ಉಡುಪಿ: ದಂಪತಿ ಡಾಟ್ ಕಾಮ್ ಉಚಿತ ನೋಂದಣಿ ಕಚೇರಿ ಉದ್ಘಾಟನೆ

ಉಡುಪಿ: ಭಾರತ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಇತ್ಯಾದಿ ದೇಶಗಳಲ್ಲಿರುವ ಉಡುಪಿ ಪುತ್ತಿಗೆ ಮಠದ ಶಾಖೆಗಳ ವಿಸ್ತೃತ ಸೇವಾ ಪ್ರಕಲ್ಪ ಜಾಗತಿಕ ಹಿಂದೂ ವಿವಾಹ ವೇದಿಕೆ ದಂಪತಿ ಡಾಟ್ ಕಾಮ್‌ಗೆ ಉಚಿತ ನೋಂದಣಿ ಕಚೇರಿಯನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಮತ್ತು ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಫೆ.12ರಂದು ರಾಜಾಂಗಣ ಸಮೀಪ ಉದ್ಘಾಟಿಸಿದರು. ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಸಮಾನ ಸಂಸ್ಕೃತಿಯ ವಿವಾಹ ಗಳು ಈ ಕಾಲದ ತುರ್ತು ಅಗತ್ಯವಾಗಿದ್ದು ಇದಕ್ಕಾಗಿಯೇ ದಂಪತಿ ಡಾಟ್ […]
ಫೆ.14ರಿಂದ ಫೆ.16: ಮಂಗಳೂರಿನಲ್ಲಿ ಡರ್ಟ್ ಪ್ರಿ-8 ಕಾರ್ ರೇಸ್, ಆಟೊ ವಸ್ತು ಪ್ರದರ್ಶನ.

ಮಂಗಳೂರು: ಮಂಗಳೂರು ಮೋಟರ್ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಅಬ್ಲೇಝ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರದಲ್ಲಿ ಫೆ.14ರಿಂದ 16ರ ವರೆಗೆ ಡರ್ಟ್ ಪ್ರಿ 8 ಕಾರ್ ರೇಸ್ ಮತ್ತು ಆಟೊ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಸೋಸಿಯೇಶನ್ ಅಧ್ಯಕ್ಷ ಸುಧೀರ್ ಬಿ. ಕೆ. ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ ರೇಸ್ ಹಲವು ವಿಭಾಗಗಳಲ್ಲಿ ನಡೆಯಲಿದ್ದು 150ರಷ್ಟು ಮಂದಿ ರಾಷ್ಟ್ರದ ವಿವಿಧೆಡೆಯಿಂದ ಭಾಗವಹಿಸಲಿದ್ದಾರೆ ಎಂದರು. ಫೆ.14ರಂದು ಫಿಝಾ ಬೈ ನೆಕ್ಸಸ್ ಮಾಲ್ ನಲ್ಲಿ ಸಂಜೆ 3:30ಕ್ಕೆ ಉದ್ಘಾಟನೆ […]
ಕುಂದಾಪುರ: ಸಹಕಾರ ಸಂಸ್ಥೆಯಿಂದ ಕೋಟ್ಯಂತರ ರೂ. ವಂಚನೆ ಆರೋಪ; ಪ್ರಕರಣ ದಾಖಲು.

ಕುಂದಾಪುರ: ಕುಂದಾಪುರ ಸೌಹಾರ್ದ ಕ್ರೆಡಿಕ್ ಕೋ ಆಪರೇಟಿವ್ ಲಿಮಿಟೆಡ್‌ನಿಂದ ಠೇವಣಿದಾರರಿಗೆ ಹಣವನ್ನು ವಾಪಾಸ್ಸು ನೀಡದೇ ಕೋಟ್ಯಂತರ ರೂ. ಮೋಸ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ, ನಿರ್ದೇಶಕರುಗಳಾದ ಪ್ರಕಾಶ ಲೋಬೋ, ಮಹೇಶ ಲಕ್ಷ್ಮಣ ಕೊತ್ವಾಲ, ವಿಠಲ, ಅವಿನಾಶ ಪಿಂಟೋ, ಕೆ.ರಾಜೇಶ ದೈವಜ್ಞ, ಎಚ್.ಮಹಾಬಲ, ರತ್ನಾಕರ, ದಯಾನಂದ, ಮರ್ವಿನ ಫೆರ್ನಾಂಡಿಸ್, ಸರೋಜ, ಸುಧಾಕರ, ಗೋಪಾಲ, ಡಾ.ದಿನಕರ ಸೇರಿಕೊಂಡು ಒಳಸಂಚು ರೂಪಿಸಿ ಸುಮಾರು 44 ಮಂದಿಯ ಒಟ್ಟು 7,25,24,831ರೂ. ಠೇವಣಿ ಹಣವನ್ನು […]
ಫೆ.17ರಂದು ಉಡುಪಿಯಿಂದ ನೇರವಾಗಿ ಪ್ರಯಾಗರಾಜ್‌ಗೆ ವಿಶೇಷ ರೈಲು ವ್ಯವಸ್ಥೆ.

ಉಡುಪಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಕರಾವಳಿ ಹಾಗೂ ಮಲೆನಾಡಿನ ಭಾಗದ ಭಕ್ತರಿಗೆ ಅನುಕೂಲವಾಗುವಂತೆ ಕೊಂಕಣ ರೈಲ್ವೆಯು ವಿವಿಧ ಪ್ರಾದೇಶಿಕ ರೈಲ್ವೆಯ ಸಹಯೋಗದೊಂದಿಗೆ ಫೆ.17ರಂದು ಉಡುಪಿಯಿಂದ ನೇರವಾಗಿ ಪ್ರಯಾಗ್‌ರಾಜ್‌ಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಮಹಾಕುಂಭ ಸ್ಪೆಷಲ್ ರೈಲು (ರೈಲು ನಂ.01192) ಫೆ.17ರ ಅಪರಾಹ್ನ 12:30ಕ್ಕೆ ಉಡುಪಿಯಿಂದ ಹೊರಟು ಕುಂದಾಪುರ, ಕಾರವಾರ, ಮಡಗಾಂವ್, ರತ್ನಗಿರಿ, ರೋಹಾ, ಕಲ್ಯಾಣ್, ನಾಸಿಕ್ ಮಾರ್ಗವಾಗಿ ತೆರಳಲಿದ್ದು, ಫೆ.19ರಂದು ಬೆಳಗ್ಗೆ 6:30ಕ್ಕೆ ಪ್ರಯಾಗ್‌ರಾಜ್ ಜಂಕ್ಷನ್ ತಲುಪಲಿದೆ. ಅಲ್ಲಿ ಜನರನ್ನು […]
ಉಡುಪಿ: ಫೆ.19 ರಂದು ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರೀಯ ಮರಾಠಪರಿಷತ್ತು (ರಿ) ಹಾಗೂ ಛತ್ರಪತಿ ಶಿವಾಜಿ ವಿವಿದ್ದೋದೇಶ ಸಹಕಾರ ಸಂಘ(ರಿ) ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆಯು ಫೆಬ್ರವರಿ 19 ರಂದು ಬೆಳಗ್ಗೆ 10 ಗಂಟೆಗೆ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ […]