ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಮೃತ್ಯು

ಮಂಗಳೂರು: ಎರಡು ದಿನಗಳ ಹಿಂದೆ ಸುಳ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಂಕನಾಡಿ ನಗರ ಪೊಲೀಸ್ ಠಾಣೆಯ (ಮಂಗಳೂರು ನಗರ) ಸಿಬ್ಬಂದಿ ಹರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.9 ರಂದು ಮೃತಪಟ್ಟಿದ್ದಾರೆ. ಮೂಲತಃ ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕು ಗಾಯನ ಹಳ್ಳಿ ಗ್ರಾಮದ ನಿವಾಸಿಯಾಗಿರುವ ಹರೀಶ್ ಬುಧವಾರ ಸುಳ್ಯ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಉಡುಪಿ: ವಲಸೆ ಕಾರ್ಮಿಕನ ಕೊಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

ಉಡುಪಿ: ಒಂದು ವರ್ಷ ಹಿಂದೆ ಕರಾವಳಿ ಜಂಕ್ಷನ್ ಬಳಿ ನಡೆದ ವಲಸೆ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳಕಲ್ ನಿವಾಸಿಗಳಾದ ಕನಕಪ್ಪ ಹನುಮಂತ ರೋಡಿ(46), ಯಮನೂರ ತಿಪ್ಪಣ್ಣ ಮಾರಣ ಬಸರಿ(24), ಯಮನೂರಪ್ಪಜೇಡಿ(26) ಬಂಧಿತ ಆರೋಪಿಗಳು. ಗುಜರಿ ಹೆಕ್ಕುತ್ತಿದ್ದ ಸುಮಾರು 45 ರಿಂದ 48 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರನ್ನು 2023ರ ಅ.16ರಂದು ರಾತ್ರಿ ವೇಳೆ ಹೋಟೇಲ್ ಕರಾವಳಿ ಬಳಿ ಹರಿತವಾದ ಆಯುಧದಿಂದ ಬಲಕೈಯನ್ನು […]
ಪವರ್ ಪರ್ಬ 2025 ಸಮಾರೋಪ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ’ಪವರ್ ಸ್ಟಾರ್’ ಬಿರುದು

ಉಡುಪಿ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ ಫ್ಲ್ಯಾಟ್ ಫಾರಂ ಆಫ್ ವುಮೆನ್ ಎಂಟರ್‌ಪ್ರೆನ್ಯೂರ್) ಆಶ್ರಯದಲ್ಲಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ‘ಪವರ್ ಪರ್ಬ 2025’ರ ಸಮಾರೋಪವು ರವಿವಾರ ನಡೆಯಿತು. ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಾದ ಮಿನುಷಾ ಗೋಪಾಲ್, ಕಾಂಚನ್, ಚೈತ್ರಾ ಬಿ.ಶೆಟ್ಟಿ ವಿದುಷಿ ಮಾನಸಿ ಸುಧೀರ್, ಸುಲತಾ ಕಾಮತ್, ಎ.ಲಕ್ಷ್ಮೀಬಾಯಿ, ಡಾ| ಗೌರಿ ಎಚ್. ಜೆ., ಡಾ| ಶ್ರುತಿ ಬಲ್ಲಾಳ್ ಅವರನ್ನು ‘ಪವರ್ ಸ್ಟಾರ್’ ಬಿರುದಿನೊಂದಿಗೆಸಮ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಹರೀಶ್ […]
ಹಿರಿಯಡಕ: ನಾಳೆ (ಫೆ.11) ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.) ಪಂಚನಬೆಟ್ಟಿನಲ್ಲಿ ನಾಡಿನ ಸುಭಿಕ್ಷೆಗಾಗಿ ಅಯುತ ಸಂಖ್ಯಾ “ಆರ್ಯಾರ್ಚನಮ್” ಧಾರ್ಮಿಕ ಸಭೆ – ಸಾಂಸ್ಕೃತಿಕ ವೈಭವ.

ಉಡುಪಿ: ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.) ಪಂಚನಬೆಟ್ಟು, ಹಿರಿಯಡಕ ಉಡುಪಿ ಇಲ್ಲಿ ನಾಡಿನ ಸುಭಿಕ್ಷೆಗಾಗಿ ಪ್ರಪ್ರಥಮ ಬಾರಿಗೆ ದೀಪ-ದೀವಟಿಗೆಗಳಿಂದ ಅಲಂಕೃತವಾದ ದಿವ್ಯ ಮಂಟಪದಲ್ಲಿ ಸುವಾಸಿನಿಯರಿಂದ ದುರ್ಗಾಪ್ರೀತ್ಯರ್ಥ ಅಯುತ ಸಂಖ್ಯಾ “ಆರ್ಯಾರ್ಚನಮ್” ಧಾರ್ಮಿಕ ಸಭೆ – ಸಾಂಸ್ಕೃತಿಕ ವೈಭವ, ಅಷ್ಟಾವಧಾನ ಸೇವಾಪೂರ್ವಕ ಪೂಜಾಕಾರ್ಯಕ್ರಮಗಳು, ಪೂಜ್ಯ ಡಾ. ಶ್ರೀ ಜಿ. ಭೀಮೇಶ್ವರ ಜೋಷಿ, ಧರ್ಮಕರ್ತರು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ, ಶ್ರೀಕ್ಷೇತ್ರ ಹೊರನಾಡು ಇವರ ದಿವ್ಯ ಉಪಸ್ಥಿತಿಯಲ್ಲಿ ಫೆ.11 ಮಂಗಳವಾರ ಸಮಯ ಸಂಜೆ 4:00 ರಿಂದ ಸ್ಥಳ: ಶ್ರೀ ದುರ್ಗಾಪರಮೇಶ್ವರೀ […]
ಮಲ್ಪೆ: ಮೀನುಗಾರಿಕೆ ಮಾಡುತ್ತಿರುವಾಗ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು.

ಮಲ್ಪೆ: ಮೀನುಗಾರಿಕೆ ಮಾಡುತ್ತಿರುವಾಗ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಕೇರಳದ ರಾಜನ್(54) ಎಂದು ಗುರುತಿಸಲಾಗಿದೆ. ಮಲ್ಪೆ ಬಾಲಕರ ಶ್ರೀರಾಮ ಭಜನಾಮಂದಿರದ ಎದುರು ಸಮುದ್ರದಲ್ಲಿ ಫೆ.7ರಂದು ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಅವರ ಮೃತದೇಹವು ಫೆ.8ರಂದು ಬೆಳಗಿನ ಜಾವ ಮಲ್ಪೆಪಡುಕೆರೆ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.