ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಡುಪಿ ತಾಲೂಕು ವತಿಯಿಂದ ಮಣಿಪಾಲ ರಾಜೀವನಗರ ಸರಕಾರಿ ಶಾಲೆಗೆ ಬೆಂಚ್ ಡೆಸ್ಕ್ ಗಳ ಕೊಡುಗೆ.

ಉಡುಪಿ: ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳ್ತಂಗಡಿ ಇದರ ಉಡುಪಿ ತಾಲೂಕು ವತಿಯಿಂದ ಜ್ಞಾನ ದೀಪ ಕಾರ್ಯಕ್ರಮದಡಿಯಲ್ಲಿ ಇಂದು ರಾಜೀವನಗರ ಸರಕಾರಿ ಶಾಲೆಗೆ ಸುಮಾರು ರೂಪಾಯಿ 70,000 ಮೌಲ್ಯದ ಡೆಸ್ಕ್ ಮತ್ತು ಬೆಂಚುಗಳನ್ನು ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು 80 ಬಡಗುಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು ಕೇಶವ ಕೋಟ್ಯಾನ್ ರವರು ವಹಿಸಿದ್ದರು. ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ತಾಲೂಕು ಜನಜಾಗೃತಿ ಸದಸ್ಯ ಆತ್ರಾಡಿ ಸತ್ಯಾನಂದ ನಾಯಕ್ ಇವರು ಯೋಜನೆ ಹುಟ್ಟುಬಂಧ ದಾರಿ ಮತ್ತು […]

ಎಲ್ಲಾದ್ರೂ ಈ ಹಣ್ಣು ಸಿಕ್ಕಿದ್ರೆ  ಮಿಸ್ ಮಾಡದೇ ತಿನ್ನಿ:ದೇಹಕ್ಕೆ ಈ ಹಣ್ಣು ಪವರ್ ಫುಲ್

ಮಾರುಕಟ್ಟೆಯಲ್ಲಿ ನೂರಾರು ವಿದೇಶಿ ಹಣ್ಣು ಈಗೀಗ ಲಗ್ಗೆ ಇಡುತ್ತಿದೆ. ಆದರೆ ನಾವು ನಮ್ಮ ಊರಿನಲ್ಲಿ ಬೆಳೆಯುವ, ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ಕೆಲವು  ಹಣ್ಣುಗಳನ್ನೇ ಮರೆತುಬಿಡುತ್ತಿದ್ದೇವೆ. ಅವುಗಳಲ್ಲಿ  ಸ್ಟಾರ್ ಫ್ರೂಟ್ (ಧಾರೆಹುಳಿ) ಹಣ್ಣು ಕೂಡ ಒಂದು. ಈ ಹಣ್ಣು ನಮ್ಮಲ್ಲಿ ಹೊಸ ಶಕ್ತಿ ಚೈತನ್ಯವನ್ನು ತುಂಬಿಸುವಷ್ಟು ಪವರ್ ಫುಲ್. ಇದು ಹುಳಿಮಿಶ್ರಿತ ಸಿಹಿ ಹಣ್ಣಾಗಿದ್ದು, ಅನೇಕ ಪೋಷಕಾಂಶಗಳ ಆಗರ ಈ ಹಣ್ಣು. ಬಾಲಿವುಡ್‌ನ ಅತ್ಯಂತ ಫಿಟೆಸ್ಟ್ ದಿವಾ ಶಿಲ್ಪಾ ಶೆಟ್ಟಿ ಕೂಡ ಇದರ ಪೌಷ್ಟಿಕಾಂಶದ ಶಕ್ತಿಯನ್ನು ಶ್ಲಾಘಿಸುತ್ತಾರೆ. […]

