ಉಡುಪಿ: ನಾಳೆ (ಫೆ.16) ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024 ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಾಗು ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಫೆ.16 ) ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ. ಈ ಬಗ್ಗೆ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸುವರು. ವಿಧಾನಸಭಾ ಸ್ಪೀಕರ್ ಯುಟಿ ಖಾದರ್, ಕನ್ನಡ ಮತ್ತು […]

ಕಾರ್ಕಳ: ಎಎಸ್‌ಪಿಯಾಗಿ ಡಾ. ಹರ್ಷ ಪ್ರಿಯಂವದ ನೇಮಕ.

ಕಾರ್ಕಳ: ಕಾರ್ಕಳ ಪೊಲೀಸ್ ಉಪ ವಿಭಾಗಕ್ಕೆ ಎಎಸ್ ಪಿಯಾಗಿ ಐಪಿಎಸ್ ಅಧಿಕಾರಿ ಡಾ. ಹರ್ಷ ಪ್ರಿಯಂವದ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಜಾರ್ಖಂಡ್ ಮೂಲದ ಹರ್ಷ ಪ್ರಿಯಂವದ ಅವರು ಎಂಬಿಬಿಎಸ್ ಪದವೀಧರೆಯಾಗಿದ್ದು, 2020ರ ಯುಪಿಎಸ್ ಸಿ ಪರೀಕ್ಷೆಯಲ್ಲಿ 165ನೇ ರ್ಯಾಂಕ್ ಪಡೆದಿದ್ದರು. ಪ್ರಸ್ತುತ ಕಾರ್ಕಳ ಡಿವೈಎಸ್ ಪಿ ಅರವಿಂದ ಕಲಗುಜ್ಜಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.

ಮದುವೆಯ ವಯಸ್ಸಾದ್ರೆ ನಿಮಗೂ ಹೀಗೆಲ್ಲಾ ಚಡಪಡಿಕೆ ಆಗ್ಬೋದು,ಇದ್ದವರೆಲ್ಲಾ ಹೀಗೆ ಪ್ರಶ್ನೆ ಕೇಳ್ಬೋದು : 90s ಹುಡುಗನೊಬ್ಬನ ಕಹಾನಿ

“ಮದುವೆಯ ವಯಸ್ಸಾಯಿತು. ಯಾರನ್ನಾದರೂ ನೋಡಿಕೊಂಡಿದ್ದೀಯೋ ಇಲ್ಲ ನಾವೇ ನೋಡಬೇಕೋ?” ಎಂದು ಹಿತೈಷಿಗಳು ಕೇಳುವಾಗ ದಿಗಿಲು, ಗಲಿಬಿಲಿ ಒಟ್ಟಿಗೆ ಉಂಟಾಗುತ್ತದೆ.  ಹೇಗೋ ಕಷ್ಟ ಪಟ್ಟು ಕಾಲೇಜು ಮುಗಿಸಿ ಕೆಲಸ ಹಿಡಿದು, ಮತ್ತೆ ಕೊರೊನಾ ಕಾಟದಿಂದ ಹೈರಾಣಾಗಿ ಈಗ ಸುಧಾರಿಸಿಕೊಳ್ಳುತ್ತಿರುವಾಗ, ಮತ್ತೊಂದು ವೈರಸ್ ಬಂದು ಉಳಿದಿರುವುದನ್ನೂ ಕಿತ್ತುಕೊಳ್ಳುತ್ತದೋ ಎಂಬ ಆತಂಕದ ಮಧ್ಯೆ ದಿನಗಳು ಓಡುತ್ತಿರಬೇಕಾದರೆ ‘ಮದುವೆ’ ಎಂಬ ಸಂಗತಿಯೊಂದು ಕುಣಿದಾಡುತ್ತಿದೆ!  ಲಗ್ನ ಇರುವಾಗಲೇ ಮದುವೆಯಾಗಬೇಕು. ಇಲ್ಲದಿದ್ದರೆ ಕಷ್ಟ ಎಂದು ಹಿರಿಯರು ಹೇಳುವಾಗ ಚಿಂತೆ ಕಾಡುತ್ತದೆ. ಹೆಣ್ಣು ಹುಡುಕಿ ಸುಸ್ತಾದ ಸೀನಿಯರ್ಸ್ […]

ವಿಶ್ವಾಸ, ನಂಬಿಕೆ, ಕಾರ್ಯದಕ್ಷತೆಯಿಂದ ಮುನ್ನಡೆದರೆ ಯಶಸ್ಸು ಸಾಧ್ಯ: ಬಿ.ಸಿ. ಲೋಕಪ್ಪ ಗೌಡ

ಉಡುಪಿ: ಸಹಕಾರ ಸಂಸ್ಥೆಗಳು ಜನರ ವಿಶ್ವಾಸ, ನಂಬಿಕೆಯೊಂದಿಗೆ ಕಾರ್ಯ ದಕ್ಷತೆಯಿಂದ ಮುನ್ನಡೆದರೆ ಯಶಸ್ಸು ಗಳಿಸಬಹುದು ಎಂದು ಮಹಾಮಂಡಳದ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಶನಿವಾರ ಕಡಿಯಾಳಿ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. […]

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನ ಆಚರಿಣೆ.

ಮಣಿಪಾಲ, ಫೆ‌15: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನವನ್ನು (ಐಸಿಸಿಡಿ) ಅರ್ಥಪೂರ್ಣವಾಗಿ ಆಚರಿಸಿತು, ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಆರೈಕೆದಾರರು ಮತ್ತು ಕ್ಯಾನ್ಸರ್ ನಿಂದ ಗಣಮುಖರಾದವರು ಬಾಲ್ಯದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮತ್ತು ಬೆಂಬಲವನ್ನು ತೋರಿಸಲು ಒಗ್ಗೂಡಿದರು. ಈ ಕಾರ್ಯಕ್ರಮವು “ಪ್ರೇರೇಪಿಸುವ ಕ್ರಿಯೆ” ಎಂಬ ಘೋಷ ವಾಕ್ಯದ ಅಡಿಯಲ್ಲಿ ಮೂರು ವರ್ಷಗಳ (2024-2026) ಅಭಿಯಾನದ ಭಾಗವಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಮತ್ತು ಅವರ ಕುಟುಂಬಗಳ ಉತ್ಸಾಹವನ್ನು ಹೆಚ್ಚಿಸುವ ಮನರಂಜನಾ […]