ಕಿನ್ನಿಗೋಳಿ: ಟೆಂಪೋ ರಿಕ್ಷಾ- ಸ್ಕೂಟರ್ ನಡುವೆ ಅಪಘಾತ; ಸ್ಕೂಟರ್ ಸವಾರೆ ಮೃತ್ಯು.

ಮಂಗಳೂರು: ಕಿನ್ನಿಗೋಳಿಯಲ್ಲಿ ಟೆಂಪೋ ರಿಕ್ಷಾ- ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರೆ ಮಮತಾ ಬಂಗೇರ (42) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಕೆ.ಎಸ್. ರಾವ್ ನಗರ ತಿರುವಿನ ರಸ್ತೆಯಲ್ಲಿ ಗುರುವಾರ ಟೆಂಪೋ ರಿಕ್ಷಾವೊಂದು ಹಿಂಬದಿಯಿಂದ ಬಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇವರು ಮುಂಬಯಿಯಲ್ಲಿ ವಾಸವಿದ್ದು, ಕಳೆದ ಕೆಲವು ಸಮಯಗಳಿಂದ ಶಿಮಂತೂರು ಬಳಿ ನೂತನವಾಗಿ ಮನೆ ನಿರ್ಮಿಸಿಕೊಂಡು […]
ಸ್ವ-ಉದ್ಯೋಗಕ್ಕೆ ಮಹಿಳೆ ಒಲವು ತೋರಿದರೆ ಅದೇ ಗೆಲುವು: ಉಡುಪಿಯಲ್ಲಿ ಪವರ್ ಪರ್ಬದಲ್ಲಿ ಅಂಡಾರು ದೇವಿಪ್ರಸಾದ್ ಶೆಟ್ಟಿ

ಉಡುಪಿ: ಮಹಿಳೆಯರ ವಿದ್ಯಾಭ್ಯಾಸಕ್ಕೆ ತಕ್ಕಂತಹ ಪ್ರತಿಫಲ ಜಿಲ್ಲೆಯಲ್ಲಿ ಸಿಗುವಂತಾಗಬೇಕು. ಸ್ವ ಉದ್ಯೋಗದ ಬಗ್ಗೆ ಮಹಿಳೆಯರು ಹೆಚ್ಚಿನ ಒಲವು ತೋರಿಸಿ ಮಾದರಿಯಾಗಬೇಕು. ಇದರಿಂದ ಯಶಸ್ಸು ಕಂಡುಕೊಳ್ಳಲು ಸಾಧ್ಯವಿದೆ ಎಂದು ಎಫ್‌ಕೆಸಿಸಿಐ ನಿರ್ದೇಶಕ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಹೇಳಿದರು. ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ (ಫ್ಲ್ಯಾಟ್‌ಫಾರಂ ಆಫ್ ವುಮನ್ ಎಂಟರ್‌ಪ್ರೆನ್ಯೂರ್) ಆಶ್ರಯದಲ್ಲಿ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್, ಮೈದಾನದಲ್ಲಿ ನಡೆಯುತ್ತಿರುವ ‘ಪವರ್’ ಪರ್ಬ-2025’ರಲ್ಲಿ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳಾ ಉದ್ದಿಮೆದಾರರನ್ನು ಪವರ್ […]
ಮಹಿಳಾ ಶಕ್ತಿಯೊಂದಿಗೆ ಜಗಜಗ ಮಿಂಚಿತು ಉಡುಪಿಯ ಪವರ್ ಫುಲ್ “ಪವರ್ ಪರ್ಬ!

ಉಡುಪಿ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ (ಫ್ಲ್ಯಾಟ್‌ಫಾರಂ ಆಫ್ ವುಮನ್ ಎಂಟರ್‌ಪ್ರೆನ್ಯೂರ್) ಆಶ್ರಯದಲ್ಲಿ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್, ಮೈದಾನದಲ್ಲಿ ನಡೆಯುತ್ತಿರುವ ‘ಪವರ್’ ಪರ್ಬ-2025’ರಲ್ಲಿ ಶನಿವಾರ ಸಂಜೆ ಸಭಾ ಕಾರ್ಯಕ್ರಮ ,ಸಾಂಸ್ಕೃತಿಕ ಹಾಗು ಪವರ್ ಸಂಸ್ಥೆ ಸದಸ್ಯರಿಂದ ಫ್ಯಾಷನ್ ಶೋ ಕಾರ್ಯಕ್ರಮ ನಡೆಯಿತು . ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳಿಯರಿಗೋಸ್ಕರ ನಡೆಯುತ್ತಿರುವ ಪವರ್ ಪರ್ಬದಲ್ಲಿ ಕಳೆದೆರಡು ದಿನಗಳಿಂದ ಮಹಿಳಾ ಶಕ್ತಿಯ ಅನಾವರಣವಾಗುತ್ತಿದ್ದು, 150ಕ್ಕೂ ಹೆಚ್ಚು ಮಳಿಗೆಗಳು, ತರಹೇವಾರಿ ಖಾದ್ಯ ಉತ್ಪನ್ನಗಳು, ಆಟದ ವಿಭಾಗಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು […]
ಹೆಬ್ರಿ: ಅಡಿಕೆ ಮರ ತಲೆಗೆ ಬಿದ್ದು ಕೃಷಿಕ ಮೃತ್ಯು.

ಹೆಬ್ರಿ: ಒಣಗಿದ ಅಡಿಕೆ ಮರ ತುಂಡಾಗಿ ತಲೆಯ ಮೇಲೆ ಬಿದ್ದ ಪರಿಣಾಮ ಕೃಷಿಕರೊಬ್ಬರು ಮೃತಪಟ್ಟ ಘಟನೆ ವರಂಗ ಗ್ರಾಮದ ಮೂಡುಕುಡೂರು ಕೆಳಗಿನ ಮನೆ ಎಂಬಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ರಾಮ(62) ಎಂದು ಗುರುತಿಸಲಾಗಿದೆ. ಇವರು ಫೆ.4ರಂದು ತೋಟದಲ್ಲಿ ಒಣಗಿದ ಅಡಿಕೆ ಮರವನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಒಣಗಿದ ಅಡಿಕೆ ಮರವು ತುಂಡಾಗಿ ತಲೆಯ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಚಿಕಿತ್ಸೆಗೆ ಸ್ಪಂದಿಸದೆ ಫೆ.6ರಂದು ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. […]
ಬ್ರಹ್ಮಾವರ:ಯುವಕ ನಾಪತ್ತೆ

ಬ್ರಹ್ಮಾವರ: ಬಾರ್ಕೂರಿನಲ್ಲಿ ವಾಸವಾಗಿದ್ದ ಅಶೋಕ(39) ಎಂಬವರು ಫೆ.6ರಂದು ಬೆಳಗ್ಗೆ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋದವರು ಇದುವರೆಗೂ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.