ಬಲ್ಲಾಳ್ ಮೊಬೈಲ್ಸ್ ನಲ್ಲಿ ದೀಪಾವಳಿ ದಿ ಗ್ರೇಟ್ ಫೆಸ್ಟಿವಲ್ ಸೀಸನ್ ನ ಬಹುಮಾನ ವಿತರಣಾ ಕಾರ್ಯಕ್ರಮ

ಉಡುಪಿ: ಕರಾವಳಿಯ ಹೆಸರಾಂತ ಬಲ್ಲಾಳ್ ಮೊಬೈಲ್ಸ್ ನಲ್ಲಿ ದಿನಾಂಕ 14.02.2025 ರ ಶುಕ್ರವಾರ ದಂದು ದೀಪಾವಳಿ ದಿ ಗ್ರೇಟ್ ಫೆಸ್ಟಿವಲ್ ಸೀಸನ್ ನ ಲಕ್ಕಿ ಡ್ರಾ ವಿಜೇತರಿಗೆ ಸಂಸ್ಥೆಯ ಮಾಲಕರಾದ ಸಂದೇಶ್ ಬಲ್ಲಾಳ್ ರವರು ಬಹುಮಾನ ವಿತರಣೆ ನಡೆಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಷ್ಣ ಕುಲಾಲ್,ಜಿಲ್ಲಾ ಉಪಾಧ್ಯಕ್ಷರು,ಮಾನ್ಯತೆ ಪಡೆದ ಗುತ್ತಿಗೆದಾರರ ಸಂಘ , ಉಡುಪಿ ಜಿಲ್ಲೆ, ಕಾಂತಾರ ಚಲನಚಿತ್ರ ಖ್ಯಾತಿಯ ಪಾತ್ರಧಾರಿ ಬಾಸುಮ ಕೊಡಗು,ಹಾಗೂ ಕಟಪಾಡಿ ರಕ್ಷಿತಾ ಆಭರಣ ಮಳಿಗೆಯ ಮಾಲಕರಾದ ಪ್ರಕಾಶ್ ಆಚಾರ್ಯರವರು ಉಪಸ್ಥಿತರಿದ್ದರು. ಕಾರ್ಯಕ್ರಮದ […]
ಮಾರ್ಚ್ 7 ರಂದು ಮಂಗಳೂರಿನಲ್ಲಿ “ಪ್ಯಾಡಲ್ ಹಬ್ಬ”.

ಮಂಗಳೂರು: ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ನ ಎರಡನೇ ಆವೃತ್ತಿ ಮಾರ್ಚ್ 7ರಿಂದ 9ರವರೆಗೆ ಸುರತ್ಕಲ್ ಬಳಿಯ ಸಸಿಹಿತ್ಲು ಕಡಲತೀರದಲ್ಲಿ ನಡೆಯಲಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಆಯೋಜಿಸುವ ಸ್ಪರ್ಧೆಯಲ್ಲಿ ವಿಶ್ವದ ಪ್ರಮುಖ ಸ್ಟ್ಯಾಂಡ್ ಅಪ್ ಪ್ಯಾಡಲಿಂಗ್ (ಎಸ್‌ಯುಪಿ) ಪಟುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಉತ್ಸವದಲ್ಲಿ ಎಲೈಟ್ ವಿಭಾಗದ ಸ್ಪರ್ಧೆಗಳು, ಗುಂಪು ರೇಸ್‌ಗಳು ಮತ್ತು ಕರ್ಯಾಗಾರಗಳು ನಡೆಯಲಿದ್ದು ವೃತ್ತಿಪರ ಅಥ್ಲೀಟ್‌ಗಳ ಸ್ಪರ್ಧೆಗೆ ವೇದಿಕೆ ಸಿಗಲಿದೆ. ಪ್ಯಾಡಲರ್ಸ್ ಪ್ರೊಫೆಷನಲ್ಸ್ ಅಸೋಸಿಯೇಷನ್ (ಪಿಪಿಪಿ) ಟೂರ್‌ನಲ್ಲಿ ಮಿಂಚಿರುವ ಅಂತರರಾಷ್ಟ್ರೀಯ […]
ಉಡುಪಿ ಅಪರ ಜಿಲ್ಲಾಧಿಕಾರಿಯಾಗಿ ಅಬೀದ ಗದ್ಯಾಳ

ಉಡುಪಿ: ಸದ್ಯ ವಿಜಯಪುರ ಜಿಲ್ಲೆ ಇಂಡಿ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಅಬೀದ ಗದ್ಯಾಳ ಅವರನ್ನು ಖಾಲಿ ಇರುವ ಉಡುಪಿ ಅಪರ ಜಿಲ್ಲಾಧಿಕಾರಿಯಾಗಿ ಸರಕಾರ ವರ್ಗಾಯಿಸಿದೆ. ಕಳೆದೊಂದು ವರ್ಷಕ್ಕೂ ಅಧಿಕ ಸಮಯ ಉಡುಪಿ ಎಡಿಸಿಯಾಗಿ ಕಾರ್ಯ ನಿರ್ವಹಿಸಿದ್ದ ಮಮತಾದೇವಿ ಅವರನ್ನು ಕಳೆದ ತಿಂಗಳು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.
ಮಧ್ವನಗರ: ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರ

ಉಡುಪಿ: ಯುವನಿಧಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಮೂಡುಬೆಟ್ಟು ಇದರ ವತಿಯಿಂದ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಅಂಧತ್ವ ನಿವಾರಣಾ ವಿಭಾಗ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ‘ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ (ಐಒಎಲ್) ಅಳವಡಿಕೆ ಶಿಬಿರ’ವು ಮಧ್ವನಗರದ ಜವಣೆರ ಕಟ್ಟೆಯ ಏಕತಾ ರಂಗಮಂಟಪದಲ್ಲಿ ನಡೆಯಿತು. […]
ಶೀಘ್ರವೇ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ : ಹಿಂದಿನ ಮಾದರಿಯಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹಲಕ್ಷ್ಮೀ ಯೋಜನೆ ಹಣವನ್ನು ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಇಲ್ಲಿ ಸ್ಪಷ್ಟನೆ ನೀಡಿದ್ದಾರೆ. ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು, ‘ತಾಲೂಕು ಪಂಚಾಯಿತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ರವಾನೆಯಾಗುತ್ತಿದ್ದು, ಉಪ ನಿರ್ದೇಶಕರ ಮೂಲಕ ಹಣ ಹಾಕಲಾಗುತ್ತಿದೆ. ಯೋಜನೆಗೆ ಹಣ ಫಲಾನುಭವಿಗಳ ಖಾತೆಗಳಿಗೆ ಜಮಾ […]