ಉಡುಪಿಯ ಆತ್ರಾಡಿಯಲ್ಲಿ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಲೋಕಾರ್ಪಣೆ.

ಉಡುಪಿ: ಕರಾವಳಿಯ ಜನಪ್ರಿಯ ಸಂಸ್ಥೆಯಾದ ಶಾಂಭವೀ ಬಿಲ್ಡರ್ಸ್ ಸಂಸ್ಥೆಯಿಂದ ಆತ್ರಾಡಿಯಲ್ಲಿ ನಿರ್ಮಾಣಗೊಂಡ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಫೆಬ್ರವರಿ 8 ರಂದು ಅದ್ದೂರಿಯಿಂದ ನಡೆಯಿತು. ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಇಚ್ಚಾಶಕ್ತಿ ಗಟ್ಟಿಯಾಗಿದ್ದರೆ ಸಾಧನೆ ಮಾಡುವ ಬದ್ದತೆಯಿದ್ದರೆ ದೊಡ್ಡ ಸಾಧಕರಾಗಬಹುದು, ಉದ್ಯೋಗದಾತರಾಗಬಹುದು ಎನ್ನುವುದಕ್ಕೆ ಶಾಂಭವಿ ಸಂಸ್ಥೆ ಕಟ್ಟಿ […]
ಕಟಪಾಡಿ: ತ್ರಿಶಾ ವಿದ್ಯಾ ಪಿಯು ಕಾಲೇಜು : ಭವೀಷ್ ಬೆಳ್ಳಾರೆಗೆ ರಾಜ್ಯ ಮಟ್ಟದಲ್ಲಿ ಕವನ ವಾಚನದಲ್ಲಿ ಪ್ರಥಮ ಸ್ಥಾನ

ಕಟಪಾಡಿ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಚಿತ್ರದುರ್ಗ ಇವರ ಸಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ 2024-25 ಚಿತ್ರದುರ್ಗದಲ್ಲಿ ಫೆಬ್ರವರಿ 07ರಂದು ನಡೆದ ಕವನ ವಾಚನ ಸ್ಪರ್ಧೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಭವಿಷ್ ಬೆಳ್ಳಾರೆ ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರು ಸುಳ್ಯ ತಾಲೂಕು ಬೆಳ್ಳಾರೆ ತಡಗಜೆಯ ರುಕ್ಮಯ್ಯ ಮೂಲ್ಯ […]
ಶ್ರೀ ಕ್ಷೇತ್ರ ಕರ್ಮಾರು ಜಿಡ್ಡು ಪುಣ್ಯಕ್ಷೇತ್ರ ಕುತ್ಯಾರು ನಲ್ಲಿ ರಂಗಪೂಜೆ ಸಂಪನ್ನ

ಶ್ರೀ ಶಕ್ತಿ ಮಹಾಗಣಪತಿ ಶ್ರೀ ಮಹಾಕಾಳಿ, ಶ್ರೀ ಮಂತ್ರದೇವತೆ, ಶ್ರೀ ದೇವಿ ಕಲ್ಕುಡ, ಪುಣ್ಯ ಕ್ಷೇತ್ರದಲ್ಲಿ ತಾ 07/02/2025 ಬೆಳಿಗ್ಗೆ ಮಹಾಕಾಳಿ ಅಮ್ಮನವರಿಗೆ ಸೀಮಂತ ಭಕ್ಷೆ ಸೇವೆ ಹಾಗೂ ಮಹಾಕಾಳಿ ದರ್ಶನ ಸೇವೆ ಹಾಗೂ ಮಹಾಗಣಪತಿ ಹಾಗೂ ಮಹಾಕಾಳಿ ಅಮ್ಮನವರಿಗೆ ರಂಗ ಪೂಜೆ ಕ್ಷೇತ್ರದ ಧರ್ಮದರ್ಶಿ ಭೋಜ ಪಾತ್ರಿ ಕುತ್ಯಾರು ಇವರ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಯಿತು. ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾದ ಶಿವರಾಜ್ ಪಾತ್ರಿ, ಚಂದ್ರಶೇಖರ್ ಮೂಲ್ಯ ನ್ಯಾಯವಾದಿ ಜಗದೀಶ್ ಮೂಲ್ಯ ಕುತ್ಯಾರು ಹಾಗೂ ಭಕ್ತಾದಿಗಳು […]
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು : ಉಡುಪಿ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ

ಉಡುಪಿ: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರಣಂಕಿಲ ಶ್ರೀಶ ನಾಯಕ್, […]
ಉಡುಪಿ: ಫೆ.12ರಂದು ಸುನಾಗ್ ಆಸ್ಪತ್ರೆಯ ‘ಉಚಿತ ಆರೋಗ್ಯ ತಪಾಸಣೆ ಶಿಬಿರ’

ಉಡುಪಿ: ಸುನಾಗ್ ಆರ್ಥೋಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸುನಾಗ್ ಸುಸ್ಥಿರ ಆರೋಗ್ಯದ ಅಡಿಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಹೆರಿಗೆ ಹಾಗೂ ಸ್ತ್ರಿರೋಗ ವಿಭಾಗದ ಸಹಯೋಗದಲ್ಲಿ “ಉಚಿತ ಆರೋಗ್ಯ ಶಿಬಿರ, ಸಂಧಿವಾತ ಮತ್ತು ಮೂಳೆ ಸಾಂದ್ರತೆ ಹಾಗೂ ಮಹಿಳಾ ಆರೋಗ್ಯ ತಪಾಸಣೆ ಶಿಬಿರ” ಇದೇ ಫೆ.12ರಂದು ಬೆಳಿಗ್ಗೆ 9ರಿಂದ 6ಗಂಟೆಯವರೆಗೆ ಕುಂಜಿಬೆಟ್ಟುವಿನ ಶಾರದ ಕಲ್ಯಾಣಮಂಟಪದ “ಜ್ಞಾನ ಮಂದಿರ”ದಲ್ಲಿ ನಡೆಯಲಿದೆ ಎಂದು ಸುನಾಗ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ನರೇಂದ್ರಕುಮಾರ್ ಎಚ್.ಎಸ್. ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ […]