ಆರ್ ಜಿ ಯು ಎಚ್ ಎಸ್ ಪರೀಕ್ಷೆಗಳಲ್ಲಿ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜ್ ಗೆ ಅತ್ಯುತ್ತಮ ಫಲಿತಾಂಶ.

ಕುಂದಾಪುರ: ಡಿಸೆಂಬರ್-ಜನವರಿ 2024-25 ರಲ್ಲಿ ನಡೆದ ರಾಜೀವ್ ಗಾಂಧಿ ಯೂನಿವರ್ಸಿಟಿ ಒಫ್ ಹೆಲ್ತ್ ಸೈನ್ಸಸ್ ಪರೀಕ್ಷೆಗಳಲ್ಲಿ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಿದೆ. ಅಂತಿಮ ವರ್ಷದಲ್ಲಿ 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿದ್ದು 96% ತೇರ್ಗಡೆ, 3ನೇ ವರ್ಷದಲ್ಲಿ 10 ಡಿಸ್ಟಿಂಕ್ಷನ್ 90% ತೇರ್ಗಡೆ, 4ನೇ ಸೆಮಿಸ್ಟರ್ನಲ್ಲಿ 2 ಡಿಸ್ಟಿಂಕ್ಷನ್ 95% ಉತ್ತೀರ್ಣತೆ, 2 ನೇ ಸೆಮಿಸ್ಟರ್ನಲ್ಲಿ 2 ಡಿಸ್ಟಿಂಕ್ಷನ್ 93% ಉತ್ತೀರ್ಣತೆಯ ಫಲಿತಾಂಶ ದೊರೆತಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಗಮನಾರ್ಹ ಸಾಧನೆಗಾಗಿ ಆಡಳಿತ ಮಂಡಳಿ, […]
ಉಡುಪಿ:ಶ್ರೀ ಕ್ಷೇತ್ರ ಕುಮಾರು ಜಿಡ್ಡು ಕುತ್ಯಾರು ವಾರ್ಷಿಕ ನೇಮೋತ್ಸವ ಸಂಪನ್ನ

ಶ್ರೀ ಶಕ್ತಿ ಮಹಾಗಣಪತಿ, ಶ್ರೀ ಮಹಾಕಾಳಿ ದೇವಸ್ಥಾನ , ಶ್ರೀ ಮಂತ್ರದೇವತೆ, ಶ್ರೀ ವರ್ತೆಶ್ವರಿ, ಶ್ರೀ ದೇವಿ ಕಲ್ಕುಡ ದೇವಸ್ಥಾನ ಕರ್ಮಾರು ಜಿಡ್ಡು ಕ್ಷೇತ್ರ ಇಲ್ಲಿ ವಾರ್ಷಿಕ ನೇಮೋತ್ಸವ ಹಾಗೂ ಮಹಾಗಣಪತಿ ದೇವರಿಗೆ ತುಲಾಭಾರ ಸೇವೆ, ಅನ್ನಸಂತರ್ಪಣೆ ನಡೆದ ದೈವಗಳ ಬಾಲು ಭಂಡಾರ ಇಳಿದು ನೇಮೋತ್ಸವವು ಕ್ಷೇತ್ರದ ಧರ್ಮದರ್ಶಿ ಭೋಜ ಪಾತ್ರಿ ಕುತ್ಯಾರು ಇವರ ಧಾರ್ಮಿಕ ವಿಧಿ ವಿಧಾನ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ ಸಂಪನ್ನಗೊಂಡಿತ್ತು. ಮರುದಿನ ಬೆಳಿಗ್ಗೆ 5.00 ರಿಂದ 8.00 ರ ತನಕ ಜಟ್ಟಿಗ ಗುಳಿಗ […]
ಉಡುಪಿ: ತುಳುನಾಡಿನ ಸಾಂಪ್ರದಾಯಿಕ ಆಚರಣೆಗೆ ಅವಕಾಶ ಕಲ್ಪಿಸುವಂತೆ ಡಿಸಿ, ಎಸ್ಪಿಗೆ ಮನವಿ

ಉಡುಪಿ: ಉಡುಪಿ ಜಿಲ್ಲಾಡಳಿತ ರೂಪಿಸಿರುವ ಕಠಿಣ ನಿಯಮಾವಳಿಗಳಿಂದ ತುಳುನಾಡಿನ ಧಾರ್ಮಿಕ ಆಚರಣೆ ಹಾಗೂ ಸಂಸ್ಕೃತಿಯ ಭಾಗವಾಗಿರುವ ಕಂಬಳ, ಕೋಳಿ ಅಂಕ, ಯಕ್ಷಗಾನ, ನೇಮೋತ್ಸವ, ನಾಗ ಮಂಡಲ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ದೈವಾರಾಧನೆಯ ಚೌಕಟ್ಟಿನಲ್ಲಿ ದೈವಗಳಿಗೆ ರಕ್ತಹಾರದ ಕಲ್ಪನೆಯಲ್ಲಿ ಹಲವು ದೈವಸ್ಥಾನ, ಮಂದಿರಗಳಲ್ಲಿ ಹಲವಾರು ದಶಕಗಳಿಂದ ಕೋಳಿ ಪಡೆ ಆಯೋಜಿಸುವ ಪದ್ಧತಿ ಇದೆ […]
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ.22ರಿಂದ 26ರವರೆಗೆ “ಶಿವಪಾಡಿ ವೈಭವ”

ಉಡುಪಿ: ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಶಿವಪಾಡಿ ಹಾಗೂ ಶಿವಪಾಡಿ ವೈಭವ ಆಚರಣಾ ಸಮಿತಿ ವತಿಯಿಂದ “ಶಿವಪಾಡಿ ವೈಭವ” ಯಕ್ಷಗಾನ, ಕೃಷಿ, ಆರೋಗ್ಯ, ಆಹಾರ, ಮನೋರಂಜನೆಯ ಮಹಾಮೇಳವನ್ನು ಇದೇ ಫೆ.22ರಿಂದ 26ರ ವರೆಗೆ ಐದು ದಿನಗಳ ಕಾಲ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಶಿವಪಾಡಿ ವೈಭವ ಆಚರಣಾ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ತಿಳಿಸಿದರು. ಈ ಕುರಿತು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ […]
ಉಡುಪಿ: ಎರಡು ಬೈಕ್‌ಗಳ ನಡುವೆ ಅಪಘಾತ; ಓರ್ವ ಸವಾರ ಮೃತ್ಯು.

ಉಡುಪಿ: ಎರಡು ಬೈಕುಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ಅಜ್ಜರಕಾಡು ಅಗ್ನಿ ಶಾಮಕ ದಳ ಠಾಣೆಯ ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ. ಮೃತರನ್ನು ಸ್ಥಳೀಯರಾದ ಸ್ಯಾಮ್ಯುಯೆಲ್ ಸದಾನಂದ ಕರ್ಕಡ(59) ಎಂದು ಗುರುತಿಸಲಾಗಿದೆ. ಅತಿ ವೇಗದಿಂದ ಬಂದ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸದಾನಂದ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ. ಅಪಘಾತದಿಂದ ಎರಡು ಬೈಕ್ ಗಳು ಕೂಡ ಸಂಪೂರ್ಣ ನಜ್ಜುಗುಜ್ಜಾಗಿವೆ. […]