ಫೆ.13 ರಿಂದ ಹೆಬ್ಬೇರಿ ಉತ್ಸವದಲ್ಲಿ ಸಂಜೀವಿನಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ, ಸಾಂಸ್ಕೃತಿಕ ಕಲರವ

ಹೆಬ್ರಿ: ಹೆಬ್ಬೇರಿ ಉತ್ಸವದಲ್ಲಿ ಸಂಜೀವಿನಿ ವಸ್ತು ಪ್ರದರ್ಶನ ,ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ಕಲರವ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಹೆಬ್ರಿ ಗ್ರಾಮ ಪಂಚಾಯತ್ ಹೆಬ್ರಿ, ಹಾಗೂ ಹೆಬ್ಬೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ಬೇರಿ ಉತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಜೀವಿನಿ ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಬ್ರಿ ರಾಮ ಮಂದಿರದ ಮುಂಭಾಗದಲ್ಲಿ ದಿನಾಂಕ 13.02.2025 ರಿಂದ 15.02.2025 ರ […]
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳು ನಟ ವಿಶಾಲ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಉಡುಪಿ: ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲಿದ್ದ ತಮಿಳು ನಟ ವಿಶಾಲ್ ಅವರು ಕರ್ನಾಟಕ ಕರಾವಳಿಯ ದೈವ ದೇವರ ಮೊರೆ ಹೋಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಹರಿಪಾದೆಯ ಧರ್ಮದೈವ ಜಾರಂದಾಯ ದೈವಸ್ಥಾನಕ್ಕೆ ವಿಶಾಲ್ ಭೇಟಿ ನೀಡಿದ್ದಾರೆ. ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ತನ್ನ ಆರೋಗ್ಯ ಸಮಸ್ಯೆ ಬಗ್ಗೆ ಜಾರಂದಾಯ ದೈವದ ಬಳಿ ವಿಶಾಲ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಆ ಬಳಿಕ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ […]
ಫೆ.20ರಿಂದ ತಾಂಗದಗಡಿ ವೀರ ಮಾರುತಿ ವ್ಯಾಯಾಮ ಶಾಲೆಯ ದಶಮ ವರ್ಧಂತಿ, ಸುವರ್ಣ ಸಂಭ್ರಮ ಹಾಗೂ ತಾಲೀಮು ಗೊಬ್ಬುದ ಪಂಥ

ಉಡುಪಿ: ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಮತ್ತು ತರುಣ ಕಲಾ ವೃಂದ ಹಾಗೂ ಸುವರ್ಣ ಮಹೋತ್ಸವ ಸಮಿತಿ ತಾಂಗದಗಡಿ, ಉಡುಪಿ ಇದರ ಆಶ್ರಯದಲ್ಲಿ ಶ್ರೀ ಆಂಜನೇಯ ಸಹಿತ ಗಣಪತಿ ದೇವರ ಪುನರ್ ಪ್ರತಿಷ್ಠಾಪನೆಯ ದಶಮ ವರ್ಧಂತಿ ಹಾಗು ಸಂಸ್ಥೆಯ ಸುವರ್ಣ ಸಂಭ್ರಮವು ಫೆ.20 ರಿಂದ ಫೆ.22ರವರೆಗೆ ತಾಂಗದಗಡಿ ಆಂಜನೇಯ ಗುಡಿಯ ಬಯಲು ಮಂಟಪದಲ್ಲಿ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಗೌರವ ಸಲಹೆಗಾರ ಸದಾನಂದ ನಾಯಕ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, […]
ಕಾರ್ಕಳ: ಪರಿವರ್ತಿತ ಮನೆ ನಿವೇಶನಗಳು ಮಾರಾಟಕ್ಕಿದೆ.

ಕಾರ್ಕಳ: ಪರಿವರ್ತಿತ ಮನೆ ನಿವೇಶನಗಳು 10 ಸೆಂಟ್ಸ್. 12ಸೆಂಟ್ಸ್ ಮಾರಾಟಕ್ಕಿದೆ. ಲೂರ್ಡ್ಸ್ ಶಾಲೆಯ ಹತ್ತಿರ, ಕಣಜಾರ್ ಜಂಕ್ಷನ್, ಬೈಲೂರು ಗ್ರಾಮ, ಕಾರ್ಕಳ ತಾಲೂಕು. ರೂ.95000. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 81970 35017
ಪಡುಬಿದ್ರೆ: ಎಕ್ಸ್ ಪ್ರೆಸ್ ಬಸ್ ಚಾಲಕನಿಗೆ ಹಠಾತ್ ಎದೆನೋವು; ಹೆದ್ದಾರಿ ಪಕ್ಕದ ತೆಂಗಿನ ತೋಟಕ್ಕಿಳಿದು ನಿಂತ ಬಸ್

ಉಡುಪಿ: ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಪರಿಣಾಮ ಎಕ್ಸ್ ಪ್ರೆಸ್ ಬಸ್ ವೊಂದು ಹೆದ್ದಾರಿ ಪಕ್ಕದ ತೆಂಗಿನ ತೋಟಕ್ಕಿಳಿದು ನಿಂತ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯ ತೆಂಕ ಎರ್ಮಾಳ್ ಮಸೀದಿ ಬಳಿ ಸಂಭವಿಸಿದೆ. ಉಡುಪಿ ಕಡೆಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬಸ್ ಚಾಲಕ ಶಂಭು ಎಂಬುವವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಹಾಗೂ ಪ್ರಯಾಣಿಕರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಷಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ.