ಮಂದಾರ್ತಿ: ಫೆ.15 ರ ವರೆಗೆ ಮದ್ಯ ಮಾರಾಟ ನಿಷೇಧ

ಉಡುಪಿ: ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಪಂ ವ್ಯಾಪ್ತಿಯ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.15ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಗ್ಗುಂಜೆ ಗ್ರಾಪಂ ವ್ಯಾಪ್ತಿಯಲ್ಲಿ ಫೆ.12ರ ಬೆಳಗ್ಗೆ 6 ಗಂಟೆಯಿಂದ 15ರ ಬೆಳಗ್ಗೆ 6 6 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಕಾರ್ಕಳ: ಬ್ರೇಕ್ ವೈಫಲ್ಯದಿಂದ ವಾಹನ ಪಲ್ಟಿ; ಓರ್ವ ಮೃತ್ಯು.

ಕಾರ್ಕಳ : ಮಿನಿ ಟೆಂಪೋವೊಂದು ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾದ ಪರಿಣಾಮವಾಗಿ ಒರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾಳ ಮುಳ್ಳೂರು ಎಂಬಲ್ಲಿ ನಡೆದಿದೆ ಮೃತನನ್ನು ಮಹಾರಾಷ್ಟ್ರ ಮೂಲದ ಜಿತೇಂದರ್ (38) ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಪ್ರಯಾಣಿಕರೆಲ್ಲಾ ಜಾತ್ರಾ ವ್ಯಾಪಾರಿಗಳಾಗಿದ್ದು, ಕಳಸ ಜಾತ್ರೆ ಮುಗಿಸಿ ಮಂದಾರ್ತಿ ಜಾತ್ರೆಗೆ ಪ್ರಯಾಣಿಸುತ್ತಿದ್ದ ವೇಳೆ ಮಾಳ ಮುಳ್ಳೂರು ಘಾಟಿ ಕೆಳಗೆ ಪೆಟ್ರೋಲ್ ಬಂಕ್ ಬಳಿ ಬ್ರೇಕ್ ವೈಫಲ್ಯಕ್ಕೊಳಗಾಗಿ ವಾಹನ ಪಲ್ಟಿಯಾಗಿದೆ. ನಾಲ್ವರು ಗಂಭೀರ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿ […]
ಫೆ. 15 ರಂದು ಕುತ್ಯಾರಿನ ಶ್ರೀ ಶಕ್ತಿ ಮಹಾಗಣಪತಿ, ಶ್ರೀ ಮಹಾಕಾಳಿ, ಶ್ರೀ ಮಂತ್ರದೇವತೆ, ಶ್ರೀ ವರ್ತೇಶ್ವರೀ, ಶ್ರೀ ದೇವಿ ಕಲ್ಕುಡ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ

ಉಡುಪಿ: ಶ್ರೀ ಶಕ್ತಿ ಮಹಾಗಣಪತಿ, ಶ್ರೀ ಮಹಾಕಾಳಿ, ಶ್ರೀ ಮಂತ್ರದೇವತೆ, ಶ್ರೀ ವರ್ತೇಶ್ವರೀ, ಶ್ರೀ ದೇವಿ ಕಲ್ಕುಡ ಪುಣ್ಯಕ್ಷೇತ್ರ ಹೊಸಮನೆ, ಕುತ್ಯಾರು ಇಲ್ಲಿ ವಾರ್ಷಿಕ ನೇಮೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಫೆ. 15 ರಂದು ನಡೆಯಲಿದೆ. ಬೆಳಿಗ್ಗೆ ಗಂಟೆ 6.00ರಿಂದ 7.00ರ ತನಕ ತುಲಾಭಾರ ಸೇವೆ, ಮಧ್ಯಾಹ್ನ 12.00 ರಿಂದ ಮಹಾ ಅನ್ನಸಂತರ್ಪಣೆ ರಾತ್ರಿ ಶ್ರೀ ಮಂತ್ರದೇವತೆ, ಶ್ರೀ ವರ್ತೇಶ್ವರೀ, ಶ್ರೀ ದೇವಿ ಕಲ್ಕುಡ ದೈವಗಳ ನೇಮೋತ್ಸವ ಮರುದಿನ ಬೆಳಿಗ್ಗೆ 5.00 ರಿಂದ 8.00ರ ವರೆಗೆ ಜಟ್ಟಿಗ, […]
ಫೆ.13ರಂದು ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ, ಶೋಭಾಯಾತ್ರೆ

ಉಡುಪಿ: ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ವತಿಯಿಂದ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶೋಭಾಯಾತ್ರೆ ಇದೇ ಫೆ.13ರಂದು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ಹೇಳಿದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಮಹೋತ್ಸವದಲ್ಲಿ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗ ರಾವ್ ಸಾವಂತ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. […]
MSDC ಯೊಂದಿಗೆ ಒಳ್ಳೆ ಡಿಮ್ಯಾಂಡ್ ಇರುವ Nail Art ನಲ್ಲಿ ಮಿಂಚಲು ಇದೊಳ್ಳೆ ಅವಕಾಶ:ಕೂಡಲೇ ಹೆಸರು ನೊಂದಾಯಿಸಿ

ಮಣಿಪಾಲ: ಮಣಿಪಾಲದ ಓರೇನ್ ಇಂಟರ್ ನ್ಯಾಷನಲ್ ನಲ್ಲಿ Nail piolish ನಲ್ಲಿ ಕಾರ್ಯಾಗಾರವನ್ನು ಫೆ.15 ರಂದು ಬೆಳಿಗ್ಗೆ 10.30 ತಿಂದ ಮಧ್ಯಾಹ್ನ 1 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರವು nail art ಕುರಿತು ವಿಶೇಷ ಮಾಹಿತಿ ಮತ್ತು ತರಬೇತಿಯನ್ನು ನೀಡಲಿದೆ. ಈ ತರಬೇತಿಯು ಸ್ವ ಉದ್ಯೋಗಕ್ಕೆ ಪೂರಕವಾಗಲಿದೆ. ಯಾರು ಬೇಕಾದರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದ ಶುಲ್ಕ ರೂ.499. ಆಗಿದ್ದು, ಕೆಲವೇ ಕೆಲವು ಸೀಟುಗಳು ಲಭ್ಯವಿದೆ. ಆಸಕ್ತರು ಈ ಕೂಡಲೇ ಸಂಪರ್ಕಿಸಿ: 8123165068/ 8123163935Orane International, […]