ಸಾಲಿಗ್ರಾಮ: ನಾಳೆ (ಫೆ.21) “The Tawa Punjab” ರೆಸ್ಟೋರೆಂಟ್ ನ ಶುಭಾರಂಭ

ಉಡುಪಿ: ರುಚಿಕರ ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾಗಿರುವ “The Tawa Punjab” ರೆಸ್ಟೋರೆಂಟ್ ನಾಳೆ (ಫೆ.21) ಸಂಜೆ 6ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66, ಸಾಲಿಗ್ರಾಮ, ಕುಂದಾಪುರ ಇಲ್ಲಿ ಶುಭಾರಂಭಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು, ಕಿರುತೆರೆ ನಟಿ ಗಗನ, ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಚಿತ್ರನಟರಾದ ಅರ್ಜುನ್ ಕಾಪಿಕಾಡ್, ಕವೀಶ್ ಶೆಟ್ಟಿ, ಸಾಲಿಗ್ರಾಮ ಗಣೇಶ್ ಗ್ರಾಂಡ್ ಹೋಟೆಲ್ ನ ಅಯ್ಯಪ್ಪ, ಬಿಗ್ ಬಾಸ್ ಸೀಸನ್ 11ರ […]

ಪರಶುರಾಮ ಮೂರ್ತಿ ವಿವಾದ ಬಗೆಹರಿಸಲು ಅಷ್ಟಮಂಗಲ ನಡೆಸಿ: ಮುನಿಯಾಲು ಉದಯಕುಮಾರ್ ಶೆಟ್ಟಿ ಸಲಹೆ

ಉಡುಪಿ: ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಈ ವಿವಾದ ಆದಷ್ಟು ಬೇಗ ಪರಿಹಾರ ಆಗಬೇಕು. ಹೀಗಾಗಿ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಅಷ್ಟಮಂಗಲಪ್ರಶ್ನೆ ನಡೆಸಿ, ಮುಂದಿನ ತೀರ್ಮಾನಕ್ಕೆ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಸಲಹೆ ನೀಡಿದ್ದಾರೆ. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮ ಮೂರ್ತಿ ವಿವಾದ ಅಂತ್ಯ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮೂರ್ತಿ […]

ಫೆ.22 ರಂದು ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳ

ಕಟಪಾಡಿ: ಕಟಪಾಡಿ ಬೀಡಿನ ಗದ್ದೆಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳವು ಫೆ. 22ರಂದು ನಡೆಯಲಿದೆ. ಬೆಳಗ್ಗೆ 10.30ಕ್ಕೆ ಕಟಪಾಡಿ ಬೀಡು ಗೋವಿಂದಾಸ್ ಶೆಟ್ಟಿ ಮತ್ತು ಕಟಪಾಡಿ ಗ್ರಾ.ಪಂ. ಅಧ್ಯಕ್ಷರಾದ ಪ್ರಭಾ ಬಿ. ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಡಾ| ಎ.ರವೀಂದ್ರನಾಥ ಶೆಟ್ಟಿ ಕಟಪಾಡಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು,ಬಾರ್ಕೂರು ಸಂಸ್ಥಾನದ. ಶ್ರೀಸಂತೋಷ ಗುರೂಜಿ ಆಶೀರ್ವಚನ ನೀಡಲಿದ್ದಾರೆ ಎಂದು ಕಂಬಳ ವ್ಯವಸ್ಥಾಪಕರಾದ ಕಟಪಾಡಿ ಬೀಡು ಗೋವಿಂದಾಸ್ […]

ಉಡುಪಿ: ಬಲ್ಲಾಳ್ ಫೈನಾನ್ಸ್ ನ ಮಾಲಕ ಹೃದಯಾಘಾತದಿಂದ ನಿಧನ

ಉಡುಪಿ:ಉಡುಪಿ ಮಿತ್ರ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಕಾರ್ಯಚರಿಸುತ್ತಿದ್ದ ಬಲ್ಲಾಳ್ ಫೈನಾನ್ಸ್ ಮಾಲೀಕ, ಕಿನ್ನಿಮೂಲ್ಕಿ ಕರ್ನ್ನಪಾಡಿ ನಿವಾಸಿ ಮುರಳೀಧರ್ ಬಲ್ಲಾಳ್ (61) ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು. ವಿಪರೀತ ಬೆವರು ಹಾಗೂ ಸುಸ್ತು ಆಗುತ್ತಿದೆ ಎಂದು ಮನೆಯವರಲ್ಲಿ ಹೇಳುತ್ತಿದ್ದ ಅವರು, ಸುಧಾರಿಸಿಕೊಳ್ಳುತ್ತಿದ್ದಂತೆ ಹಠಾತ್ ಆಗಿ ಕುಸಿದು ಬಿದ್ದಿದ್ದರು. ತಕ್ಷಣ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿನ ವೈದ್ಯರು ಪರೀಕ್ಷಿಸಿ ಅದಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸಹಿತ ಅಪಾರ […]

ಹಿರಿಯಡಕ: ಮಾ.01 ರಿಂದ ಮಾ.03 ರವರೆಗೆ ಅಂಜಾರು ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ.

ಹಿರಿಯಡಕ: ಉಡುಪಿ ಹಿರಿಯಡ್ಕ ಅಂಜಾರು ಬ್ರಹ್ಮಬೈದರ್ಕಳ ಗರಡಿ ಇಲ್ಲಿ ಮಾ.01 ರಿಂದ ಮಾ.03 ರವರೆಗೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ. ಕಾರ್ಯಕ್ರಮಗಳ ವಿವರ:ಮಾರ್ಚ್ 1ರಂದು ರಾತ್ರಿ ಘಂಟೆ 9:30ಕ್ಕೆ ಅಗೆಲ್ ಸೇವೆ, ಮಾರ್ಚ್ 2 ರಂದು ಸಾಯಂಕಾಲ ಘಂಟೆ 7:00ಕ್ಕೆ ತಡ್ಸಲೆ ಹೊರಡುವುದು, ರಾತ್ರಿ ಘಂಟೆ 8-00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾತ್ರಿ ಬೈದರ್ಕಳ ನೇಮೋತ್ಸವ, ರಾತ್ರಿ ಘಂಟೆ 12:00ಕ್ಕೆ ಬೈದರ್ಕಳ ಮಹಾಮಾಯಿ ದೇವಿಯ ದರ್ಶನ ಹಾಗೂ ಶಿವರಾಯ ದರ್ಶನ, ರಾತ್ರಿ ಘಂಟೆ 2:30ಕ್ಕೆ ಹುಲಿ ಚಾಮುಂಡಿ […]