ಉಡುಪಿ: ಫೆ.12 ರಂದು ಮಿನಿ ಉದ್ಯೋಗ ಮೇಳ

ಉಡುಪಿ: ಫೆಬ್ರವರಿ 12 ರಂದು ಬೆಳಗ್ಗೆ 10.30 ಕ್ಕೆ ನಗರದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ […]

ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ಗೆ ಹೋದ ಕಾರ್ಕಳದ ವ್ಯಕ್ತಿ ನಾಪತ್ತೆ

ಕಾರ್ಕಳ: ಕುಂಭಮೇಳಕ್ಕೆ ಪ್ರಯಾಗ್‌ರಾಜ್ ರೈಲಿನಲ್ಲಿ ಹೊರಟ ಕಾರ್ಕಳ ಕಾಬೆಟ್ಟು ವಿ.ಸಿ.ರೋಡ್‌ನ ಭಾರತ್ ಬೀಡಿ ಕಾಲನಿ ನಿವಾಸಿ ಸುಧಾಕರ್(69) ಎಂಬವರು ನಾಪತ್ತೆಯಾಗಿದ್ದಾರೆ. ಇವರು ಜ.25ರಂದು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದರು. ಹೋಗುವಾಗ ರೈಲು ಅದಲು ಬದಲಾಗಿ ಮಾರ್ಗ ತಪ್ಪಿರುವುದಾಗಿ ಮಗ ಶಿವಪ್ರಸಾದ್‌ಗೆ ತಿಳಿಸಿದ್ದರು. ಜ.27ರಂದು ಶಿವಪ್ರಸಾದ್ ಕರೆ ಮಾಡಿದಾಗ ಸುಧಾಕರ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಇವರು ಈವರೆಗೆ ವಾಪಾಸು ಮನೆಗೆ ಬಾರದೇ ನಾಪತ್ತೆ ಯಾಗಿದ್ದಾರೆ. […]

ಉಡುಪಿ: ಪ್ರತಿಷ್ಠಿತ ಆಯುರ್ವೇದ ತಯಾರಿಕಾ ಘಟಕಕ್ಕೆ ಯುವಕರು ಬೇಕಾಗಿದ್ದಾರೆ.

ಉಡುಪಿ:ಉಡುಪಿಯ ಕಲ್ಯಾಣಪುರದಲ್ಲಿರುವ ಪ್ರತಿಷ್ಠಿತ ಆಯುರ್ವೇದ ತಯಾರಿಕಾ ಘಟಕಕ್ಕೆ ಯುವಕರು ಬೇಕಾಗಿದ್ದಾರೆ.ವಿದ್ಯಾರ್ಹತೆ: ಎಸ್. ಎಸ್. ಎಲ್. ಸಿ ಉತ್ತೀರ್ಣ. ಹಾಗೂ ಕ್ವಾಲಿಟಿ ಕಂಟ್ರೋಲ್ ಇನ್ ಚಾರ್ಜ್ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ.ವಿದ್ಯಾರ್ಹತೆ: ಬಿಎಸ್ಸಿ ಇನ್ ಬೋಟಾನಿ ಜೂಲೋಜಿ ಮತ್ತು ಕೆಮಿಸ್ಟ್ರಿ (BSc in Botany Zoology and chemistry).PF, ESI ಸೌಲಭ್ಯವಿದೆ. ಉಡುಪಿ ಬ್ರಹ್ಮಾವರ ಆಸುಪಾಸಿನವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880029841,9480642125

ಉಡುಪಿ:’ಪವರ್ ಪರ್ಬ-2025′ ಅದ್ಧೂರಿಯಾಗಿ ಉದ್ಘಾಟನೆ.

ಉಡುಪಿ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆಯ ಆಶ್ರಯದಲ್ಲಿ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಪವರ್ ಪರ್ಬ-2025’ ಶುಕ್ರವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಪವರ್ ಪರ್ಬಕ್ಕೆ ಚಾಲನೆ ನೀಡಿದ ಪ್ರಗತಿಪರ ರೈತ ಮಹಿಳೆ ಡಾ. ಕವಿತಾ ಮಿಶ್ರಾ ಮಾತನಾಡಿ, ಜೀವನದಲ್ಲಿ ಬರುವ ಸಾವಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ. ಮಹಿಳೆಯವರು ಕೂಡ ಸಬಲರು ಎಂಬುದಕ್ಕೆ ಪವರ್ ಸಂಸ್ಥೆ ಸಾಧಿಸಿದ ಸಾಧನೆ ಉತ್ತಮ ಉದಾಹರಣೆ ಎಂದರು. ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ […]

ಉಡುಪಿ: ಇಂದು ಆತ್ರಾಡಿಯಲ್ಲಿ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಅದ್ದೂರಿ ಶುಭಾರಂಭ.

ಉಡುಪಿ: ಶಾಂಭವೀ ಬಿಲ್ಡರ್ಸ್ ಸಂಸ್ಥೆಯಿಂದ ಆತ್ರಾಡಿಯಲ್ಲಿ ನಿರ್ಮಾಣಗೊಂಡ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಫೆಬ್ರವರಿ 8 ರಂದು ಸಾಯಂಕಾಲ 4 ಗಂಟೆಗೆ ನೆರವೇರಲಿದೆ. ಸಭಾರಂಭದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಗಮಿಸಿ ಶುಭಾಶೀರ್ವಚನ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ, ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ […]