ಉಡುಪಿ:ಧ್ವಜಾರೋಹಣ ಅನಾವರಣದಲ್ಲಿದೆ ವ್ಯತ್ಯಾಸ: -ವಕೀಲ ಶ್ರೀನಿಧಿ ಹೆಗ್ಡೆ

ಉಡುಪಿ: ಸ್ವಾತಂತ್ರ್ಯ ಪಡೆದು ಬ್ರಿಟಿಷರ ಧ್ವಜ ಇಳಿಸಿ ಭಾರತದ ತ್ರಿವರ್ಣ ಧ್ವಜ ಏರಿಸಲಾಗುವ ಆಗಸ್ಟ್ 15ರಂದು ಧ್ವಜಾರೋಹಣ ನಡೆಯಲಿದೆ. ಸುಮಾರು 2 ವರ್ಷ 11 ತಿಂಗಳು 18 ದಿನದಲ್ಲಿ ರಚನೆಯಾದ ಸಂವಿಧಾನವನ್ನು ಅಂಗೀಕರಿಸಿ, ರಾಜತಂತ್ರದಿಂದ ಗಣತಂತ್ರ ವ್ಯವಸ್ಥೆಗೆ ಬದಲಾಗಿದೆ ಪ್ರತೀಕವಾಗಿ ಜನವರಿ 26 ರಂದು ಧ್ವಜ ಅನಾವರಣಗೊಳಿಸಿ ಗಣರಾಜ್ಯೋತ್ಸವ ಆಚರಿಸುತ್ತೇವೆ. ಹೀಗಾಗಿ ಮಕ್ಕಳು ಧ್ವಜ ಆರೋಹಣ ಹಾಗೂ ಅನಾವರಣದ ಮಾಹಿತಿಯನ್ನೂ ಅರಿತುಕೊಳ್ಳಬೇಕು ಎಂದು ವಕೀಲ ಶ್ರೀನಿಧಿ ಹೆಗ್ಡೆ ತಿಳಿಸಿದರು. ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಇತ್ತೀಚೆಗೆ […]

“ಬೀಜಗಳ ರಾಜ” ಬಾದಾಮಿಯನ್ನು ನೆನೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ 10 ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ..

“ಬೀಜಗಳ ರಾಜ” ಎಂದು ಕರೆಯಲ್ಪಡುವ ಬಾದಾಮಿಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದೊಂದು ಪವರ್-ಪ್ಯಾಕ್ಡ್ ಸೂಪರ್‌ಫುಡ್ ಆಗಿದೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ನಮ್ಮ ದೈನಂದಿನ ಆಹಾರಕ್ರಮದಲ್ಲಿ ಬಾದಾಮಿಯನ್ನು ಸೇರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ ಖಾಲಿ ಹೊಟ್ಟೆಗೆ ನೆನೆಸಿದ ಬಾದಾಮಿ ಬೀಜಗಳನ್ನು ಸೇವಿಸುವುದರಿಂದ ಪೌಷ್ಟಿಕಾಂಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬಾದಾಮಿಯನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಅದನ್ನು ಸೇವಿಸಬೇಕು. ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ನೆನೆಸಿದ ಬಾದಾಮಿ ಸೇವಿಸುವುದನ್ನು ನಮ್ಮ ದೈನಂದಿನ […]

ಉತ್ತರ ಪ್ರದೇಶ: ತಂದೆಯನ್ನೇ ಜೀವಂತ ಸುಟ್ಟ ಬಾಲಕ !ಅಸಲಿ ಕಾರಣವೇನು?

ಲಕ್ನೋ: ಕಳ್ಳತನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕ, ತನ್ನ ತಂದೆಯನ್ನೇ ಜೀವಂತ ಸುಟ್ಟ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ. ಫರೀದಾಬಾದ್‌ನ ಅಜಯ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮುಹಮ್ಮದ್ ಅಲೀಮ್ ಅವರು ಮೃತಪಟ್ಟವರು ಎಂದು ತಿಳಿದು ಬಂದಿದೆ. ಕಳ್ಳತನದ ಶಂಕೆಯಿಂದ ತನ್ನ 14 ವರ್ಷದ ಮಗನನ್ನು ಗದರಿಸಿದ್ದಕ್ಕಾಗಿ, ಬಾಲಕ ತನ್ನ ತಂದೆಯನ್ನು ಜೀವಂತವಾಗಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಮಾಲೀಕ ರಿಯಾಝುದ್ದೀನ್ ಸಲ್ಲಿಸಿದ ದೂರಿನ ಪ್ರಕಾರ, ಬೆಳಗಿನ ಜಾವ 2 ಗಂಟೆ […]

ಕೋಟ: ಗೂಡ್ಸ್ ರಿಕ್ಷಾಕ್ಕೆ ಸ್ಕೂಟರ್ ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು.

ಕೋಟ: ಸ್ಕೂಟರೊಂದು ಗೂಡ್ಸ್ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಫೆ.18ರಂದು ಮಧ್ಯಾಹ್ನ ವೇಳೆ ಗುಂಡ್ಮಿ ಗ್ರಾಮದ ಚೇಂಪಿ ಎಂಬಲ್ಲಿ ವಿಶ್ವಕರ್ಮ ಸಾಂಸ್ಕೃತಿಕ ಸಭಾ ಭವನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಸ್ಕೂಟರ್ ಸವಾರ ಅನಂತ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ವಿಶ್ವನಾಥ ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆಯಿಂದ ಗುಲ್ವಾಡಿಗೆ ಹೋಗುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಅಪಘಾತ ತಪ್ಪಿಸುವ ಭರದಲ್ಲಿ ಡಿವೈಡರ್ ಮೇಲೆ […]

ಉಡುಪಿ ಅಜ್ಜರಕಾಡು ಬಳಿ ಸುಸಜ್ಜಿತ ಫ್ಲ್ಯಾಟ್ ಮಾರಾಟಕ್ಕೆ ಲಭ್ಯ

ಉಡುಪಿ: ಉಡುಪಿ ಅಜ್ಜರಕಾಡು ಪಾರ್ಕ್ ಸಮೀಪ ಡಯಾನ ಹೋಟೆಲ್ ನ ಪಕ್ಕದಲ್ಲಿ ಎರಡು ಬೆಡ್ ರೂಮ್ ಹೊಂದಿರುವ ಸುಸಜ್ಜಿತ ಫ್ಲ್ಯಾಟ್ ವೊಂದು ಮಾರಾಟಕ್ಕೆ ಲಭ್ಯವಿದೆ. ಮೂರು ಬಾಲ್ಕನಿಯನ್ನು ಒಳಗೊಂಡಿರುವ ಫ್ಲ್ಯಾಟ್ ಇದಾಗಿದ್ದು, 45 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ. ಖರೀದಿದಾರರು ಮೊಬೈಲ್ ಸಂಖ್ಯೆ 8197035017 ಅನ್ನು ಸಂಪರ್ಕಿಸಬಹುದು.