ಉಡುಪಿ:ಮನುಷ್ಯನ ಜೀವನ ಶೈಲಿ ಸುಧಾರಣೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ : ಡಾ. ಸುಶೀಲ್ ಜತ್ತನ್ನ

ಉಡುಪಿ: ಆಧುನಿಕ ಯುಗದಲ್ಲಿ ಮನುಷ್ಯ ಒತ್ತಡದ ನಡುವೆ ತಮ್ಮ ದೈನಂದಿನ ಕಾರ್ಯವನ್ನು ನಿರ್ವಹಿಸುತ್ತಾರೆ. ಇದರಿಂದ ಹೊರಬರಲು ಜೀವನಶೈಲಿಯಲ್ಲಿ ಬದಲಾವಣೆ ಕಂಡುಕೊಂಡರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಹಾಯವಾಗುತ್ತದೆ ಎಂದು ಸಿ.ಎಸ್.ಐ. ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಹೇಳಿದರು. ಅವರು ಇಂದು ನಗರದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಮತ್ತು ಉಡುಪಿ ಜಿಲ್ಲಾ ಶಾಖೆ, ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು, ಸಿ.ಎಸ್.ಐ. ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, […]

ಉಡುಪಿ:ಕೌಶಲ್ಯಾಭಿವೃದ್ಧಿ ತರಬೇತಿ : ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ.ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಎಂಟರ್‌ಪ್ರಿನೋರ್‌ಶಿಪ್ ವಿಷಯದ ಬಗ್ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವುದು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಗರಿಷ್ಟ 5 ಲಕ್ಷ ರೂ. ಗಳ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಸದರಿ ತರಬೇತಿ ಹಾಗೂ ಸಹಾಯಧನಕ್ಕಾಗಿ ಜಿಲ್ಲೆಯ ಪ.ಜಾತಿಗೆ ಸೇರಿದ 04 ಅಭ್ಯರ್ಥಿಗಳಿಗೆ ಹಾಗೂ ಪ.ಪಂಗಡಕ್ಕೆ ಸೇರಿದ 03 […]

ಉಡುಪಿ:ವಿಕಾಸಕ್ಕಾಗಿ ಜಾನಪದ, ಜಾನಪದ ಸಂಗೀತ ಮತ್ತು ಗೌರವ ಸನ್ಮಾನ ಕಾರ್ಯಕ್ರಮ

ಉಡುಪಿ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಉಪೇಂದ್ರ ಪೈ ಸ್ಮಾರಕ ಕಾಲೇಜು ಕುಂಜಿಬೆಟ್ಟು ಇದರ ಆಶ್ರಯದಲ್ಲಿ ಕುಂಜಿಬೆಟ್ಟು ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ವಿಕಾಸಕ್ಕಾಗಿ ಜಾನಪದ, ಜಾನಪದ ಸಂಗೀತ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಆಶಾ ಕುಮಾರಿ ಮಾತನಾಡಿ, ಜಾನಪದವು ವ್ಯಕ್ತಿಗಳಿಗೆ ಜೀವನ ಮೌಲ್ಯ ಮತ್ತು ಸಂಸ್ಕೃತಿಯನ್ನು ಕಲಿಸುವ ದೊಡ್ದ ಪ್ರಕಾರವಾಗಿದೆ. ಈ ಜಾನಪದ ರಂಗದಲ್ಲಿ ಪದಗಳು, ಕ್ರೀಡೆಗಳು, ಸಂಗೀತ, ಹಬ್ಬ […]

ಮಂಗಳೂರು:ಒಬ್ಬ ರೋಗಿಗೆ ಆತ್ಮವಿಶ್ವಾಸವೇ ದಿವ್ಯೌಷಧ – ಪದ್ಮರಾಜ್ ಆರ್.‌ಪೂಜಾರಿ

ಮಂಗಳೂರು: ಒಬ್ಬ ರೋಗಿಗೆ ಆತ್ಮವಿಶ್ವಾಸವೇ ದಿವ್ಯೌಷಧ. ಒಂದು ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವ ಭರವಸೆ ಸಿಕ್ಕಿದರೆ ಆತ ಎಲ್ಲವನ್ನೂ ಗೆದ್ದಂತೆ. ಇದಕ್ಕೆ ಉತ್ತಮ ಉದಾಹರಣೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.‌ಪೂಜಾರಿ ಹೇಳಿದರು. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆಯ ಅತ್ಯಾಧುನಿಕ ಸೌಲಭ್ಯಗಳನ್ನು ಪರಿಶೀಲಿಸಿ, ಸರ್ಕಾರಿ ಆಸ್ಪತ್ರೆಯೊಂದು ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್, ಆರ್‌ಎಂಒ ಡಾ.ಜಗದೀಶ್ ಅವರ ಅವಿರತ ಶ್ರಮದಿಂದ ನಗರದ ಖಾಸಗಿ ಆಸ್ಪತ್ರೆಯನ್ನೂ ಮೀರಿಸುವಂತಿದೆ ಎಂದು ಮೆಚ್ಚುಗೆ […]

ಉಡುಪಿ:ಶ್ರೀಚಕ್ರಪೀಠ ಸುರ ಪೂಜಿತೆ ದುರ್ಗಾ ಆದಿಶಕ್ತಿ ಕ್ಷೇತ್ರ ನೂತನ ಗುಡಿಯಲ್ಲಿ ಕಲ್ಕುಡ ಕಲ್ಲುರ್ಟಿ ದೈವಗಳ ಪ್ರತಿಷ್ಠಾಪನೆ

ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪರಿವಾರ ದೈವವಾದ ಕಲ್ಕಡ ಕಲ್ಲುಟ್ಟಿ ದೈವಗಳ ಪುನರ್ ಪ್ರತಿಷ್ಠಾಪನೆಯೂ ಕ್ಷೇತ್ರದ ನೂತನ ಗುಡಿಯಲ್ಲಿ ಕ್ಷೇತ್ರದ ಧರ್ಮದರ್ಶಿ, ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಬಿ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ಆ ಪ್ರಯುಕ್ತ ಕ್ಷೇತ್ರದಲ್ಲಿ ಬೆಳಿಗ್ಗೆ ಆದ್ಯ ಗಣಪತಿಯಾಗ, ಪ್ರತಿಷ್ಠ ಪ್ರಧಾನ ಹೋಮ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ, ಕಲಾಭಿವೃದ್ದಿ ಹೋಮ ಶಿಖರ ಪ್ರತಿಷ್ಠೆ, ದೈವ […]