ಕಾರ್ಕಳ: ಕಫದಿಂದ ಮೂರು ತಿಂಗಳ ಮಗು ಮೃತ್ಯು.

ಕಾರ್ಕಳ: ಕಫದ ತೊಂದರೆಯಿಂದ ಮೂರು ತಿಂಗಳ ಮಗುವೊಂದು ಮೃತಪಟ್ಟ ಘಟನೆ ಫೆ.14ರಂದು ರಾತ್ರಿ ವೇಳೆ ನಡೆದಿದೆ. ನಿಂಜೂರು ಗ್ರಾಮದ ಪೂರ್ಣಿಮಾ ಎಂಬವರ ಮೂರು ತಿಂಗಳ ಗಂಡು ಮಗು ಧನ್ವಿತ್ ಮೃತ ದುದೈರ್ವಿ. ಕಫದ ತೊಂದರೆ ಉಲ್ಬಣಗೊಂಡು ತೀವ್ರ ಅಸ್ವಸ್ಥಗೊಂಡ ಮಗು ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿತು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜೆಟ್ ನಲ್ಲಿ ಕರಾವಳಿ ಕಾವಲು ಪಡೆಗೆ ಅನುದಾನ ಒದಗಿಸಿ

ಉಡುಪಿ: ಕರಾವಳಿ ಕಾವಲು ಪಡೆಯ ಬೋಟ್ ಗಳು ಮತ್ತು ವಾಹನಗಳಿಗೆ ಸರಕಾರ ಇಂಧನ ಕಡಿತ ಮಾಡಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ , ಭದ್ರತೆ ,ಸುರಕ್ಷತೆಯ ವಿಚಾರದಲ್ಲಿ ಸರಕಾರ ರಾಜಿಯಾಗಬಾರದು. ಬಜೆಟ್ ನಲ್ಲಿ ಕರಾವಳಿ ಕಾವಲು ಪಡೆಗೆ ಅಗತ್ಯ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ.ಅಭಿವೃದ್ಧಿ ಚಟುವಟಿಕೆಗಳಿಗೆ ಮತ್ತು ಮಳೆ ಹಾನಿಗೆ ಯಾವುದಕ್ಕೂ ಅನುದಾನ ಬಂದಿಲ್ಲ.ಕಡಲು ಕೊರೆತಕ್ಕೂ ಸರಕಾರ ಅನುದಾನ […]