ಮೂಡಿಗೆರೆ:ಅಳಿಯ ನಿಂದಲೇ ಅತ್ತೆಯ ಹತ್ಯೆ; ಅಳಿಯ ಪರಾರಿ

ಚಿಕ್ಕಮಗಳೂರು: ತಲೆಗೆ ಸುತ್ತಿಗೆಯಿಂದ ಹೊಡೆದು ಅಳಿಯನೋರ್ವ ಅತ್ತೆಯನ್ನೇ ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ನಡೆದಿದ್ದು ಭಾನುವಾರ ವಿಚಾರ ಬೆಳಕಿಗೆ ಬಂದಿದೆ. ಯಮುನಾ(65) ಮೃತ ದುರ್ದೈವಿಯಾಗಿದ್ದು, ಅಳಿಯ ಶಶಿಧರ್ ಕೊಲೆ ಆರೋಪಿಯಾಗಿದ್ದಾನೆ. ಅತ್ತೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈಯ್ಯಲಾಗಿದ್ದು ಘಟನೆಯ ಬಳಿಕ ಆರೋಪಿ ಶಶಿಧರ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ತಲೆಮರೆಸಿಕೊಂಡಿರುವ ಶಶಿಧರನ ಪತ್ತೆಗೆ […]
ಕುಂದಾಪುರದಲ್ಲಿ ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನ ಎರಡನೇ ಶಾಖೆಯ ಉದ್ಘಾಟನಾ ಸಮಾರಂಭ

ಕುಂದಾಪುರ: ಕುಂದಾಪುರವು ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಜನರಿಗೆ ಜನನಿ ಎಂಟರ್‌ಪ್ರೈಸಸ್‌ನ ಶಾಖೆ ಆರಂಭವಾದ ಕಾರಣ ಖರೀದಿಗೆ ಅನುಕೂಲವಾಗಲಿದೆ. ನಗರ ಹಾಗೂ ಗ್ರಾಮಾಂತರದ ಜನತೆ ಖರೀದಿಯ ಖುಷಿಯನ್ನು ಈ ಮಳಿಗೆಯ ಮೂಲಕ ಅನುಭವಿಸಲಿ ಎಂದು ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು. ಅವರು ರವಿವಾರ ಕುಂದಾಪುರದ ಹಂಗಳೂರಿನ ಯುನಿಟಿ ಹಾಲ್ ಬಳಿ ಯುವ ದ್ವೀಪ ವಸತಿ ಸಂಕೀರ್ಣದಲ್ಲಿ ಗೃಹೋಪಯೋಗಿ ಉಪಕರಣಗಳ ಪ್ರಸಿದ್ಧ ಮಳಿಗೆಯಾಗಿರುವ ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನ ಎರಡನೇ ಶಾಖೆ ಉದ್ಘಾಟನೆ ಸಮಾರಂಭದಲ್ಲಿ […]
ಕಾರ್ಕಳ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಮುಷ್ಕರಕ್ಕೆ ವಿ ಸುನಿಲ್ ಕುಮಾರ್ ಭೇಟಿ.

ಕಾರ್ಕಳ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಸಂಘದ ವತಿಯಿಂದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ಕಾರ್ಕಳ ಶಾಸಕರು, ಮಾಜಿ ಸಚಿವರಾದ ವಿ ಸುನಿಲ್ ಕುಮಾರ್‌ರವರು ಭೇಟಿ ನೀಡಿದರು. ವೇತನ ಹೆಚ್ಚಳ, ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ ಸೇರಿದಂತೆ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಫೆ 10ರಿಂದ ಗ್ರಾಮ ಆಡಳಿತಾಧಿಕಾರಿಗಳು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇವರ ರಾಜ್ಯವ್ಯಾಪಿ ಮುಷ್ಕರ ಇದೀಗ ಶನಿವಾರ […]
ಉಡುಪಿ: ಅಂಬಾತನಯ ಮುದ್ರಾಡಿ ಪ್ರಶಸ್ತಿಗೆ ಎನ್.ಸಿ.ಮಹೇಶ್ ಅವರ ‘ಸಾಕುತಂದೆ ರೂಮಿ’ ಕೃತಿ ಆಯ್ಕೆ.

ಉಡುಪಿ: ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ನೀಡುವ ಸಂಸ್ಮರಣಾ ಪ್ರಶಸ್ತಿಗೆ ಬೆಂಗಳೂರಿನ ಉಪನ್ಯಾಸಕ ಎನ್.ಸಿ.ಮಹೇಶ್ ಅವರ ಸಾಕುತಂದೆ ರೂಮಿ ನಾಟಕ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ವಿಶ್ವರಂಗಭೂಮಿ ದಿನವಾದ ಮಾ.27ರಂದು ರಂಗಭೂಮಿ ಉಡುಪಿ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು 15 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ. ಮೂವರು ತೀರ್ಪುಗಾರರ ಸಮಿತಿಯ ಸಲಹೆಯಂತೆ […]