ಮದ್ಯವಸನಿ ಪಾಲಕರ ಮಕ್ಕಳಲ್ಲಿ ಶಾಶ್ವತ ಖಿನ್ನತೆ, ಆತಂಕ

ಉಡುಪಿ: ಇಂದು ಕುಡಿತ ಎಂಬುದು ಪ್ರತಿಷ್ಠೆಯ ವಿಚಾರವಾಗಿದೆ. ಸಂಘಸಂಸ್ಥೆಗಳು ಪಾರ್ಟಿಯ ನೆಪದಲ್ಲಿ ಕುಡಿತವನ್ನು ಪ್ರೇರೆಪಿಸುತ್ತಿವೆ. ಇದರ ಪರಿಣಾಮ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಮದ್ಯವ್ಯಸನ ಹಬ್ಬಿದೆ ಎಂದು ಚಾಮರಾಜನಗರದ ದೀನಬಂಧು ಮಕ್ಕಳ ಮನೆಯ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಪ್ರೊ.ಜಯದೇವ್ ಜಿ.ಎಸ್. ಆತಂಕ ವ್ಯಕ್ತಪಡಿಸಿದರು. ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಮುಂಬಯಿ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಒನ್ ಗುಡ್ ಸ್ಟೆಪ್, ಮಣಿಪಾಲ ರೋಟರಿ ಕ್ಲಬ್ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಸಂಯುಕ್ತ ಆಶ್ರಯದಲ್ಲಿ ಮದ್ಯ […]
ಬ್ರಹ್ಮಾವರ ಮತ್ತು ಕುಂದಾಪುರದಲ್ಲಿ ಆಫೀಸು ಕೆಲಸಕ್ಕೆ ಬೇಕಾಗಿದ್ದಾರೆ.

ಉಡುಪಿ:ಬ್ರಹ್ಮಾವರ ಮತ್ತು ಕುಂದಾಪುರದ ಆಫೀಸ್ ನಲ್ಲಿ ಕೆಲಸ ಮಾಡಲು ಡಿಗ್ರಿ ಆಗಿರುವ ಹುಡುಗಿಯರು ಬೇಕಾಗಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ:9019112723
ಕುಡುಕ ಗಂಡನನ್ನು ಬಿಟ್ಟು ಮನೆ ಸಾಲ ವಸೂಲಾತಿಗೆ ಬರುತ್ತಿದ್ದ ಯುವಕನ ಜೊತೆ ಮಹಿಳೆ ಮದುವೆ.!

ಪಟನಾ: ಸದಾ ಕುಡಿದು ನಿಂದಿಸುತ್ತಿದ್ದ ಗಂಡನ ತೊರೆದು ಮಹಿಳೆಯೊಬ್ಬರು ಮನೆಗೆ ಸಾಲ ವಸೂಲಿಗೆ ಬರುತ್ತಿದ್ದ ಏಜೆಂಟ್ ಜೊತೆ ಪರಾರಿಯಾಗಿ ವಿವಾಹವಾದ ಘಟನೆ ಬಿಹಾರದಲ್ಲಿ ನಡೆದಿದೆ.ಈ ವಿವಾಹಕ್ಕೆ ಏಜೆಂಟ್ ಕುಟುಂಬ ಸಮ್ಮತಿಸಿದ್ದರೆ, ಮಹಿಳೆಯ ಕುಟುಂಬ ವಿರೋಧ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದೆ. ಏನಿದು ಘಟನೆ?: ಬಿಹಾರದ ಜಮುಯಿ ಜಿಲ್ಲೆಯ ನಿವಾಸಿ ನಕುಲ್ ಶರ್ಮಾರನ್ನು ಇಂದಿರಾ 2022ರಲ್ಲಿ ವಿವಾಹವಾದರು. ಆದರೆ ನಕುಲ್ ಸದಾ ಕುಡಿದು ಇಂದಿರಾಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ನಕುಲ್ ಮನೆಗೆ ಭೇಟಿ ನೀಡುತ್ತಿದ್ದ ಹಣಕಾಸು ಕಂಪನಿಯ ಲೋನ್ […]
ಮಂಗಳೂರು: ಯುವ ಪರಿವರ್ತಕರ ನೇಮಕಾತಿ- ಅರ್ಜಿ ಆಹ್ವಾನ

ಮಂಗಳೂರು: ಬೆಂಗಳೂರಿನ ಜನ ಆರೋಗ್ಯ ಸಂಸ್ಥೆ ಎಪಿಡೀಮಿಯಾಲಜಿ ವಿಭಾಗ, ನಿಮಾನ್ಸ್ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರಕಾರದ ಅನುದಾನಿತ ಯೋಜನೆಯಾದ ‘‘ ಯುವ ಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಯುವ ಸ್ಪಂದನ ಸೇವೆಗಳ ಸಮಗ್ರ ಅಭಿವೃದ್ದಿ ಮತ್ತು ಅನುಷ್ಠಾನ ಯೋಜನೆ ’’ ಯುವ ಸ್ಪಂದನ ಅಡಿಯಲ್ಲಿ ಯುವ ಪರಿವರ್ತಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತಾ ಮಾನದಂಡಗಳು : ಜಿಲ್ಲೆಗೆ ಯುವ ಪರಿವರ್ತಕರ ಸಂಖ್ಯೆ :ಕನಿಷ್ಠ 5 (ತಾಲೂಕಿಗೆ ಒಬ್ಬರಂತೆ) ( ಬಂಟ್ವಾಳ, ಸುಳ್ಯ, ಬೆಳ್ತಂಗಡಿ, […]
ಮಂಗಳೂರು: ಬೈಕ್ ಡಿವೈಡರ್ ಗೆ ಢಿಕ್ಕಿ; ಗಾಯಾಳು ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು.

ಕೊಣಾಜೆ: ಮುಡಿಪು ಸಮೀಪದ ಬೋಳಿಯಾರ್ ಬಳಿ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ವರ್ಕಾಡಿ ಗ್ರಾಮದ ನಲೆಂಗಿ ನಿವಾಸಿ ರೋಷನ್ ಮೋರಸ್ (34) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ರೋಷನ್ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯವಾಗಿತ್ತು ಎನ್ನಲಾಗಿದೆ. ಸ್ಥಳೀಯರು ತಕ್ಷಣ ಮಂಗಳೂರಿನ ಪಡೀಲಿನ ಆಸ್ಪತ್ರೆಗೆ ದಾಖಲಿಸಿದ್ದರು. […]