ಮಂಗಳೂರು: ‘ಭೀಮಾ ಜುವೆಲ್ಲರ್ಸ್’ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಫೆ.11ರಂದು ಸಂದರ್ಶನ

ಉಡುಪಿ: ಪ್ರತಿಷ್ಠಿತ “ಭೀಮಾ ಜುವೆಲ್ಲರ್ಸ್’ ಮಂಗಳೂರಿನ ಮಳಿಗೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಆಹ್ವಾನಿಸಲಾಗಿದೆ. ಇದೇ ಫೆ.11ರಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ “ಹೋಟೆಲ್ ದೀಪಾ ಕಂಫರ್ಟ್” ಎಂಜಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಇಲ್ಲಿ ಸಂದರ್ಶನ ನಡೆಯಲಿದೆ. ಸ್ಟೋರ್ಸ್ ಸೇಲ್ಸ್ ಹುದ್ದೆ (M/F) ಚಿಲ್ಲರೆ ಉದ್ಯಮದಲ್ಲಿ 1 ರಿಂದ 15 ವರ್ಷಕ್ಕಿಂತ ಮೇಲ್ಪಟ್ಟು ಅನುಭವ ಇರುವ ಅಭ್ಯರ್ಥಿಗಳು ಹಾಗೂ ಪ್ರೆಶರ್ಸ್ ಅಭ್ಯರ್ಥಿಗಳು ಕೂಡ ಭಾಗವಹಿಸಬಹುದು. ಬ್ರಾಂಚ್ ಅಕೌಂಟೆಂಟ್ (M)ಚಿಲ್ಲರೆ ಅಂಗಡಿ ಅಕೌಂಟೆಂಟ್ ಆಗಿ ಎರಡು ವರ್ಷಕ್ಕಿಂತ ಹೆಚ್ಚು […]
ಉಡುಪಿ: ಹಿರಿಯ ಕಾಂಗ್ರೆಸ್ ಮುಖಂಡ ಟಿ.ಗೋಪಾಲಕೃಷ್ಣ ಶೆಟ್ಟಿ ನಿಧನ

ಉಡುಪಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಟಿ. ಗೋಪಾಲಕೃಷ್ಣ ಶೆಟ್ಟಿ (77) ಅವರು ಇಂದು ನಿಧನ ಹೊಂದಿದರು. ಇವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ತಾಲೂಕು ಪಂಚಾಯತ್ ನ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಪ್ರಸುತ್ತ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗೌರವ ಸಲಹೆಗಾರರು, ಕಿರಣ್ ಮಿಲ್ಕ್ ಸಂಸ್ಥೆಯ ಮಾಲಕರು, ಹಲವಾರು ವರ್ಷಗಳ ಕಾಲ ನಿರಂತರ ಜನಸೇವೆ ಯಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಪಕ್ಷದ ಮುಂಖಡರು, ಬಂಧುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಡಾನ್ಸ್ ಮಾಡುತ್ತಲೇ ಯುವತಿ ಹೃದಯಾಘಾತದಿಂದ ಮೃತ್ಯು

ಇಂದೋರ್: ಸಹೋದರಿಯ ಮದುವೆ ಸಮಾರಂಭದ ವೇಳೆ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ ಯುವತಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಮೃತ ಯುವತಿಯನ್ನು ಇಂದೋರ್ ಮೂಲದ ಪರಿಣಿತ (23) ಎನ್ನಲಾಗಿದ್ದು, ಯುವತಿಯ ಕೊನೆಯ ಕ್ಷಣದ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಶನಿವಾರ(ಫೆ.8) ರಂದು ಸಂಭವಿಸಿದ್ದು, ಪರಿಣಿತ ತನ್ನ ಸಹೋದರಿಯ ಮದುವೆಯ ಸಂಭ್ರಮದಲ್ಲಿದ್ದಳು ಅಲ್ಲದೆ ಶನಿವಾರ ರಾತ್ರಿ ಸುಮಾರು ಒಂಬತ್ತು ಗಂಟೆಯ ಮದುವೆಯ ಹಳದಿ ಶಾಸ್ತ್ರ ನಡೆಯುತ್ತಿತ್ತು ಹಾಗಾಗಿ ಸಂಗೀತ […]
ಕೃತಕ ಬುದ್ಧಿಮತ್ತೆ ಕಲೆ ಮತ್ತು ಕಲಾವಿದರಿಗೆ ದೊಡ್ಡ ಸವಾಲು; ಡಾ.ಬಿ. ಭಾಸ್ಕರ ರಾವ್

ಉಡುಪಿ: ಕೃತಕ ಬುದ್ಧಿಮತ್ತೆ ಕಲೆ ಮತ್ತು ಕಲಾವಿದರಿಗೆ ದೊಡ್ಡ ಸವಾಲು ಆಗಿದೆ. ಆ ಸವಾಲನ್ನು ಸ್ವೀಕರಿಸಿ ಕಲಾವಿದರು ಹಾಗೂ ಕಲಾ ಸಂಸ್ಥೆಗಳು ಬೆಳೆಯಬೇಕು ಎಂದು ಲೇಖಕ ಡಾ.ಬಿ. ಭಾಸ್ಕರ ರಾವ್ ಹೇಳಿದರು. ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಪ್ರಜ್ಞಾನಂ ಟ್ರಸ್ಟ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯ ಭಾಷಾ ವಿಜ್ಞಾನಿ ನಾಡೋಜ ಪ್ರೊ.ಕೆ.ಪಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಲಾಂಛನವನ್ನು ಅನಾವರಣಗೊಳಿಸಲಾಯಿತು.ಸಾಹಿತಿ ಸುಧಾ ಆಡುಕಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, […]
ಬೈಂದೂರು: ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು.

ಬೈಂದೂರು: ಯಳಜಿತ್ ಗ್ರಾಮದ ಗೋವಿಂದ ಮಾಸ್ಟರ್ ಮನೆ ಸಮೀಪದ ತಿರುವು ರಸ್ತೆಯಲ್ಲಿ ಸ್ಕೂಟರ್ ಸ್ಟಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ನಾಗರಾಜ್ ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಮೃತರ ಪತ್ನಿ, ಸಹಸವಾರೆ ಆಶಾ ಎಂಬವರು ಗಾಯಗೊಂಡಿದ್ದರು. ಇವರಿಬ್ಬರು ಸ್ಕೂಟರಿನಲ್ಲಿ ಫೆ.3ರಂದು ಸಂಜೆ ಬೈಂದೂರು ಕಡೆಗೆ ಹೋಗುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.8ರಂದು ಮಧ್ಯಾಹ್ನ […]