ಉಡುಪಿ:ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಫೆ.20 ರಂದು ಲಿಂಫೆಡೆಮಾ (ದುಗ್ಧರಸ ವ್ಯವಸ್ಥೆಯಿಂದ ಉಂಟಾಗುವ ಊತ) ತಪಾಸಣಾ ಶಿಬಿರ

ಉಡುಪಿ: ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಅವರು ಗುರುವಾರ , ಫೆಬ್ರವರಿ 20, 2025 ರಂದು ಬೆಳಿಗ್ಗೆ 9:30 ರಿಂದ ಸಂಜೆ 4:00 ರವರೆಗೆ ಲಿಂಫೆಡೆಮಾ (ದುಗ್ಧರಸ ವ್ಯವಸ್ಥೆಯಿಂದ ಉಂಟಾಗುವ ಊತ) ತಪಾಸಣಾ ಶಿಬಿರವನ್ನು ಆಯೋಜಿಸುವುದಾಗಿ ಘೋಷಿಸಿದ್ದಾರೆ. ಈ ಒಂದು ದಿನದ ಕಾರ್ಯಕ್ರಮವು ದೀರ್ಘಕಾಲದ ಫೈಲೇರಿಯಾಸಿಸ್, ಮೇಲಿನ ಅಥವಾ ಕೆಳಗಿನ ಅಂಗಗಳಲ್ಲಿ ದೀರ್ಘಕಾಲದ ಊತ, ಕೈಕಾಲುಗಳಲ್ಲಿ ನಿರಂತರ ನೋವು ಅಥವಾ ಅಸ್ವಸ್ಥತೆ, ಅಥವಾ ವಾಸಿಯಾಗದ ಹುಣ್ಣುಗಳು ಮುಂತಾದ ಪರಿಸ್ಥಿತಿಗಳಿಂದ […]
ಕಾಪು ಬೀಚ್ ನಲ್ಲಿ ಯುವಕರ ಪುಂಡಾಟ; ಗೂಡಂಗಡಿಗಳಿಗೆ ಹಾನಿ, ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಕಡಲ ತೀರದಲ್ಲಿ ಕಿಡಿಗೇಡಿಗಳ ಹುಚ್ಚಾಟ ಸಿ ಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬೀಚ್ ನ ಆಸುಪಾಸು ವ್ಯಾಪಾರ ನಡೆಸುವ ಸಣ್ಣಪುಟ್ಟ ಗೂಡಂಗಡಿಗಳಿಗೆ ತಂಡವಾಗಿ ಬಂದ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಐದಾರು ಮಂದಿಯ ತಂಡ ಬಂದಿದ್ದು, ತಂಡದಲ್ಲಿದ್ದ ಓರ್ವ ಯುವಕ ಎಲ್ಲಾ ಅಂಗಡಿಗಳಿಗೆ ಹೊಡೆದು ಹಾನಿ ಮಾಡಿದ್ದಾನೆ. ಈ ದುಷ್ಕೃತಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಯುವಕರ ತಂಡದ ಈ ಪುಂಡಾಟ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಇನ್ನಷ್ಟೇ ತನಿಖೆ […]
ಶಾಲೆಗಳು/ಕಾಲೇಜುಗಳ ಬಳಿ ಇರುವ ಮದ್ಯದಂಗಡಿಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಕ್ರಮ

ಬೆಂಗಳೂರು: ಶಿಕ್ಷಣ ಸಂಸ್ಥೆಗಳ ಬಳಿ ಮದ್ಯದಂಗಡಿಗಳಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ನಿರ್ವಹಣೆಗೆ ತೊಂದರೆಯುಂಟಾಗುತ್ತಿದ್ದಲ್ಲಿ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳು ಅಬಕಾರಿ ಇಲಾಖೆಗೆ ದೂರು ಸಲ್ಲಿಸುವಂತೆ ಪ್ರೌಢ ಶಿಕ್ಷಣ ನಿರ್ದೇಶಕರು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಶಾಲೆಗಳು/ಕಾಲೇಜುಗಳ ಬಳಿ ಯಾವುದೇ ಮದ್ಯದಂಗಡಿಗಳಿದ್ದು ಅವು ಶಿಕ್ಷಣ ಮತ್ತು ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಿದರೆ, ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಅಬಕಾರಿ ಇಲಾಖೆಗೆ ದೂರು ಸಲ್ಲಿಸಲು ತಿಳಿಸಲಾಗಿದೆ ಮತ್ತು ಅಬಕಾರಿ ಇಲಾಖೆಯು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದೆ. ಸಾರ್ವಜನಿಕರು, ಶಾಲಾ […]
ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: 2025-26ನೇ ಸಾಲಿನ ಆಯವ್ಯಯವನ್ನು ಮಾರ್ಚ್ 7ರಂದು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನಸೌಧದಲ್ಲಿ ತಿಳಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಅವರು ರೈತ ಸಂಘದ ಮುಖಂಡರುಗಳೊಂದಿಗೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ನಡೆಸಿ, ರೈತ ಸಮುದಾಯದ ಕುಂದುಕೊರತೆ, ಬೇಡಿಕೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರಿಗೆ ಬಜೆಟ್ ಮಂಡನೆಯ ಬಗ್ಗೆ ಮಾಹಿತಿ ನೀಡಿದರು. ವಿಧಾನಮಂಡಲ ಅಧಿವೇಶನ ಮಾರ್ಚ್ 3 ರಿಂದ ಪ್ರಾರಂಭವಾಗುತ್ತದೆ. ಬಜೆಟ್ ಮಾರ್ಚ್ 7ರಂದು ಮಂಡಿಸುತ್ತೇನೆ. ಬಳಿಕ 3 ದಿನ ರಾಜ್ಯಪಾಲರ ಭಾಷಣದ […]
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI): ಗೃಹ, ವಾಣಿಜ್ಯ, ಹಾಗೂ ವಾಹನ ಸಾಲದ ಬಡ್ಡಿ ಇಳಿತ.

ಮುಂಬೈ: ಸಾರ್ವಜನಿಕ ವಲ ಯದಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಸಾಲದ ಮೇಲಿನ ಬಡ್ಡಿದರ ವನ್ನು ಶೇ. 0.25ರಷ್ಟು ಇಳಿಕೆ ಮಾಡಿದೆ. ಇಳಿಕೆ ಫೆ.15 ರಿಂದಲೇ ಜಾರಿಗೆ ಬರಲಿದೆ ಎಂದು ಎಸ್‌ಬಿಐ ತಿಳಿಸಿದೆ. ಫೆ.7ರಂದು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿ ಶೇ.6.25ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ ಎಸ್‌ಬಿಐ ಈ ನಿರ್ಧಾರ ಪ್ರಕಟಿ ಸಿದೆ. ಹೀಗಾಗಿ ಗೃಹ, ವಾಹನ,ವೈಯಕ್ತಿಕ, ವಾಣಿಜ್ಯ ಸಾಲದ ಮೇಲಿನ ಸಾಲದ ಬಡ್ಡಿದರಗಳು ಇಳಿಕೆಯಾಗಲಿವೆ. […]