ಲಾರಿ-ಕ್ರೂಸರ್‌ ನಡುವೆ ಭೀಕರ ರಸ್ತೆ ಅಪಘಾತ: ಮಹಾ ಕುಂಭಮೇಳದಲ್ಲಿ ಸ್ನಾನ ಮುಗಿಸಿ ಕಾಶಿಗೆ ತೆರಳುತ್ತಿದ್ದ ಬೀದರ್ ನ ಐವರು ಸ್ಥಳದಲ್ಲೇ ಮೃತ್ಯು.

ಲಕ್ನೋ: ಉತ್ತರ ಪ್ರದೇಶದ ಕಾಶಿ ಬಳಿ ಕರ್ನಾಟಕ ಬೀದರ್ ಮೂಲದ ಒಂದೇ ಕುಟುಂಬದ 5 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇಂದು ಬೆಳಗ್ಗೆ ಲಾರಿ ಮತ್ತು ಕ್ರೂಸರ್‌ ನಡುವೆ ಮಿರಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ಅಪಘಾತ ಸಂಭವಿಸಿದೆ. 5 ಮಂದಿ ಸಾವನ್ನಪ್ಪಿದ್ದು 7 ಮಂದಿ ಗಾಯಗೊಂಡಿದ್ದಾರೆ. ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ(35) ಸಂತೋಷ್‌ (43) ನೀಲಮ್ಮ (60) ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮಗು ಕೂಡ ಮೃತ ಪಟ್ಟಿದೆ. ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ […]

ಕುಂದಾಪುರ: ತೀರ್ಥಯಾತ್ರೆಗೆ ಬಂದ ಬೆಂಗಳೂರಿನ ವ್ಯಕ್ತಿ ಮೃತ್ಯು.

ಉಡುಪಿ: ಸ್ನೇಹಿತನ ಕಾರಿನಲ್ಲಿ ಕರಾವಳಿಯ ದೇವಸ್ಥಾನಗಳಿಗೆ ತೀರ್ಥ ಯಾತ್ರೆಗೆಂದು ಬಂದ ಹಿರಿಯ ವ್ಯಕ್ತಿಯೊಬ್ಬರು ಕುಂಭಾಶಿ ಆನೆಗುಡ್ಡೆಯಲ್ಲಿದ್ದಾಗ ತೀವ್ರವಾಗಿ ಅಸ್ವಸ್ಥಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೇಶವಮೂರ್ತಿ ಎಂದು ಗುರುತಿಸಲಾಗಿದೆ. ಇವರು ಸ್ನೇಹಿತ ಶಿವಣ್ಣರ ಹೊಸ ಕಾರಿಯಲ್ಲಿ ಕರಾವಳಿಗೆ ತೀರ್ಥಯಾತ್ರೆಗೆಂದು ಬಂದಿದ್ದರು.ತೀವ್ರವಾದ ಸಕ್ಕರೆ ಕಾಯಿಲೆ ಹಾಗೂ ಎದೆನೋವಿನಿಂದ ಬಳಲುತಿದ್ದ ಕೇಶವಮೂರ್ತಿ ಅವರು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿರಬೇಕೆಂದು ಹೇಳಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲೂರು: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಕೊಲ್ಲೂರು: ತೆಂಗಿನಮರದಿಂದ ತೆಂಗಿನಕಾಯಿ ಕೊಯ್ಯುವಾಗ ತೆಂಗಿನಕಾಯಿ ತಲೆಯ ಮೇಲೆ ಬಿದ್ದ ಪರಿಣಾಮ ಆಯ ತಪ್ಪಿ ಮರದಿಂದ ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟ ಘಟನೆ ಕೊಲ್ಲೂರು ಗ್ರಾಮದ ಹೆಗ್ಗಡೆಹಕ್ಲುವಿನಲ್ಲಿ ಬುಧವಾರ ಸಂಜೆ ನಡೆದಿದೆ. ಮೃತರನ್ನು ಬೈಂದೂರಿನ ಕಾಲ್ತೋಡು ಗ್ರಾಮದ ರಾಮ ಎಂದು ಗುರುತಿಸಲಾಗಿದೆ. ಮಗಳು ಜ್ಯೋತಿ ಮನೆಯಲ್ಲಿ ಕೃಷಿ ಕೆಲಸಕ್ಕೆಂದು ವಾರದ ಹಿಂದೆ ಹೆಗ್ಗಡೆಹಕ್ಲುವಿಗೆ ಬಂದಿದ್ದ ರಾಮ ಅವರು ನಿನ್ನೆ ಸಂಜೆ 4:30ರ ಸುಮಾರಿಗೆ ತೋಟದ ತೆಂಗಿನ ಮರ ಹತ್ತಿ ಕಾಯಿ ಕೊಯ್ಯುವಾಗ ಈ ದುರ್ಘಟನೆ ನಡೆದಿದೆ. […]

ಅಧಿಕೃತವಾಗಿ ವಿಚ್ಛೇದನ ಪಡೆದ ಯುಜಿ ಚಾಹಲ್-‌ ಧನಶ್ರೀ ವರ್ಮಾ

ಮುಂಬೈ: ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಅವರ ವಿಚ್ಛೇದನದ ಸುದ್ದಿ ತಿಂಗಳುಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಇದೀಗ ಅಧಿಕೃತವಾಗಿದೆ. ಕಳೆದ ಕೆಲವು ತಿಂಗಳಿನಿಂದ ಚಾಹಲ್‌ ಮತ್ತು ಧನಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ರಹಸ್ಯ ಪೋಸ್ಟ್‌ಗಳನ್ನು ಹಂಚಿಕೊಂಡು, ತಮ್ಮ ಡಿವೋರ್ಸ್‌ ಬಗ್ಗೆ ಸುಳಿವು ನೀಡಿದ್ದರು. ದಂಪತಿಗಳ ಅಂತಿಮ ವಿಚಾರಣೆ ಮತ್ತು ಎಲ್ಲಾ ಅಗತ್ಯ ಔಪಚಾರಿಕತೆಗಳು ಗುರುವಾರ (ಫೆ.20) ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ನಡೆದವು ಎಂದು ವರದಿಯಾಗಿದೆ. ಕೋರ್ಟ್‌ ಗೆ ಇಬ್ಬರೂ […]

ಮಣಿಪಾಲದ ಹೆಸರಾಂತ ಗ್ರೂಪ್ ಆಫ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಮಣಿಪಾಲದ ಹೆಸರಾಂತ ಗ್ರೂಪ್ ಆಫ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 1 HR ಮ್ಯಾನೇಜರ್ – 2 Posts2 ಅಕೌಂಟೆಂಟ್-4 posts3 ಸೂಪರ್ ವೈಸರ್ – 5 Posts4 ಆಫೀಸ್ ಎಕ್ಸಿಕ್ಯೂಟಿವ್ – 5 Posts5 ಟೆಲಿಕಾಲರ್-10 posts6 ಸೇಲ್ಸ್ -ಮಾರ್ಕೆಟಿಂಗ್ – 10Posts7 ಟೆಕ್ನಿಷಿಯನ್ – 12 Posts8 ಡ್ರೈವರ್ – ಸೆಕ್ಯೂರಿಟಿ ಗಾರ್ಡ್‌ ಆಕರ್ಷಕ ವೇತನದೊಂದಿಗೆ PF- ESI ಸೌಲಭ್ಯವಿದೆ. ಆಸಕ್ತರು ಕೂಡಲೇ ಸಂಪರ್ಕಿಸಿ:7019891796, 7975861846