ಸಿದ್ದಾಪುರದಲ್ಲಿ 8ನೇ ವರ್ಷದ ಮಕ್ಕಳ ಯಕ್ಷಗಾನ ಪ್ರದರ್ಶನ, ಗುರುವಂದನೆ

ಉಡುಪಿ: ಯಕ್ಷಗಾನವನ್ನು ಮಕ್ಕಳು ಕಲಿತರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂಬ ಆತಂಕವನ್ನು ಹೆತ್ತವರು ಬಿಡಬೇಕು. ಯಕ್ಷಗಾನವನ್ನು ಕಲಿತ ಮಕ್ಕಳು ಕಲಿಕೆಯಲ್ಲೂ ಅತೀ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಎಂಬುದನ್ನು ಮನಗಾಣಬೇಕು. ಯಕ್ಷಗಾನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಸಿದ್ಧಾಪುರದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರ ಆಶ್ರಯದಲ್ಲಿ ಕರ್ನಾಟಕ ಯಕ್ಸಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡ […]

ಉಡುಪಿ:ಉಡುಪಿ ಜಿಲ್ಲಾ ಮೂಲ ಗೇಣಿದಾರರ ಸಮಾವೇಶ

ಉಡುಪಿ:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಗೇಣಿ ಒಕ್ಕಲುಗಳ ಸಮಸ್ಯೆ ಅತ್ಯಂತ ಐತಿಹಾಸಿಕವಾಗಿದ್ದು ಸ್ವಾತಂತ್ರ್ಯ ದೊರಕಿ ಏಳುವರೆ ದಶಕಗಳ ಅನಂತರವೂ ಜೀವಂತವಾಗಿ ಮುಂದುವರಿದಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ಈ ರೀತಿಯ ಶೇೂಷಣೆ ನಿವಾರಿಸುವರೆ ರಾಜ್ಯ ಸರ್ಕಾರ 2011ರಲ್ಲಿ ಮೂಲಗೇಣಿದಾರರಿಗೆ ಭೂಮಿಯ ಸಂಪೂರ್ಣ ಒಡೆತನ ಖಾತ್ರಿ ಪಡಿಸುವ ಕಾಯಿದೆ ನಿರ್ಣಯಿಸಿ ರಾಷ್ಟ್ರಪತಿಗಳ ಅಂಕಿತವನ್ನು ಪಡೆದು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಹಿತಾಸಕ್ತಿ ಮೂಲಿದಾರರು ಹೈಕೋರ್ಟ್ ಮೆಟ್ಟಿಲು ಹತ್ತಿದರು.ಇದರ ಪರಿಣಾಮವಾಗಿ ರಾಜ್ಯ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ಮೂಲಗೇಣಿದಾರರ ಬೇಡಿಕೆ ನ್ಯಾಯಯುತವಾಗಿದೆ […]

ಬೆಳ್ತಂಗಡಿ: ಬೈಕ್ ಡಿಕ್ಕಿ- ಗಂಭೀರ ಗಾಯಗೊಂಡಿದ್ದ ಪಾದಾಚಾರಿ ಮೃತ್ಯು.

ಬೆಳ್ತಂಗಡಿ: ಮುಂಡಾಜೆ-ದಿಡುಪೆ ರಸ್ತೆಯ ಕಡಿರುದ್ಯಾವರ ಗ್ರಾಮದ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಶುಕ್ರವಾರ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಕಡಿರುದ್ಯಾವರದ ಅಂತರ ಲೋಕಯ್ಯ ಗೌಡ (65) ಎಂಬುವರಿಗೆ ದಿಡುಪೆ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿದ್ದು, ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಘಟನೆ ಬಗ್ಗೆ ಬೈಕ್ ಸವಾರ ಚರಣ್ ರಾಜ್ ವಿರುದ್ಧ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ: ಪ್ರಫುಲ್ಲ ಅನಂತ ಭಟ್ ನಿಧನ

ಉಡುಪಿ: ಉಡುಪಿಯ ಐತಾಳ್ ರಸ್ತೆ ನಿವಾಸಿ ಪ್ರಫುಲ್ಲ ಅನಂತ ಭಟ್ (90) ಅವರು ಅಲ್ಪ ಕಾಲದ ಅಸೌಖ್ಯದಿಂದ ಫೆಬ್ರವರಿ 7ರಂದು ಶುಕ್ರವಾರ ದೈವಾಧೀನರಾಗಿರುತ್ತಾರೆ. ಉಡುಪಿ ಅನಂತೇಶ್ವರ ದೇವಸ್ಥಾನದ ಅರ್ಚಕರ ಹಿರಿಯ ಅಕ್ಕ ಆದ ಇವರು ಮಗ, ಮಗಳು, ಮತ್ತು ಅಪಾರ ಬಂಧುಗಳನ್ನು ಅಗಲಿರುತ್ತಾರೆ.