ವಕೀಲರು, ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳು; ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್

ಉಡುಪಿ: ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಕೀಲರು ಉತ್ತಮವಾಗಿ ವಾದ ಮಂಡಿಸಿದರೆ, ನ್ಯಾಯಾಧೀಶರು ಒಳ್ಳೆಯ ತೀರ್ಪು ನೀಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಹೇಳಿದ್ದಾರೆ. ಉಡುಪಿ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಉಡುಪಿ ವಕೀಲರ ಸಂಘದ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಕೀಲರ ವೃತ್ತಿಯಲ್ಲಿರುವಷ್ಟು ಸ್ವಾತಂತ್ರ್ಯ ಬೇರೆ ಯಾವುದೇ ವೃತ್ತಿಯಲ್ಲಿ ಇಲ್ಲ. ವಕೀಲರ ಬದುಕೇ ತುಂಬಾ ಬಹಳಷ್ಟು ಕಠಿಣವಾಗಿರುತ್ತದೆ. ತಮ್ಮ ಕುಂಟಬಕ್ಕಿಂತ ಬೇರೆ ಕುಟುಂಬಕ್ಕೆ […]

ಮಣಿಪಾಲ: ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ ಕಾರ್ಯಕ್ರಮಕ್ಕೆ ಚಾಲನೆ.

ಮಣಿಪಾಲ: ಸಹಯೋಗ ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ” ಕಾರ್ಯಕ್ರಮಕ್ಕೆ ಮಾಹೆ ಮಣಿಪಾಲದಲ್ಲಿ ಇಂದು ಚಾಲನೆ ನೀಡಲಾಯಿತು. ಇದು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಉಪಕ್ರಮವಾಗಿದ್ದು ಮಣಿಪಾಲ ಫೌಂಡೇಶನ್‌ನಿಂದ ಬೆಂಬಲಿತವಾಗಿದೆ. ಈ ಉಪಕ್ರಮವನ್ನು ಎಂಇಎಂಜಿ ಮುಖ್ಯಸ್ಥರು ಮತ್ತು ಮಾಹೆ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಂಜನ್ ಆರ್ ಪೈ ಅವರು ಅಧಿಕೃತವಾಗಿ ಉದ್ಘಾಟಿಸಿದರು, ಅವರು ಮೊದಲ ಕಿಟ್ ಅನ್ನು ಮಕ್ಕಳ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ. ಲೆಸ್ಲಿ ಎಡ್ವರ್ಡ್ ಎಸ್ ಲೆವಿಸ್, ಎಂಡೋಕ್ರಿನೊಲೊಜಿ […]

ಮನೆ, ಕಟ್ಟಡ ಕಟ್ಟುವ ಪ್ಲಾನ್ ಇದ್ರೆ ನಿಮ್ಮೊಂದಿಗಿದೆ ಜಾನ್ವಿ ಕನ್ಸ್ಟ್ರಕ್ಷನ್ ’: ನಿಮ್ಮ ಕನಸಿನ ಯೋಜನೆಗಳಿಗೆ ಒಂದು ಬೆಸ್ಟ್ ಆಯ್ಕೆ

ಉಡುಪಿ: ಮನೆ, ಕಟ್ಟಡ ಕಟ್ಟುವ ಪ್ಲಾನ್ ನಿಮಗಿರಬಹುದು. ಆದರೆ ಈ ಕುರಿತು ಸರಿಯಾದ ಮಾಹಿತಿ, ಮಾರ್ಗದರ್ಶನ ಇಲ್ಲದೇ ನಿಮಗೆ ಚಿಂತೆಯಾಗಿರಬಹುದು. ನಿಮಗೆ ಒಂದೊಳ್ಳೆ ಮಾಹಿತಿ, ಮಾರ್ಗದರ್ಶನ ನೀಡಲು ಜಾನ್ವಿ ಕನ್ಟ್ರಕ್ಷನ್ ನಿಮ್ಮೊಂದಿಗಿದೆ. ನಿಮ್ಮ ಕನಸಿನ ಸೌಧ ಕಟ್ಟುವ ಆಸೆಯನ್ನು ಸುಲಭವಾಗಿ ನನಸು ಮಾಡುತ್ತೆ ಜಾನ್ವಿ ಕನ್ಸ್ಟ್ರಕ್ಷನ್. ಹೌದು, ಮನೆ, ಕಟ್ಟಡ ನಿರ್ಮಾಣದಲ್ಲಿ ಉದ್ಯಾವರದ ಜಾನ್ವಿ ಕನ್ಟ್ರಕ್ಷನ್ ಒಳ್ಳೆಯ ಹೆಸರು. ಕರಾವಳಿಯಾದ್ಯಂತ ಪ್ರಸಿದ್ಧಿ ಪಡೆದಿರುವ ‘ಜಾನ್ವಿ ಕನ್ಟ್ರಕ್ಷನ್’ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದರಲ್ಲಿ ಎಂದಿಗೂ ಒಂದು ಹೆಜ್ಜೆ ಮುಂದೆ. […]

ಬೈಂದೂರು:ಟಿಪ್ಪರ್ ಮರಕ್ಕೆ ಢಿಕ್ಕಿ: ಚಾಲಕ ಸ್ಥಳದಲ್ಲಿಯೇ ಮೃತ್ಯು

ಬೈಂದೂರು: ಟಿಪ್ಪರ್ ಲಾರಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗೋಳಿಹೊಳೆ ಗ್ರಾಮದ ಹುಣಚನಿ ಜನ್ಮನೆ ಎಂಬಲ್ಲಿ ಫೆ.6ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಚಾಲಕ ಚಂದ್ರ ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ಮಹಾಬಲ ಹಾಗೂ ಹನುಮಂತ ತೀವ್ರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತೊಡು ಕಡೆಯಿಂದ ಎಲ್ಲೂರಿಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯು ತಿರುವು ಇಳಿಜಾರು ರಸ್ತೆಯಲ್ಲಿ ಚಾಲಕನ ಹತೋಟಿ ತಪ್ಪಿತಗ್ಗು ಪ್ರದೇಶಕ್ಕೆ ಹೋಗಿ ಮರಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ […]

ಶಿವಮೊಗ್ಗ: ತರಬೇತಿ ವೇಳೆ ಕೈಕೊಟ್ಟ ಪ್ಯಾರಾಚೂಟ್; ವಾಯುಪಡೆ ಅಧಿಕಾರಿ ಮೃತ್ಯು.

ಶಿವಮೊಗ್ಗ: ತರಬೇತಿ ವೇಳೆ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್‌ ತೆರೆದುಕೊಳ್ಳದೇ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ ವಾಯುಪಡೆಯ ವಾರೆಂಟ್‌ ಅಧಿಕಾರಿ ಜಿ.ಎಸ್. ಮಂಜುನಾಥ್‌ (36) ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್‌ ಡ್ರಾಪ್‌ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್‌ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್‌ ಬಳಸಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದರು. ಆದರೆ ವಾರಂಟ್‌ ಆಫೀಸರ್‌ ಜಿ.ಎಸ್. ಮಂಜುನಾಥ್‌ ನಾಪತ್ತೆಯಾಗಿದ್ದರು. ಶೋಧ […]