟ್ಟು ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ಬೆಟ್ಟಮಕ್ಕಿಯ ಸುದೀಪ್ ಶೆಟ್ಟಿ ಜತೆ ವಿವಾಹವಾಗಿದ್ದರು. ಶ್ರೀನಿಧಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.