ಮಣಿಪಾಲ್‌ ಮ್ಯಾರಥಾನ್ ನಲ್ಲಿ ಸಾವಿರಾರು ಜನ ಭಾಗಿ

ಮಣಿಪಾಲ: ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ನಡೆಸಿಕೊಂಡು ಬರುತ್ತಿರುವ ದೇಶದ ಪ್ರತಿಷ್ಠಿತ ಮಣಿಪಾಲ್ ಮ್ಯಾರಥಾನ್ ಏಳನೇ ಆವೃತ್ತಿ ಭಾನುವಾರ ನಡೆಯಿತು. ಭಾರತ ಸೇರಿದಂತೆ ಅನೇಕ ದೇಶಗಳ ಕ್ರೀಡಾಪಟುಗಳು ಈ ಮ್ಯಾರಥಾನ್ ನಲ್ಲಿ ಭಾಗಿಯಾದರು. 42kmಗಳ ಫುಲ್ ಮ್ಯಾರಥಾನ್ ಸಹಿತ ವಿವಿಧ ಹಂತಗಳಲ್ಲಿ ಸ್ಪರ್ಧಾಕೂಟ ನಡೆಯಿತು.ದೇಶದಲ್ಲೇ ಪ್ರತಿಷ್ಠಿತ ಎನಿಸಿರುವ ಮಣಿಪಾಲ್‌ ಮ್ಯಾರಥಾನ್ ಮುಂಜಾನೆ ಆರಂಭಗೊಂಡಿತು.ಸುಮಾರು 17,000ಕ್ಕೂ ಅಧಿಕ ಮಂದಿ ಓಟಗಾರರು ದೇಶವಿದೇಶಗಳಿಂದ ಈ ಮ್ಯಾರಥಾನ್ ನಲ್ಲಿ ಭಾಗಿಯಾದರು. ಆರೋಗ್ಯ ಮತ್ತು ಸದೃಢತೆಗಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಎಂಬ ಘೋಷ ವಾಕ್ಯದೊಂದಿಗೆ ಮ್ಯಾರಾಥಾನ್ […]

ಉಡುಪಿ: ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ಅಪಘಾತ

ಉಡುಪಿ: ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ಪಿಕ್ ಅಪ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಉಡುಪಿ ನಗರದ ಅಂಬಾಗಿಲಿನಲ್ಲಿ ಸಂಭವಿಸಿದೆ. ಬೆಳಗಾವಿಯಿಂದ ಮಂಜೇಶ್ವರಕ್ಕೆ ಅಕ್ರಮವಾಗಿ ಪಿಕ್ ಅಪ್ ವಾಹನದಲ್ಲಿ ಕೋಣ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅಪಘಾತಗೊಂಡ ವಾಹನ ಪರಿಶೀಲಿಸಿದಾಗ ಹಿಂಸಾತ್ಮಕವಾಗಿ ಕಟ್ಟಿಹಾಕಿದ್ದ 7 ಕೋಣಗಳು ಪತ್ತೆಯಾಗಿವೆ. ವಾಹನದಲ್ಲಿದ್ದ ಇಬ್ಬರ ಪೈಕಿ ಓರ್ವ ಪರಾರಿಯಾಗಿದ್ದು, ಓರ್ವನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಧನ್ವಂತರಿ ನರ್ಸಿಂಗ್ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ, ಪದವಿ ಪ್ರದಾನ

ಉಡುಪಿ: ಉಡುಪಿಯ ಸಂತೆಕಟ್ಟೆ ಯಲ್ಲಿರುವ ಧನ್ವಂತರಿ ನರ್ಸಿಂಗ್ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಮೂಳೆ ರೋಗಗಳ ಘಟಕದ ಮುಖ್ಯಸ್ಥರಾದ ಡಾ. ಮೋನಪ್ಪ ನಾಯ್ಕ್ ಪದವಿ ಪ್ರದಾನ ಮಾಡಿ, ಶಿಕ್ಷಣವು ನಿಂತ ನೀರಾಗದೆ ಜೀವನದುದ್ದಕ್ಕೂ ಬೇರೆ ಬೇರೆ ವಿಷಯಗಳ ಕುರಿತು ಜ್ಞಾನವನ್ನು ಸಂಪಾದಿಸುವಂತೆ ಜೊತೆಗೆ ರೋಗಿಗಳೊಂದಿಗೆ ಉತ್ತಮ ಸಂವಹನ ಕಾಯ್ದುಕೊಂಡು ಹೆತ್ತವರ ಹೆಸರನ್ನು ಉಳಿಸಿ ಕೀರ್ತಿವಂತರಾಗಿ ಬಾಳಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಶುಭಕೋರಿದರು ಹಾಗೂ ಪ್ರಶಾಂತವಾದ ವಾತಾವರಣದಲ್ಲಿ […]